For Quick Alerts
  ALLOW NOTIFICATIONS  
  For Daily Alerts

  ಬಾಯ್ ಫ್ರೆಂಡ್ ಜೊತೆ ಲಾಕ್ ಡೌನ್ ಕಳೆಯುತ್ತಿರುವ ಶ್ರುತಿ ಹಾಸನ್; ಫೋಟೋ ವೈರಲ್

  |

  ದಕ್ಷಿಣ ಭಾರತೀಯ ಸಿನಿಮಾರಂಗ ಖ್ಯಾತ ನಟಿ ಶ್ರುತಿ ಹಾಸನ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ತನಗೆ ಅಪ್ಪ-ಅಮ್ಮ ಸಹಾಯ ಮಾಡುತ್ತಿಲ್ಲ, ನನ್ನ ಮನೆಯ ಬಿಲ್ ಗಳನ್ನು ನಾನೇ ಕಟ್ಟಬೇಕು ಎಂದು ಹೇಳಿ ಸುದ್ದಿಯಾಗಿದ್ದ ಶ್ರುತಿ ಈಗ ಬಾಯ್ ಫ್ರೆಂಡ್ ವಿಚಾರಕ್ಕೆ ಮತ್ತೆ ಸದ್ದು ಮಾಡುತ್ತಿದ್ದಾರೆ.

  ಕೊರೊನಾ ಲಾಕ್ ಡೌನ್ ನ ಈ ಸಮಯದಲ್ಲಿ ಬಾಯ್ ಫ್ರೆಂಡ್ ಜೊತೆ ಲಾಕ್ ಆಗಿರುವ ಬಗ್ಗೆ ಶ್ರುತಿ ಬಹಿರಂಗ ಪಡಿಸಿದ್ದಾರೆ. ಕೊರೊನಾ ಭೀಕರತೆಯ ಈ ಸಮಯದಲ್ಲಿ ಬಹುತೇಕ ರಾಜ್ಯಗಳು ಲಾಕ್ ಡೌನ್ ಮಾಡಿವೆ. ನಟಿ ಶ್ರುತಿ ಹಾಸನ್ ಈ ವರ್ಷ ಲಾಕ್ ಡೌನ್ ಅನ್ನು ಬಾಯ್ ಫ್ರೆಂಡ್ ಸಂತನು ಹಜಾರಿಕ ಜೊತೆ ಕಳೆಯುತ್ತಿದ್ದಾರೆ. ಮುಂದೆ ಓದಿ...

  ಅಪ್ಪ-ಅಮ್ಮ ಸಹಾಯ ಮಾಡುತ್ತಿಲ್ಲ, ನಾನು ಕೆಲಸ ಮಾಡಲೇಬೇಕು; ಆರ್ಥಿಕ ಸಂಕಷ್ಟದಲ್ಲಿ ಶ್ರುತಿ ಹಾಸನ್ಅಪ್ಪ-ಅಮ್ಮ ಸಹಾಯ ಮಾಡುತ್ತಿಲ್ಲ, ನಾನು ಕೆಲಸ ಮಾಡಲೇಬೇಕು; ಆರ್ಥಿಕ ಸಂಕಷ್ಟದಲ್ಲಿ ಶ್ರುತಿ ಹಾಸನ್

  ಬೆಸ್ಟಿ ಜೊತೆ ಲಾಕ್ ಡೌನ್ ಎಂದ ಶ್ರುತಿ

  ಬೆಸ್ಟಿ ಜೊತೆ ಲಾಕ್ ಡೌನ್ ಎಂದ ಶ್ರುತಿ

  ಬಾಯ್ ಫ್ರೆಂಡ್ ಜೊತೆ ಲಾಕ್ ಡೌನ್ ಸಮಯ ಕಳೆಯುತ್ತಿರುವ ಬಗ್ಗೆ ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಗೆಳೆಯ ಸಂತನು ಜೊತೆ ಆಪ್ತವಾಗಿರುವ ಫೋಟೋವನ್ನು ಹಂಚಿಕೊಂಡಿರುವ ಶ್ರುತಿ 'ನನ್ನ ಬೆಸ್ಟಿ ಸಂತನು ಹಜಾರಿಕ ಜೊತೆೆ ಲಾಕ್ ಆಗಿದ್ದೀನಿ' ಎಂದು ಬರೆದುಕೊಂಡಿದ್ದಾರೆ.

