"ಮುಟ್ಟಾದ ವೇಳೆ ಡ್ಯಾನ್ಸ್, ಸ್ಟಂಟ್ ಮಾಡೋದು ಕಷ್ಟ"; ನಟಿ ಶ್ರುತಿ ಹಾಸನ್

By ಫಿಲ್ಮಿಬೀಟ್ ಡೆಸ್ಕ್

'ಋತುಚಕ್ರ' ಅನ್ನೋದು ಪ್ರತಿಯೊಬ್ಬ ಹೆಣ್ಣು ಅನುಭವಿಸುವ ಒಂದು ಪ್ರಕ್ರಿಯೆ. ಪ್ರತಿ ತಿಂಗಳು ಹೆಣ್ಣಿನಲ್ಲಾಗುವ ಸಹಜ ಶಾರೀಕ ಪ್ರಕ್ರಿಯೆ. ಈ ಸಮಯದಲ್ಲಿ ಹೆಣ್ಣು ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿದಿರುತ್ತಾಳೆ. ಒಬ್ಬೊಬ್ಬರ ದೇಹ ಒಂದು ರೀತಿಯ ಪ್ರತಿಕ್ರಿಯಿಸುತ್ತದೆ. ಈ ಸಮಯದಲ್ಲಿ ಕೆಲವರಿಗೆ ಕೆಲಸ ಮಾಡಲು ಆಗದಷ್ಟು ನಿತ್ರಾಣರಾಗಿರುತ್ತಾರೆ. ಕೆಲವರು ಈ ವಿಷಯವನ್ನು ಹೇಳಿಕೊಳ್ಳುವುದಕ್ಕೆ ಮುಜುಗರ ಪಡುತ್ತಾರೆ.

ಕೆಲವೇ ವರ್ಷಗಳ ಹಿಂದೆ ಹೆಣ್ಣಿನ 'ಋತುಚಕ್ರ'ದ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳಿದ್ದವು. ಆದ್ರೀಗ ಕಾಲದ ಬದಲಾದಂತೆ ಈ ವಿಷಯದ ಬಗ್ಗೆ ಮಹಿಳೆಯರು ಓಪನ್ ಆಗಿ ಮಾತಾಡುವುದಕ್ಕೆ ಶುರು ಮಾಡಿದ್ದಾರೆ. 'ಋತುಚಕ್ರ'ದ ಸಮಯದಲ್ಲಿ ತಮ್ಮಲ್ಲಾಗುವ ದೈಹಿಕ ಹಾಗೂ ಮಾನಸಿಕ ತೊಳಲಾಟದ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಹುಭಾಷಾ ನಟಿ ಶ್ರುತಿ ಹಾಸನ್ ಕೂಡ ತಮ್ಮ ಕಷ್ಟಗಳನ್ನು ಹಂಚಿಕೊಂಡಿದ್ದಾರೆ.

Shruti Haasan revealed that during periods performing dances stunts for movies is hard

ಶ್ರುತಿ ಹಾಸನ್ ಮಾಡರ್ನ್ ಮಹಿಳೆ. ತನಗೆ ಅನಿಸಿದ್ದನ್ನು ನೇರವಾಗಿ ಹೇಳಿಕೊಳ್ಳುವ ನಟಿ. ತಮಿಳು ಚಿತ್ರರಂಗದ ದಿಗ್ಗಜ ಕಮಲ್ ಹಾಸನ್ ಪುತ್ರಿಯಾಗಿದ್ದರೂ, ತನ್ನದೇ ಪ್ರತಿಭೆಯಿಂದ ಬೆಳೆದು ನಿಂತಿರೋ ನಟಿ. ತಮಿಳು, ತೆಲುಗು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸುವ ಶ್ರುತಿ ಹಾಸನ್ ಇತ್ತೀಚೆಗೆ ಶೂಟಿಂಗ್ ಸಮಯದಲ್ಲಿ ಮುಟ್ಟಾದರೆ, ಏನೆಲ್ಲ ಸಮಸ್ಯೆ ಆಗುತ್ತೆ ಅನ್ನೋದನ್ನು ಓಪನ್ ಹೇಳಿಕೊಂಡಿದ್ದಾರೆ.

