ಸ್ಟಾರ್ ನಿರ್ದೇಶಕನ ಜೊತೆ ಶ್ರುತಿ ಹಾಸನ್ ರೊಮ್ಯಾನ್ಸ್; ವಿಡಿಯೋ ವೈರಲ್

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಕ್ರೇಜ್ ಮತ್ತೆ ಶುರುವಾಗಿದೆ. ಇತ್ತೀಚೆಗೆ 'ಸಲಾರ್' ಚಿತ್ರದಲ್ಲಿ ನಾಯಕಿಯಾಗಿ ಆಕೆ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಆಕೆಗೆ ಹೆಚ್ಚು ಅವಕಾಶ ಇರಲಿಲ್ಲ. ಒಂದೆರಡು ಸನ್ನಿವೇಶಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಸೀಕ್ವೆಲ್‌ನಲ್ಲಿ ಹೆಚ್ಚು ಅವಕಾಶ ಸಿಗುತ್ತಾ ಕಾದು ನೋಡಬೇಕಿದೆ.

ನಟಿಯಾಗಿ ಮಾತ್ರವಲ್ಲದೇ ಶ್ರುತಿ ಸಂಗೀತ ನಿರ್ದೇಶಕಿಯಾಗಿ ಗಾಯಕಿಯಾಗಿಗೂ ಗೆದ್ದಿದ್ದಾರೆ. ಇತ್ತೀಚೆಗೆ ಬಂದ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಅನೌನ್ಸ್‌ಮೆಂಟ್ ಟೀಸರ್‌ನಲ್ಲಿ ಆಕೆ ಹಾಡಿದ್ದರು. ಹಾಗಾಗಿ ಚಿತ್ರದ ನಾಯಕಿರಲ್ಲಿ ಒಬ್ಬರಾಗಿ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಇನ್ನು ಸಾಕಷ್ಟು ಆಲ್ಬಮ್‌ ವೀಡಿಯೋಗಳಲ್ಲಿ ಕಮಲ್ ಪುತ್ರಿ ಮಿಂಚಿದ್ದಾರೆ.

Shruti Haasan romance with Director video Goes viral

ಸದ್ಯ 'ಇನಿಮೇಲ್' ಎನ್ನುವ ಆಲ್ಬಮ್‌ ಸಾಂಗ್‌ನಲ್ಲಿ ಶ್ರುತಿ ಕಾಣಿಸಿಕೊಂಡಿದ್ದಾರೆ. ಅದರ ಟೀಸರ್ ರಿಲೀಸ್ ಆಗಿ ವೈರಲ್ ಆಗುತ್ತಿದೆ. ಕಮಲ್ ಹಾಸನ್‌ ಒಡೆತನದ ರಾಜ್‌ ಕಮಲ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಈ ಆಲ್ಬಮ್ ಸಾಂಗ್ ನಿರ್ಮಾಣವಾಗುತ್ತಿದೆ. ವಿಶೇಷ ಅಂದರೆ ಸಾಂಗ್‌ನಲ್ಲಿ ಶ್ರುತಿ ಹಾಸನ್ ಜೊತೆ ನಿರ್ದೇಶಕ ಲೋಕೇಶ್ ಕನಕರಾಜ್ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಕ್ಯಾಮರಾ ಹಿಂದೆ ನಿಲ್ಲುತ್ತಿದ್ದ ಲೋಕೇಶ್ ಇದೀಗ ಕ್ಯಾಮರಾ ಮುಂದೆ ದರ್ಶನ ಕೊಟ್ಟಿದ್ದಾರೆ.

'ಇನಿಮೇಲ್' ಆಲ್ಬಮ್ ಸಾಂಗ್‌ನಲ್ಲಿ ನಿರ್ದೇಶಕ ಲೋಕೇಶ್ ಕನಕರಾಜ್ ಗೆಸ್ಟ್ ಅಪಿಯರೆನ್ಸ್ ಮಾಡ್ತಿಲ್ಲ. ಲೀಡ್ ರೋಲ್‌ನಲ್ಲಿ ಶ್ರುತಿ ಹಾಸನ್ ಜೊತೆ ಹೆಜ್ಜೆ ಹಾಕಿದ್ದಾರೆ. ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ಸಾಂಗ್ ಕಂಪೋಸ್ ಮಾಡಲಾಗಿದ್ದು ಸ್ಟೈಲಿಶ್ ಲುಕ್‌ನಲ್ಲಿ ಲೋಕೇಶ್ ದರ್ಶನ ಕೊಟ್ಟಿದ್ದಾರೆ. ಸಾಂಗ್‌ಗೆ ಕಮಲ್ ಹಾಸನ್ ಸಾಹಿತ್ಯ ಬರೆದಿದ್ದು ಶ್ರುತಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