  ಮೈಕೆಲ್ ಜೊತೆ ಪ್ರೀತಿಯಲ್ಲಿದ್ದ ಶುತ್ರಿ

  ಮೈಕೆಲ್ ಜೊತೆ ಪ್ರೀತಿಯಲ್ಲಿದ್ದ ಶುತ್ರಿ

  ನಟಿ ಶ್ರುತಿ ಹಾಸನ್ ಈ ಮೊದಲು ಬ್ರಿಟನ್ ಮೂಲಕ ವ್ಯಕ್ತಿ ಮೈಕೆಲ್ ಕೋರ್ಸೆಲ್ ಜೊತೆ ಪ್ರೀತಿಯಲ್ಲಿದ್ದರು. ಮೈಕೆಲ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ಬಳಿಕ ಶ್ರುತಿ ದೆಹಲಿ ಮೂಲಕ ಡೂಡಲ್ ಕಲಾವಿದ ಸಂತನು ಹಜಾರಿಕ ಜೊತೆ ಡೇಟಿಂಗ್ ನಲ್ಲಿದ್ದಾರೆ. ಆಗಾಗ ಸಂತನು ಜೊತೆ ಇರುವ ಫೋಟೋಗಳನ್ನು ಶ್ರುತಿ ಹಂಚಿಕೊಳ್ಳುತ್ತಿರುತ್ತಾರೆ.

  ಕ್ಯೂಟಿಸ್ ಎಂದ ತಮನ್ನಾ

  ಕ್ಯೂಟಿಸ್ ಎಂದ ತಮನ್ನಾ

  ಸದ್ಯ ಲಾಕ್ ಡೌನ್ ಕೂಡ ಒಟ್ಟಿಗೆ ಕಳೆಯುತ್ತಿದ್ದಾರೆ. ಶ್ರುತಿ ಹಾಸನ್ ಶೇರ್ ಮಾಡಿರುವ ಫೋಟೋಗೆ ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದ ಗಣ್ಯರು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ತಮನ್ನಾ ಕಾಮೆಂಟ್ ಮಾಡಿ ಕ್ಯೂಟಿಸ್ ಎಂದು ಹೇಳಿದ್ದಾರೆ.

  ಹೊಸ ಬಾಯ್ ಫ್ರೆಂಡ್ ಜೊತೆ ಬರ್ತಡೇ ಆಚರಿಸಿಕೊಂಡ ಶ್ರುತಿ ಹಾಸನ್?ಹೊಸ ಬಾಯ್ ಫ್ರೆಂಡ್ ಜೊತೆ ಬರ್ತಡೇ ಆಚರಿಸಿಕೊಂಡ ಶ್ರುತಿ ಹಾಸನ್?

  Ragini Dwivedi, Corona Vaccination ಹಾಕಿಸಿಕೊಂಡ್ಮೇಲೆ ಏನಾಗುತ್ತೆ?ಎಲ್ಲೆಲ್ಲಿ ಸಿಗುತ್ತೆ ವ್ಯಾಕ್ಸಿನೇಷನ್?
  ಸಲಾರ್ ಚಿತ್ರದಲ್ಲಿ ಶ್ರುತಿ ನಟನೆ

  ಸಲಾರ್ ಚಿತ್ರದಲ್ಲಿ ಶ್ರುತಿ ನಟನೆ

  ಶ್ರುತಿ ಹಾಸನ್ ಸದ್ಯ ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಬಾರಿಗೆ ಶ್ರುತಿ, ಪ್ರಭಾಸ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಲಾರ್ ದಕ್ಷಿಣ ಭಾರತದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿದೆ.

  English summary
  Actress Shruti Haasan spends lockdown time with her boyfriend Santanu Hazarika.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X