ಶ್ರುತಿ ಹಾಸನ್ ಮಾತಾಡುವಾಗ ಫಿಲ್ಟರ್ ಹಾಕಿಕೊಂಡು ಮಾತಾಡುವುದಿಲ್ಲ. ತನಗೆ ಏನು ಹೇಳಬೇಕು ಅಂತ ಅನಿಸುತ್ತದೆಯೋ ಅದನ್ನು ನೇರವಾಗಿ ಹೇಳಿಬಿಡುವ ಜಾಯಮಾನ ಅವರದ್ದು. ಇದು ಈ ಹಿಂದೆಯೂ ಸಾಕಷ್ಟು ಬಾರಿ ಸಾಬೀತಾಗಿದೆ. ಈಗ 'ಋತುಚಕ್ರ'ದ ಬಗ್ಗೆ ತಮ್ಮ ಅನುಭವಗಳೇನು ಅನ್ನೋದನ್ನು ನೇರವಾಗಿ ಹೇಳಿಕೊಂಡಿದ್ದಾರೆ. ಅದೂ ಸಿನಿಮಾ ಶೂಟಿಂಗ್ ಸಮಯದಲ್ಲಿ ಮುಟ್ಟಾದರೆ, ಏನೆಲ್ಲ ಸಂಕಷ್ಟಗಳು ಎದುರಾಗುತ್ತವೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಶ್ರುತಿ ಹಾಸನ್ ಸಿನಿಮಾದಲ್ಲಿ ಕೆಲಸ ಮಾಡುವ ಮಹಿಳೆಯರು ಎದುರಿಸುವ ಸವಾಲುಗಳ ಬಗ್ಗೆ ಮಾತಾಡಿದ್ದಾರೆ. ಅದರಲ್ಲೂ 'ಋತುಚಕ್ರ'ದ ಸಮಯದಲ್ಲಿ ಮಹಿಳೆಯರು ಏನೆಲ್ಲ ಕಷ್ಟಗಳನ್ನು ಎದುರಿಸಬೇಕಾಗುತ್ತೆ? ಇಂತಹ ಸಮಯದಲ್ಲಿ ಅವರ ಮನ:ಸ್ಥಿತಿ ಹೇಗಿರುತ್ತೆ? ಅನ್ನುವುದನ್ನು ತಮ್ಮನ್ನೇ ಉದಾಹರಣೆಯಾಗಿಟ್ಟುಕೊಂಡು ವಿವರಿಸಿದ್ದಾರೆ.

Shruti Haasan revealed that during periods performing dances stunts for movies is hard

"ನಾನು ಇಂದಿಗೂ ಋತುಚಕ್ರದ ಸಮಯದಲ್ಲಿ ಕೆಟ್ಟ ಸೆಳೆತದಿಂದ ಬಳಲುತ್ತಿದ್ದೇನೆ. ಈ ಸಮಯದಲ್ಲಿ ನಟಿಯರಿಗೆ ಡ್ಯಾನ್ಸ್ ಮಾಡುವುದು, ಸ್ಟಂಟ್‌ಗಳನ್ನು ಮಾಡುವುದು ಕಷ್ಟ. ಈ ಸಮಯದಲ್ಲಿ ನಟಿಯರು ಸುಂದರವಾಗಿ ಕಾಣುವುದಿಲ್ಲ. ಈ ವೇಳೆ ಅವರು ಉಬ್ಬಿದ ಹಾಗೆ ಕಾಣಿಸಿಕೊಳ್ಳುತ್ತಾರೆ." ಎಂದು ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಇಂತಹ ಸಮಯದಲ್ಲಿ ನಟಿಯರ ಜೊತೆ ಸೆನ್ಸಿಬಲ್ ಆಗಿ ವರ್ತನೆ ಮಾಡುವುದು ಉತ್ತಮ ಎಂದಿದ್ದಾರೆ. ಹಾಗೇ ಈ ಸಮಯದಲ್ಲಿ ಮಹಿಳೆ ತನ್ನ ದೇಹದೊಂದಿಗೆ ಹೋರಾಡುತ್ತಿರುತ್ತಾಳೆ. ಇತ್ತ ದೇಹ ತನ್ನ ಕೆಲಸವನ್ನು ಮಾಡುತ್ತಿರುತ್ತೆ. ಕೆಲವರು ಮುಟ್ಟಾದಾಗ ಆರಾಮಾಗಿರುತ್ತಾರೆ. ಮತ್ತೆ ಕೆಲವರು ನೋವು ಅನುಭವಿಸುತ್ತಾರೆ ಎಂದಿದು ಹೇಳಿದ್ದಾರೆ.

ಇನ್ನು ಶ್ರುತಿ ಹಾಸನ್ ಸಿನಿಮಾ ವಿಷಯಕ್ಕೆ ಬರೋದಾದರೆ, 2023ಯಲ್ಲಿ 'ಸಲಾರ್' ರಿಲೀಸ್ ಆಗಿದೆ. 'ಸಲಾರ್' ಪಾರ್ಟ್ 2 ಆರಂಭ ಆಗಬೇಕಿದೆ. ಇನ್ನೊಂದು ಕಡೆ ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾದಲ್ಲಿಯೂ ನಟಿಸುತ್ತಿರುವ ಬಗ್ಗೆ ಸುದ್ದಿ ಒಡಾಡುತ್ತಿದೆ.

More from Filmibeat

English summary
Shruti Haasan about shooting movies during periods
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X