For Quick Alerts
  ALLOW NOTIFICATIONS  
  For Daily Alerts

  ಅಪ್ಪ-ಅಮ್ಮ ಸಹಾಯ ಮಾಡುತ್ತಿಲ್ಲ, ನಾನು ಕೆಲಸ ಮಾಡಲೇಬೇಕು; ಆರ್ಥಿಕ ಸಂಕಷ್ಟದಲ್ಲಿ ಶ್ರುತಿ ಹಾಸನ್

  |

  ಸೆಲೆಬ್ರಿಟಿಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ, ಅದರಲ್ಲೂ ಹಣಕಾಸಿನ ವಿಚಾರಕ್ಕೆ ಬಂದರೆ ಕೋಟಿ ಕೋಟಿ ಹೊಂದಿರುತ್ತಾರೆ, ಆರಾಮಾಗಿ ಕುಳಿತು ತಿಂದರೆ ಸಾಕು ಎಂದೇ ಬಹುತೇಕರು ಅಂದುಕೊಂಡಿರುತ್ತಾರೆ. ಆದರೆ ಎಲ್ಲಾ ಸೆಲೆಬ್ರಿಟಿಗಳು ಹಾಗಿರಲ್ಲ. ಕೆಲವರು ತೀರ ಕಷ್ಟ ಮತ್ತು ಆರ್ಥಿಕ ಸಂಕಷ್ಟದಿಂದ ಒದ್ದಾಡುತ್ತಿರುತ್ತಾರೆ. ಹಣಕ್ಕಾಗಿ ಅವರು ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ ಇರುತ್ತೆ.

  ಇದೀಗ ಭಾರತೀಯ ಸಿನಿಮಾರಂಗದ ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಕೂಡ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರಂತೆ. ಇದು ಅಚ್ಚರಿ ಎನಿಸಿದರು ನಿಜ. ಖ್ಯಾತ ನಟನ ಮಗಳಾಗಿ ಆರ್ಥಿಕ ಸಂಕಷ್ಟನಾ? ಅಂತ ಪ್ರಶ್ನೆ ಮೂಡಬಹುದು. ಆದರೆ ಶ್ರುತಿ ಹಣಕಾಸಿನ ಸಮಸ್ಯೆಯಲ್ಲಿದ್ದು ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆಯಂತೆ. ಈ ಬಗ್ಗೆ ಸ್ವತಃ ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ. ಮುಂದೆ ಓದಿ..

  ಚುನಾವಣೆಯಲ್ಲಿ ಸೋತ ಕಮಲ್ ಹಾಸನ್‌ಗೆ ಪುತ್ರಿ ಶ್ರುತಿ ಹಾಸನ್ ಹೇಳಿದ್ದೇನು?ಚುನಾವಣೆಯಲ್ಲಿ ಸೋತ ಕಮಲ್ ಹಾಸನ್‌ಗೆ ಪುತ್ರಿ ಶ್ರುತಿ ಹಾಸನ್ ಹೇಳಿದ್ದೇನು?

  ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ ಇದೆ

  ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ ಇದೆ

  ಈ ಬಗ್ಗೆ ಮಾತನಾಡಿರುವ ಶ್ರುತಿ 'ನಾನು ಮರೆಮಾಚಲು ಸಾಧ್ಯವಿಲ್ಲ. ನನಗೆ ಸಾಂಕ್ರಾಮಿಕ ರೋಗ ಕೊನೆಗೊಳ್ಳುವ ವರೆಗೂ ಕಾಯಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ಆರೋಗ್ಯದ ಬಗ್ಗೆ ಭಯದ ನಡುವೆಯೂ ಚಿತ್ರೀಕರಣ ಮಾಡುವುದು ಕಠಿಣವಾಗಿದೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಕೆಲಸ ಪ್ರಾರಂಭ ಮಾಡುವುದು ಮುಖ್ಯವಾಗಿದೆ' ಎಂದಿದ್ದಾರೆ.

