For Quick Alerts
  ALLOW NOTIFICATIONS  
  For Daily Alerts

  ನಟ ಸಿದ್ಧಾರ್ಥ್ ನಿಧನ ಎಂದು ತೋರಿಸಿದ ಯೂಟ್ಯೂಬ್, ಗಾಬರಿಯಾದ ಫ್ಯಾನ್ಸ್

  |

  ಬಾಯ್ಸ್, ಬೊಮ್ಮರಿಲ್ಲು, ಓಯ್, ಓ ಮೈ ಫ್ರೆಂಡ್, ಜಿಗರ್‌ಥಂಡಾ ಅಂತಹ ಸಿನಿಮಾಗಳ ಮೂಲಕ ಜನರ ಗಮನ ಸೆಳೆದಿರುವ ತಮಿಳು ನಟ ಸಿದ್ಧಾರ್ಥ್ ನಿಧನರಾಗಿದ್ದಾರೆ ಎಂಬ ಸುದ್ದಿ ಯೂಟ್ಯೂಬ್‌ನಲ್ಲಿ ವರದಿಯಾಗಿದೆ. ಇದನ್ನು ಕಂಡ ಅಭಿಮಾನಿಗಳು ಒಂದು ಕ್ಷಣ ಗಾಬರಿಯಾಗಿದ್ದಾರೆ.

  ಕೇಂದ್ರ ಸರ್ಕಾರದ ನೀತಿ-ನಿಯಮಗಳನ್ನು ವಿರೋಧಿಸುವ ಮೂಲಕ ದೇಶಾದ್ಯಂತ ಆಗಾಗ ಸುದ್ದಿಯಾಗುವ ಸಿದ್ಧಾರ್ಥ್ ಚಿಕ್ಕವಯಸ್ಸಿನಲ್ಲಿ ಪ್ರಾಣ ಕಳೆದುಕೊಂಡರು ಎಂದು ಯೂಟ್ಯುಬ್‌ನಲ್ಲಿ ವಿಡಿಯೋವೊಂದು ಉಲ್ಲೇಖಿಸಿದೆ. ಈ ಕುರಿತು ಸಿದ್ಧಾರ್ಥ್ ಸಹ ಪ್ರತಿಕ್ರಿಯೆ ನೀಡಿದ್ದಾರೆ.

  ಸಿನಿಮಾ ಆಗುತ್ತಿದೆ ರಾಹುಲ್ ದ್ರಾವಿಡ್ ಜೀವನ: ನಟ ಯಾರು?ಸಿನಿಮಾ ಆಗುತ್ತಿದೆ ರಾಹುಲ್ ದ್ರಾವಿಡ್ ಜೀವನ: ನಟ ಯಾರು?

  'ಅತಿ ಚಿಕ್ಕ ವಯಸ್ಸಿನಲ್ಲಿ ಪ್ರಾಣ ಕಳೆದುಕೊಂಡವರು' ಎಂಬ ಹೆಸರಿನಲ್ಲಿ '10 ಡಿಗ್ರಿ ಇಂಡಿಯನ್ ಫ್ರೆಂಡ್ಸ್' ಎಂಬ ಯುಟ್ಯೂಬ್ ಖಾತೆ ವಿಡಿಯೋವೊಂದನ್ನ ಮಾಡಿದೆ. ಈ ವಿಡಿಯೋದಲ್ಲಿ ಸಿದ್ಧಾರ್ಥ್ ಅವರ ಫೋಟೋ ಸಹ ಸೇರಿಸಲಾಗಿದೆ. ಮುಂದೆ ಓದಿ...

  ಸೌಂದರ್ಯ-ಆರ್ತಿ ಅಗರ್‌ವಾಲ್ ಜೊತೆ ಸಿದ್ಧಾರ್ಥ್

  ಸೌಂದರ್ಯ-ಆರ್ತಿ ಅಗರ್‌ವಾಲ್ ಜೊತೆ ಸಿದ್ಧಾರ್ಥ್

  ದಕ್ಷಿಣ ಭಾರತದ ಪ್ರತಿಭಾನ್ವಿತ ಕಲಾವಿದರಾದ ಸೌಂದರ್ಯ ಮತ್ತು ಆರತಿ ಅಗರ್‌ವಾಲ್ ಬಹಳ ಸಣ್ಣ ವಯಸ್ಸಿನಲ್ಲಿ ಸಾವನ್ನಪ್ಪಿದರು. ಇವರ ಜೊತೆ ಸಿದ್ಧಾರ್ಥ್ ಫೋಟೋ ಸಹ ಸೇರಿ ಅವರ ಚಿಕ್ಕ ವಯಸ್ಸಿನಲ್ಲಿ ಮೃತಪಟ್ಟರು ಎಂದು ತೋರಿಸಲಾಗಿದೆ. ಜುಲೈ 18 ರಂದು ಸೌಂದರ್ಯ ನಿಧನರಾದ ದಿನ. ಈ ಹಿನ್ನೆಲೆ ಈ ಪೋಸ್ಟ್ ವೈರಲ್ ಆಗಿದೆ.

