ಸೀಕ್ರೆಟ್ ಆಗಿ ಹಸೆಮಣೆ ಏರಿದ ನಟ ಸಿದ್ದಾರ್ಥ್- ನಟಿ ಅದಿತಿರಾವ್ ಹೈದರಿ

ಸಿನಿಮಾ ತಾರೆಯರು ಸದ್ದಿಲ್ಲದೇ ರಹಸ್ಯವಾಗಿ ಮದುವೆ ಆಗುವುದು ಹೊಸದೇನು ಅಲ್ಲ. ಕೆಲ ದಿನಗಳ ಹಿಂದೆ ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಆಪ್ತರ ಸಮ್ಮುಖದಲ್ಲಿ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ದೇವಸ್ಥಾನವೊಂದರಲ್ಲಿ ಈ ಮದುವೆ ನಿಶ್ಚಯವಾಗಿತ್ತು. ಇದೀಗ ಸರಳವಾಗಿ ಇಬ್ಬರೂ ಹಸೆಮಣೆ ಏರಿದ್ದಾರೆ.

ಕೆಲ ವರ್ಷಗಳಿಂದ ಸಿದ್ದಾರ್ಥ್ ಹಾಗೂ ಅದಿತಿ ರಿಲೇಷನ್‌ಶಿಪ್‌ನಲ್ಲಿದ್ದರು. ಆದರೆ ಇಬ್ಬರೂ ಈ ಬಗ್ಗೆ ಅಧಿಕೃತವಾಗಿ ಮಾತನಾಡಿರಲಿಲ್ಲ. ಇದೀಗ ತಮ್ಮ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಮದುವೆಯ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Siddharth Marries Adithi Rao Hydari both Posts Wedding Pics

'ಮಹಾ ಸಮುದ್ರಂ' ಸಿನಿಮಾ ಸಮಯದಲ್ಲಿ ಇಬ್ಬರ ನಡುವೆ ಪರಿಚಯವಾಗಿತ್ತು. ಬಳಿಕ ಅದು ಪ್ರೀತಿಗೆ ತಿರುಗಿತು ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅತಿದಿ ಹೇಳಿದ್ದರು. ಅಂದಹಾಗೆ ಇದು ಸಿದ್ದಾರ್ಥ್ ಹಾಗೂ ಅದಿತಿ ಇಬ್ಬರಿಗೂ ಎರಡನೇ ಮದುವೆ. ಸಿದ್ದಾರ್ 21 ವರ್ಷಗಳ ಹಿಂದೆಯೇ ಮೇಘನಾ ಎಂಬಾಕೆಯನ್ನು ಮದುವೆ ಆಗಿದ್ದರು. 2007ರಲ್ಲಿ ಆಕೆಗೆ ಡಿವೋರ್ಸ್ ಕೊಟ್ಟಿದ್ದರು. ಸತ್ಯದೀಪ್ ಮಿಶ್ರಾ ಎಂಬುವವರ ಜೊತೆ ಮದುವೆ ಆಗಿದ್ದ ಅದಿತಿ ಕೂಡ ವಿಚ್ಛೇದನ ಪಡೆದಿದ್ದರು.

ಮದುವೆ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡುವ ಜೋಡಿ "ನೀನು ನನ್ನ ಸೂರ್ಯ.. ನೀನು ನನ್ನ ಚಂದ್ರ.. ನನ್ನ ನಕ್ಷತ್ರಗಳು ನೀನು. ಎಂದೆಂದಿಗೂ ನನ್ನ ಆತ್ಮದ ಗೆಳೆಯ. ನಾವು ನಗೋಣ ಮತ್ತು ಒಟ್ಟಿಗೆ ಬೆಳೆಯೋಣ. ಪ್ರೀತಿ, ಬೆಳಕು ಮತ್ತು ಮ್ಯಾಜಿಕ್ ಶಾಶ್ವತವಾಗಿರಲಿ. Mrs & Mr ಅದು-ಸಿದ್ದು" ಎಂದು ಬರೆದುಕೊಂಡಿದ್ದಾರೆ.