  ಲಾಕ್ ಡೌನ್ ಮುಗಿಯುತ್ತಿದ್ದಂತೆ ಕೆಲಸ ಶುರುಮಾಡಿತ್ತೇನೆ

  ಲಾಕ್ ಡೌನ್ ಮುಗಿಯುತ್ತಿದ್ದಂತೆ ಕೆಲಸ ಶುರುಮಾಡಿತ್ತೇನೆ

  'ನಾನು ಸುಳ್ಳು ಹೇಳಲು ಹೋಗುವುದಿಲ್ಲ. ಆದರೆ ನಾನು ಕೆಲಸಕ್ಕೆ ಹೋಗಲೇ ಬೇಕಾಗಿದೆ. ಏಕೆಂದರೆ ನಾನು ಆರ್ಥಿಕ ಸಂಕಷ್ಟದಲ್ಲಿದ್ದೇನೆ' ಎಂದು ಹೇಳಿದ್ದಾರೆ. 'ಚಿತ್ರೀಕರಣ ಪ್ರಾರಂಭವಾಗುತ್ತಿದ್ದಂತೆ ನಾನು ಭಾಗಿಯಾಗುತ್ತೇನೆ. ನನ್ನ ಎಲ್ಲಾ ವೃತ್ತಿಪರ ಬದ್ಧತೆಗಳನ್ನು ಪೂರ್ಣಗೊಳಿಸಬೇಕು' ಎಂದಿದ್ದಾರೆ ಶ್ರುತಿ.

  ಪ್ರಭಾಸ್ 'ಸಲಾರ್' ಸಿನಿಮಾದಲ್ಲಿ ನಟಿ ಶ್ರುತಿ ಹಾಸನ್ ಪಾತ್ರ ರಿವೀಲ್ಪ್ರಭಾಸ್ 'ಸಲಾರ್' ಸಿನಿಮಾದಲ್ಲಿ ನಟಿ ಶ್ರುತಿ ಹಾಸನ್ ಪಾತ್ರ ರಿವೀಲ್

  ತಂದೆ-ತಾಯಿ ಸಹಾಯ ಮಾಡಲ್ಲ

  ತಂದೆ-ತಾಯಿ ಸಹಾಯ ಮಾಡಲ್ಲ

  'ನಾನು ಬಿಲ್ ಗಳನ್ನು ಪಾವತಿಸಬೇಕು. ನನ್ನ ಬಿಲ್ ಗಳನ್ನು ನಾನೆ ಪಾವತಿಸುತ್ತೇನೆ, ಹಾಗಾಗಿ ಕೆಲಸಕ್ಕೆ ಹೋಗಲೆ ಬೇಕಾಗಿದೆ. ನಾನು ಸ್ವತಂತ್ರ ಮಹಿಳೆ. ನನ್ನ ಮಿತಿಗಳನ್ನು ನಾನು ಹೊಂದಿದ್ದೇನೆ. ನನ್ನ ತಂದೆ-ತಾಯಿ ನನಗೆ ಸಹಾಯ ಮಾಡುತ್ತಿಲ್ಲ' ಎಂದು ಶ್ರುತಿ ಹಾಸನ್ ಹೇಳಿದ್ದಾರೆ.

  ಬಾಹುಬಲಿ ಜೋಡಿಯನ್ನು ಮತ್ತೆ ಒಂದು ಮಾಡಿದ ಪ್ರಶಾಂತ್ ನೀಲ್ | Filmibeat Kannada
  ಸಾಂಕ್ರಾಮಿಕ ರೋಗದ ಮೊದಲು ಮನೆ ಖರೀದಿಸಿದೆ

  ಸಾಂಕ್ರಾಮಿಕ ರೋಗದ ಮೊದಲು ಮನೆ ಖರೀದಿಸಿದೆ

  'ಒಳ್ಳೆಯದಾಗಿರಬಹುದು ಅಥವ ಕೆಟ್ಟದಾಗಿರಬಹುದು ಎಲ್ಲಾ ನಿರ್ಧಾರಗಳನ್ನು ನಾನೆ ತೆಗೆದುಕೊಳ್ಳುತ್ತೇನೆ. ಕೊರೊನಾ ಸಾಂಕ್ರಾಮಿಕ ರೋಗದ ಮೊದಲು ದೊಡ್ಡ ವಸ್ತುಗಳನ್ನು ಅಂದರೆ ಕಾರು, ಮನೆ ಖರೀದಿ ಮಾಡದೆ ಇರುವ ಕೆಲವು ಸ್ಮಾರ್ಟ್ ಜನರಿದ್ದಾರೆ. ಆದರೆ ನಾನು ಮನೆ ಖರೀದಿಸಿದೆ. ಹಾಗಾಗಿ ನನಗೆ ಆರ್ಥಿಕ ನಿರ್ಭಂದಗಳಿವೆ' ಎಂದು ಶ್ರುತಿ ತನ್ನ ಆರ್ಥಿಕ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ.

  English summary
  Actress Shruti Haasan talks about her financial crisis. She says I don't have Daddy for mommy helping me.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X