twitter
    For Quick Alerts
    ALLOW NOTIFICATIONS  
    For Daily Alerts

    SIIMA Awards 2022: ಕನ್ನಡ, ತೆಲುಗು ಆಯ್ತು, ತಮಿಳಿನಲ್ಲಿ ಪ್ರಶಸ್ತಿ ಬಾಚಿಕೊಂಡವರು ಯಾರು? ಸಂಪೂರ್ಣ ಪಟ್ಟಿ ಇಲ್ಲಿದೆ

    |

    ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ಕಾರ್ಯಕ್ರಮ ನಮ್ಮ ಬೆಂಗಳೂರಿನಲ್ಲಿ ಶನಿವಾರ ಹಾಗೂ ಭಾನುವಾರ ಜರುಗಿತು. ಕಾರ್ಯಕ್ರಮದ ಮೊದಲ ದಿನ ಕನ್ನಡ ಹಾಗೂ ತೆಲುಗು ಭಾಷೆಯ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಹಾಗೂ ಭಾನುವಾರ ತಮಿಳು ಮತ್ತು ಮಲಯಾಳಂ ಚಿತ್ರರಂಗದ ಚಲನಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಭಾನುವಾರ ಸಂಜೆ ತಮಿಳಿನ ಸಿಲಂಬರಸನ್, ಶಿವ ಕಾರ್ತಿಕೇಯನ್, ಆರ್ಯ, ಲೋಕೇಶ್ ಕನಕರಾಜ್ ಇನ್ನಿತರ ಸ್ಟಾರ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಿಂಚಿದರು. 2021ರಲ್ಲಿ ತೆರೆಕಂಡಿದ್ದ ಮರಿ ಸೆಲ್ವರಾಜ್ ನಿರ್ದೇಶನದ ಕರ್ಣನ್ ಸಿನಿಮಾ ಹತ್ತು ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು, ಈ ಚಿತ್ರ ಕೊವಿಡ್ ನಡುವೆಯೂ ಒಳ್ಳೆಯ ವಿಮರ್ಶೆ ಪಡೆದುಕೊಂಡು ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿತ್ತು. ಈ ವರ್ಷ ಬೀಸ್ಟ್ ಮಾಡಿ ಕೈಸುಟ್ಟುಕೊಂಡ ನಿರ್ದೇಶಕ ನೆಲ್ಸನ್ ಕಳೆದ ವರ್ಷ ಶಿವ ಕಾರ್ತಿಕೇಯನ್ ಅವರಿಗೆ ಡಾಕ್ಟರ್ ಸಿನಿಮಾ ನಿರ್ದೇಶಿಸಿ ಗೆದ್ದಿದ್ದರು. ಈ ಸಿನಿಮಾ 9 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಇನ್ನು ಲೋಕೇಶ್ ಕನಕರಾಜ್ ನಿರ್ದೇಶನದ ಹಾಗೂ ವಿಜಯ್ ಅಭಿನಯದ ಮಾಸ್ಟರ್ ಮತ್ತು ತಲೈವಿ ಚಿತ್ರಗಳು ತಲಾ ಏಳು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದವು.

    ದಕ್ಷಿಣ ಭಾರತ ಸಿನಿಮಾಕ್ಕೂ ತಟ್ಟಿದ ಬಾಯ್‌ಕಾಟ್ ಬಿಸಿ: ಆತಂಕದಲ್ಲಿ ವಿಜಯ್ ದೇವರಕೊಂಡ!ದಕ್ಷಿಣ ಭಾರತ ಸಿನಿಮಾಕ್ಕೂ ತಟ್ಟಿದ ಬಾಯ್‌ಕಾಟ್ ಬಿಸಿ: ಆತಂಕದಲ್ಲಿ ವಿಜಯ್ ದೇವರಕೊಂಡ!

    ಹೀಗೆ ಈ ಬಾರಿಯ ಸೈಮಾಗೆ ಹೆಚ್ಚು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದ ಈ ಚಿತ್ರಗಳ ಪೈಕಿ ಯಾವ ಚಿತ್ರಕ್ಕೆ ಎಷ್ಟು ಪ್ರಶಸ್ತಿ ಲಭಿಸಿತು ಹಾಗೂ ಯಾವ ಕಲಾವಿದರಿಗೆ ಪ್ರಶಸ್ತಿ ಲಭಿಸಿತು ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ.

