ನಟ ಸಿಂಬು 30 ಕೆಜಿ ತೂಕ ಇಳಿಸಿಕೊಂಡ ಕಾರಣ ಬಹಿರಂಗ ಪಡಿಸಿದ ಸಹೋದರಿ

ತಮಿಳು ನಟ ಸಿಂಬು ಇತ್ತೀಚಿಗೆ ಈಶ್ವರನ್ ಚಿತ್ರದ ಫಸ್ಟ್ ಲುಕ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಕುತ್ತಿಗೆಗೆ ಹಾವು ಸುತ್ತಿಕೊಂಡು ಎಂಟ್ರಿ ಕೊಟ್ಟಿದ್ದ ಸಿಂಬು ನೋಡಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಫಸ್ಟ್ ಲುಕ್ ಜೊತೆಗೆ ಫಿಟ್ ಅಂಡ್ ಫೈನ್ ಆಗಿರುವ ಸಿಂಬು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಹೌದು, ಸಿಂಬು ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ. 101 ಕೆಜಿ ಇದ್ದ ಸಿಂಬು ಈಗ 71 ಕೆಜಿ ಆಗಿದ್ದಾರೆ. ಅಂದ್ಹಾಗೆ ಸಿಂಬು ಹೀಗೆ ತೆಳ್ಳಗೆ ಆಗಿರುವುದು ಸಿನಿಮಾಗಾಗಿ ಅಲ್ಲ. ಫಿಟ್ ಆಗಿರಬೇಕು ಎನ್ನುವ ಕಾರಣಕ್ಕೆ ಈ ಪರಿ ತೂಕ ಇಳಿಸಿಕೊಂಡಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಮುಂದೆ ಓದಿ...

ಸಿಂಬು ತೂಕ ಇಳಿಸಿಕೊಂಡ ಬಗ್ಗೆ ಸಹೋದರಿ ಹೇಳಿದ್ದೇನು?

ಸಿಂಬು ತೂಕ ಇಳಿಸಿಕೊಂಡ ಬಗ್ಗೆ ಸಹೋದರಿ ಹೇಳಿದ್ದೇನು?

ಸಿಂಬು ತೂಕ ಇಳಿಸಿಕೊಂಡ ಬಗ್ಗೆ ಸಹೋದರಿ ಎಲಕ್ಕಿಯಾ ಅಭಿಲಾಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತೂಕ ಇಳಿಸಿಕೊಂಡ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಂಬು ಸಹೋದರಿ ಎಲಕ್ಕಿಯಾ, 'ತೂಕ ಇಳಿಸಿಕೊಳ್ಳಲು ತುಂಬ ಕಷ್ಟಪಟ್ಟಿದ್ದಾನೆ. ಈ ಬದಲಾವಣೆ ಕೇವಲ ತೂಕ ಇಳಿಸಿಕೊಳ್ಳುವುದಕ್ಕಾಗಿ ಮಾತ್ರವಲ್ಲ. ಅವನ ನಿಜವಾದ ಸ್ವಯಂ ದೃಷ್ಟಿ, ಉದ್ದೇಶ ಮತ್ತು ಗುರಿಯನ್ನು ತಿಳಿದುಕೊಳ್ಳುವುದಾಗಿತ್ತು' ಎಂದಿದ್ದಾರೆ.

ಎಷ್ಟು ಕಷ್ಟಪಟ್ಟಿದ್ದಾನೆ ಎನ್ನುವುದು ನನಗೆ ಗೊತ್ತು

ಎಷ್ಟು ಕಷ್ಟಪಟ್ಟಿದ್ದಾನೆ ಎನ್ನುವುದು ನನಗೆ ಗೊತ್ತು

'ನಾನು ಅವನ ಜೊತೆ ಅವನೊಂದಿಗೆ ಕೆಲವು ದಿನಗಳ ಕಾಲ ಇದ್ದೆ ಮತ್ತು ಅವನನ್ನು ನೋಡಿದ್ದೇನೆ. ತನ್ನ ಗುರಿಯ ಕಡೆ ಹೋಗಲು ಎಷ್ಟು ಕಷ್ಟಪಟ್ಟಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಅವನ ವಿಲ್ ಪವರ್ ಗೆ ಹ್ಯಾಟ್ಸಪ್' ಎಂದು ಹೇಳಿದ್ದಾರೆ.

ಕಳೆದ ವರ್ಷ ನವೆಂಬರ್ ನಲ್ಲಿ ಪ್ರಾರಂಭ ಮಾಡಿದ ವರ್ಕೌಟ್

ಕಳೆದ ವರ್ಷ ನವೆಂಬರ್ ನಲ್ಲಿ ಪ್ರಾರಂಭ ಮಾಡಿದ ವರ್ಕೌಟ್

ಕಳೆದ ವರ್ಷ ನವೆಂಬರ್ ನಿಂದ ಸಿಂಬು ವರ್ಕೌಟ್ ಮಾಡುತ್ತಿದ್ದಾರೆ. ಸೆಲೆಬ್ರಿಟಿ ಟ್ರೇನರ್ ಸಂದೀಪ್ ರಾಜ್ ಮಾರ್ಗದರ್ಶನದಲ್ಲಿ ಸಿಂಬು ವರ್ಕೌಟ್ ಮಾಡಿದ್ದಾರೆ. ಪ್ರತೀದಿನ ಬೆಳಗ್ಗೆ 4 ಗಂಟೆಗೆ ಎದ್ದು ವಾಕಿಂಗ್ ಮಾಡಿ, ನಂತರ ಜಿಮ್ ಗೆ ತೆರಳುತ್ತಿದ್ದರಂತೆ. ಜಿಮ್ ಜೊತೆಗೆ ವಿವಿಧ ಕ್ರೀಡೆಯಲ್ಲಿಯೂ ಸಿಂಬು ತೊಡಗಿಕೊಂಡಿದ್ದಾರಂತೆ.

Recommended Video

ಹೆಸರು ಮಾಡಿದ್ರೆ ನಿಮ್ಮಂತೆ ಹೆಸರು ಮಾಡ್ಬೇಕು ಅಂದ ದರ್ಶನ್ ತಂಗಿ ಅಮೂಲ್ಯ | Amulya | Darshan | Filmibeat kannada
ಮಾಂಸಹಾರ ತ್ಯಜಿಸಿರುವ ನಟ

ಮಾಂಸಹಾರ ತ್ಯಜಿಸಿರುವ ನಟ

ಫಿಟ್ ಅಂಡ್ ಫೈನ್ ಆಗಿ ಕಾಣಿಸಲು ಸಿಂಬು ಮಾಂಸಹಾರವನ್ನು ತ್ಯಾಜಿಸಿದ್ದಾರೆ. ಎಲ್ಲಾ ಜಂಕ್ ಫುಡ್ ಸೇವಿಸುವುದಿಲ್ಲವಂತೆ. ಪೌಷ್ಠಿಕಾಂಶ ಇರುವ ಆಹಾರಗಳನ್ನು ತಿನ್ನುತ್ತಿದ್ದಾರೆ. ಒಂದು ವರ್ಷಗಳ ಕಠಿಣ ಶ್ರಮದ ಬಳಿಕ ಸಿಲಾಂಬರಸನ್ 31 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

More from Filmibeat

English summary
Tamil Actor simbu loss 30 kg weight. Silambarasan's sister Elakkiya reveals reason for STR's physical transformation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X