ಆಪ್ತರು, ಅಭಿಮಾನಿಗಳು ಪೋಸ್ಟ್‌ಗೆ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನವ ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಸದ್ದಿಲ್ಲದೇ ಸರಳವಾಗಿ ನಿಶ್ಚಿತಾರ್ಥ ಹಾಗೂ ಮದುವೆ ಮಾಡಿಕೊಂಡು ಜೋಡಿ ಅಭಿಮಾನಿಗಳಿಗೆ ಸ್ವೀಟ್ ಶಾಕ್ ಕೊಟ್ಟಿದೆ. ನಿಶ್ಚಿತಾರ್ಥ ನಡೆದಿದ್ದ ಅದೇ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಾಯದಂತೆ ಬಹಳ ಶಾಸ್ತ್ರೋಕ್ತವಾಗಿ ಮದುವೆ ಶಾಸ್ತ್ರಗಳು ನೆರವೇರಿದೆ.

ತೆಲಂಗಾಣದ ವನಪರ್ತಿಯ ಶ್ರೀರಂಗಪುರಂ ದೇವಸ್ಥಾನದಲ್ಲಿ ಕಳೆದ ಮಾರ್ಚ್‌ನಲ್ಲಿ ಸಿದ್ದಾರ್ಥ್ ಹಾಗೂ ಅದಿತಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಗುಟ್ಟಾಗಿಯೇ ಉಂಗುರ ಬದಲಿಸಿಕೊಂಡಿದ್ದರು. ಇದೀಗ ಕೆಲವೇ ಆಪ್ತರ ಸಮ್ಮುಖದಲ್ಲಿ ಜೋಡಿ ಮದುವೆ ಬಂಧಕ್ಕೆ ಒಳಗಾಗಿದ್ದಾರೆ. ನಿರ್ದೇಶಕ ಶಂಕರ್ ಬಳಗದಲ್ಲಿ ಗುರ್ತಿಸಿಕೊಂಡಿದ್ದ ಸಿದ್ದಾರ್ಥ್ ಬಳಿಕ ಹೀರೊ ಆಗಿ ಸಕ್ಸಸ್ ಕಂಡವರು.

Siddharth Marries Adithi Rao Hydari both Posts Wedding Pics

'ಬಾಯ್ಸ್' ಚಿತ್ರದಲ್ಲಿ ಹೀರೊ ಆಗಿ ಮಿಂಚಿದ್ದ ಸಿದ್ದಾರ್ಥ್ ಬಳಿಕ ಒಂದಷ್ಟು ಸಿನಿಮಾಗಳಲ್ಲಿ ಅವಕಾಶ ಪಡೆದಿದ್ದರು. ದೊಡ್ಡ ಮಟ್ಟದ ಹಿಟ್ ಚಿತ್ರಗಳನ್ನು ಕೊಡಿಸಿದ್ದರು ಮಹಿಳಾ ಪ್ರೇಕ್ಷಕರ ಮನಗೆದ್ದಿದ್ದರು. ತೆಲುಗಿನ 'ನುವ್ವೋಸ್ತಾನಂಟೆ ನೆನೊಡ್ಡಂಟಾನ' ಸಿದ್ದಾರ್ಥ್ ನಟಿಸಿದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು.

'ರಂಗ್‌ ದೆ ಬಸಂತಿ' ಚಿತ್ರದ ಮೂಲಕ ಸಿದ್ದಾರ್ತ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಕರ್ನಾಟಕದಲ್ಲಿ ಕಾವೇರಿ ಕಿಚ್ಚಿನ ಸಮಯದಲ್ಲಿ ಸಿದ್ದಾರ್ಥ್ ಸಿನಿಮಾ ಸುದ್ದಿಗೋಷ್ಠಿಗೆ ತಡೆ ಎದುರಾಗಿತ್ತು. ಈ ವಿಚಾರ ಭಾರೀ ಸುದ್ದಿ ಆಗಿತ್ತು. ಬೆಂಗಳೂರಿನಲ್ಲಿ ತಮಿಳು ಸಿನಿಮಾ ಸುದ್ದಿಗೋಷ್ಠಿಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ನಟಿ ಅತಿದಿ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದೇ ಹೆಚ್ಚು. 'ಧೋಬಿ ಘಾಟ್', 'ರಾಕ್‌ಸ್ಟರ್', 'ಮರ್ಡರ್-3', 'ಬಾಸ್', 'ಫಿತೂರ್', 'ಪದ್ಮಾವತ್', 'ಸರ್ದಾರ್ ಕಾ ಗ್ರ್ಯಾಂಡ್‌ಸನ್' ಆಕೆ ನಟಿಸಿದ ಕೆಲ ಹಿಂದಿ ಸಿನಿಮಾಗಳು.

More from Filmibeat

English summary
Aditi Rao Hydari-Siddharth get married, see pics
Read more about: siddharth tamil telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X