    ಪ್ರಶಸ್ತಿ ಗೆದ್ದವರ ಪಟ್ಟಿ

    ಪ್ರಶಸ್ತಿ ಗೆದ್ದವರ ಪಟ್ಟಿ

    ಅತ್ಯುತ್ತಮ ನಟಿ - ಕಂಗನಾ ರನೌತ್ ( ತಲೈವಿ )

    ಅತ್ಯುತ್ತಮ ನಟಿ- ಕ್ರಿಟಿಕ್ಸ್ - ಐಶ್ವರ್ಯಾ ರಾಜೇಶ್ ( ದಿಟ್ಟಮ್ ಇರಂಡು )

    ಅತ್ಯುತ್ತಮ ನಟ - ಕ್ರಿಟಿಕ್ಸ್ - ಆರ್ಯ (ಸರ್ಪಟ್ಟ ಪರಂಬರೈ )

    ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ - ಶಿವಕಾರ್ತಿಕೇಯನ್ ( ಡಾಕ್ಟರ್ )

    ಅತ್ಯುತ್ತಮ ನಟ - ಸಿಲಂಬರಸನ್ ( ಮಾನಾಡು )

    ಅತ್ಯುತ್ತಮ ಚಿತ್ರ - ಸರ್ಪಟ್ಟ ಪರಂಬರೈ

    ಅತ್ಯುತ್ತಮ ನಿರ್ದೇಶಕ - ಲೋಕೇಶ್ ಕನಕರಾಜ್ ( ಮಾಸ್ಟರ್ )

    ಅತ್ಯುತ್ತಮ ಉದಯೋನ್ಮುಖ ನಟಿ - ಪ್ರಿಯಾಂಕಾ ಮೋಹನ್ ( ಡಾಕ್ಟರ್ )

    ಅತ್ಯುತ್ತಮ ಉದಯೋನ್ಮುಖ ನಟ - ಸುಭಾಷ್ ಸೆಲ್ವಂ ( ದಿಟ್ಟಮ್ ಇರಂಡು )

    ಅತ್ಯುತ್ತಮ ಖಳ ನಟ - ಎಸ್‌ಜೆ ಸೂರ್ಯ ( ಮಾನಾಡು )

    ಅತ್ಯುತ್ತಮ ಹಾಸ್ಯ ನಟರು - ರೆಡಿನ್ ಕಿಂಗ್ಸ್ಲಿ ಮತ್ತು ದೀಪಾ ಶಂಕರ್ ( ಡಾಕ್ಟರ್ )

    ಅತ್ಯುತ್ತಮ ಪೋಷಕ ನಟಿ - ಲಕ್ಷ್ಮಿ ಪ್ರಿಯಾ ಚಂದ್ರಮೌಳಿ ( ಕರ್ಣನ್ )

    ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ - ಮಡೋನ್ ಅಶ್ವಿನ್ ( ಮಂಡೇಲಾ )

    ಅತ್ಯುತ್ತಮ ಸಂಗೀತ ನಿರ್ದೇಶಕ - ಸಂತೋಷ್ ನಾರಾಯಣನ್ ( ಕರ್ಣನ್ )

    ಅತ್ಯುತ್ತಮ ಹಿನ್ನೆಲೆ ಗಾಯಕಿ - ಧೀ ( ಕರ್ಣನ್ )

    ಅತ್ಯುತ್ತಮ ಹಿನ್ನೆಲೆ ಗಾಯಕ - ಕಪಿಲ್ ಕಪಿಲನ್ ( ಬ್ಯಾಚುಲರ್ )

    ಅತ್ಯುತ್ತಮ ಛಾಯಾಗ್ರಾಹಕ - ಶ್ರೇಯಸ್ ಕೃಷ್ಣ ( ರಾಕಿ )

    ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ - ಸಿ ಆರ್ ಮನೋಜ್ ಕುಮಾರ್ ( ರಾಕಿ )