  ಸ್ಪಷ್ಟನೆ ನೀಡಿದ ಸಿದ್ಧಾರ್ಥ್

  ಸ್ಪಷ್ಟನೆ ನೀಡಿದ ಸಿದ್ಧಾರ್ಥ್

  ಈ ವಿಡಿಯೋ ನನ್ನ ಗಮನಕ್ಕೂ ಬಂದಿದೆ. ನಾನು ಅದಾಗಲೇ ವರ್ಷದ ಹಿಂದೆಯೇ ಯೂಟ್ಯೂಬ್‌ಗೆ ರಿಪೋರ್ಟ್ ಮಾಡಿದ್ದೆ. ಅದಕ್ಕೆ ಅವರು ''ಕ್ಷಮಿಸಿ, ಈ ವಿಡಿಯೋದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಅನಿಸುತ್ತಿದೆ'' ಎಂದು ಪ್ರತಿಕ್ರಿಯಿಸಿದ್ದರು ಎನ್ನುವ ವಿಚಾರ ತಿಳಿಸಿದ್ದಾರೆ.

  ದ್ರಾವಿಡ್ ಬಯೋಪಿಕ್‌ನಲ್ಲಿ ನಟನೆ?

  ದ್ರಾವಿಡ್ ಬಯೋಪಿಕ್‌ನಲ್ಲಿ ನಟನೆ?

  ಭಾರತ ಕ್ರಿಕೆಟ್ ಲೆಜೆಂಡ್ ರಾಹುಲ್ ದ್ರಾವಿಡ್ ಅವರ ಬಯೋಪಿಕ್ ಮಾಡುವ ತಯಾರಿ ನಡೆಯುತ್ತಿದ್ದು, ಅದರಲ್ಲಿ ಸಿದ್ಧಾರ್ಥ್ ನಟಿಸುವ ಸಾಧ್ಯತೆ ಎಂಬ ವರದಿಗಳು ಆಗಿವೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ದ್ರಾವಿಡ್ ಬಯೋಪಿಕ್‌ ಆಗಲಿ ಎಂದು ಚಿತ್ರರಂಗದಲ್ಲಿ ಬಹಳ ದಿನಗಳಿಂದಲೂ ಚರ್ಚೆಯಾಗುತ್ತಿದೆ.

  ಪಂಚೆಯುಟ್ಟು ಮಳೆಯನ್ನು ಲೆಕ್ಕಿಸದೆ ಭತ್ತದ ಪೈರು ನಾಟಿ ಮಾಡಿದ ರಕ್ಷಿತ್ | Filmibeat Kannada
  'ಮಹಾ ಸಮುದ್ರಂ' ಚಿತ್ರದಲ್ಲಿ ಸಿದ್ಧಾರ್ಥ್

  'ಮಹಾ ಸಮುದ್ರಂ' ಚಿತ್ರದಲ್ಲಿ ಸಿದ್ಧಾರ್ಥ್

  2019ರಲ್ಲಿ ತೆರೆಕಂಡ 'ಅರುವಮ್' ಸಿನಿಮಾದಲ್ಲಿ ಸಿದ್ಧಾರ್ಥ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಪ್ರಸ್ತುತ, ಅಜಯ್ ಭೂಪತಿ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಮಹಾ ಸಮುದ್ರಂ' ಸಿನಿಮಾದಲ್ಲಿ ಶರ್ವಾನಂದ್ ಮತ್ತು ಸಿದ್ಧಾರ್ಥ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಇಂಡಿಯನ್ 2, ಟಕ್ಕರ್, ನವರಸ ಅಂತಹ ಪ್ರಾಜೆಕ್ಟ್‌ಗಳನ್ನು ಸಿದ್ಧಾರ್ಥ್ ಅಭಿನಯಿಸಲಿದ್ದಾರೆ.

  English summary
  Tamil actor Siddharth is dead said Youtube in Video. actor took twitter and react about this video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X