'KGF' ಖ್ಯಾತಿಯ ಕನ್ನಡ ಛಾಯಾಗ್ರಾಹಕ ಭುವನ್ ಗೌಡ 'ಇನಿಮೇಲ್' ಆಲ್ಬಮ್ ಸಾಂಗ್‌ ಸೆರೆಹಿಡಿಸಿದ್ದಾರೆ. ತಮಿಳಿನಲ್ಲಿ 'ಕೈದಿ', 'ಮಾಸ್ಟರ್', 'ವಿಕ್ರಂ', 'ಲಿಯೋ' ರೀತಿಯ ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟ ಲೋಕೇಶ್ ಕನಕರಾಜ್ ಈ ಆಲ್ಬಮ್‌ ಸಾಂಗ್‌ ಮೂಲಕ ಬೆಳ್ಳಿ ಪರದೆ ಪರಿಚಿತರಾಗುತ್ತಿದ್ದಾರೆ. ಒಟ್ನಲ್ಲಿ 'ಇನಿಮೇಲ್' ಸಾಂಗ್‌ ಪ್ರೋಮೊಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಲೋಕೇಶ್- ಶ್ರುತಿ ಕೆಮೆಸ್ಟ್ರಿ ನೋಡಿ ಕೆಲವರು ಫಿದಾ ಆಗಿದ್ದಾರೆ.

ಸದ್ಯ ನಿರ್ದೇಶಕ ಲೋಕೇಶ್ ಕನಕರಾಜ್ ತಮ್ಮ ಮುಂದಿನ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ತಲೈವಾ 171 ಸಿನಿಮಾ ಸ್ಟ್ರಿಪ್ಟ್ ಹಾಗೂ ಪ್ರೀ ಪ್ರೊಡಕ್ಷನ್ ವರ್ಕ್ ನಡೀತಿದೆ. ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

ಇನ್ನು ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್ ಭಾರೀ ಕುತೂಹಲ ಮೂಡಿಸಿದೆ. ಆದರೆ ತಲೈವಾ 171 ಸಿನಿಮಾ ಮಾತ್ರ ಈ ಯೂನಿವರ್ಸ್‌ನಲ್ಲಿ ಇರಲ್ಲ ಎಂದು ಹೇಳಿದ್ದಾರೆ. 'ಕೈದಿ', 'ವಿಕ್ರಂ' ಹಾಗೂ 'ಲಿಯೋ' ಒಂದಕ್ಕೊಂದು ಲಿಂಕ್ ಇಟ್ಟು ಲೋಕೇಶ್ ಕಥೆಗಳನ್ನು ಹೇಳಿದ್ದಾರೆ. ಮುಂದೆ ಈ ಚಿತ್ರದ ಪಾತ್ರಗಳನ್ನು ಒಟ್ಟಿಗೆ ಸೇರಿಸಿ ಮತ್ತಷ್ಟು ಸಿನಿಮಾಗಳನ್ನು ಪ್ಲ್ಯಾನ್ ಮಾಡಿದ್ದಾರೆ. ಕೊನೆಯದಾಗಿ ಒಂದು ದೊಡ್ಡ ಚಿತ್ರದಲ್ಲಿ ಕಾರ್ತಿ, ಕಮಲ್, ವಿಜಯ್, ಸೂರ್ಯ ಎಲ್ಲರನ್ನೂ ಒಟ್ಟಿಗೆ ಸೇರಿಸುವ ಲೆಕ್ಕಾಚಾರ ನಡೀತಿದೆ.

ಶ್ರುತಿ ಹಾಸನ್ ಈ ಹಿಂದೆ ಲಂಡನ್ ಮೂಲದ ನಟ ಮೈಕೆಲ್ ಕೊರ್ಸೇಲ್ ಎಂಬಾತನ ಜೊತೆ ಡೇಟಿಂಗ್ ನಡೆಸಿದ್ದರು. 2019ರಲ್ಲಿ ಬ್ರೇಕ್‌ಅಪ್ ಆಗಿ ಇಬ್ಬರು ದೂರಾಗಿದ್ದರು. ಬಳಿಕ ವಿಷ್ಯುವಲ್ ಆರ್ಟಿಸ್ಟ್ ಸಂತಾನು ಹಜಾರಿಕಾ ಎಂಬುವವನ ಜೊತೆ ಲವ್ವಿ ಡವ್ವಿ ಆರಂಭಿಸಿದ್ದರು. ಸದ್ಯ ಇಬ್ಬರು ಲಿವ್‌ಇನ್‌ ರಿಲೇಶನ್‌ಶಿಪ್‌ನಲ್ಲಿದ್ದಾರೆ.

More from Filmibeat

English summary
Super response for Shruti Haasan's new album song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X