    ಔಟ್ ಸ್ಟಾಂಡಿಂಗ್ ಪರ್ಫಾರ್ಮರ್ ಆಫ್ ದ ಇಯರ್ - ಯೋಗಿ ಬಾಬು

    ಅತ್ಯುತ್ತಮ ನಾಯಕ ಪ್ರಶಸ್ತಿ ಗಿಟ್ಟಿಸಿಕೊಂಡ ಮೂವರು

    ಅತ್ಯುತ್ತಮ ನಾಯಕ ಪ್ರಶಸ್ತಿ ಗಿಟ್ಟಿಸಿಕೊಂಡ ಮೂವರು

    ಈ ಬಾರಿಯ ಸೈಮಾದಲ್ಲಿ ತಮಿಳಿನ ಮೂವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮಾನಾಡು ಚಿತ್ರದ ತಮ್ಮ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ಸಿಲಂಬರಸನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿಗೆ ಸರ್ಪಟ್ಟ ಪರಂಬರೈ ನಾಯಕ ಆರ್ಯ ಆಯ್ಕೆಯಾದರು ಹಾಗೂ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಡಾಕ್ಟರ್ ಚಿತ್ರದ ನಟ ಶಿವ ಕಾರ್ತಿಕೇಯನ್ ಪಾತ್ರರಾದರು.

    ಚೊಚ್ಚಲ ಸೈಮಾ ಗೆದ್ದ ಲೋಕೇಶ್ ಕನಕರಾಜ್

    ಚೊಚ್ಚಲ ಸೈಮಾ ಗೆದ್ದ ಲೋಕೇಶ್ ಕನಕರಾಜ್

    ಈ ವರ್ಷ ತಮಿಳಿನಲ್ಲಿ ಇಂಡಸ್ಟ್ರಿ ಹಿಟ್ ಚಿತ್ರ ವಿಕ್ರಂ ನಿರ್ದೇಶನ ಮಾಡಿರುವ ಲೋಕೇಶ್ ಕನಕರಾಜ್ ಕಳೆದ ವರ್ಷ ವಿಜಯ್ ಮತ್ತು ವಿಜಯ್ ಸೇತುಪತಿಗೆ ಮಾಸ್ಟರ್‌ ಸಿನಿಮಾವನ್ನು ನಿರ್ದೇಶಿಸಿದ್ದರು. ಇನ್ನು ಸೂಪರ್ ಹಿಟ್ ಕೈದಿ ಸಿನಿಮಾಗೂ ಪ್ರಶಸ್ತಿ ಸಿಗದಿದ್ದ ಲೋಕೇಶ್ ಕನಕರಾಜ್ ಅವರಿಗೆ ಈಗ ಮಾಸ್ಟರ್ ಚಿತ್ರಕ್ಕಾಗಿ ಬೆಸ್ಟ್ ಡೈರೆಕ್ಟರ್ ಅವಾರ್ಡ್ ದೊರಕಿದೆ. ಇದು ಇವರ ಚೊಚ್ಚಲ ಸೈಮಾ ಪ್ರಶಸ್ತಿಯಾಗಿದೆ.

    ಸೌತ್ ಪ್ರಶಸ್ತಿ ಪಡೆದ ಬಾಲಿವುಡ್ ನಟಿ

    ಸೌತ್ ಪ್ರಶಸ್ತಿ ಪಡೆದ ಬಾಲಿವುಡ್ ನಟಿ

    ಇನ್ನು ಈ ಬಾರಿಯ ಸೈಮಾ ಪ್ರಶಸ್ತಿಯಲ್ಲಿ ಕಂಗನಾ ರಣಾವತ್ ತಲೈವಿ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ತಮಿಳುನಾಡಿನ ಖ್ಯಾತ ನಟಿ ಹಾಗೂ ರಾಜಕಾರಣಿ ಜಯಲಲಿತಾ ಅವರ ಪಾತ್ರದಲ್ಲಿ ನಟಿ ಕಂಗನಾ ರಣಾವತ್ ಕಾಣಿಸಿಕೊಂಡಿದ್ದರು.

    English summary
    SIIMA Awards 2022: Arya wins Best Actor and Aishwarya Rajesh got Best Actress from Tamil. Read on
    Monday, September 12, 2022, 15:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X