ಸಿಲ್ಕ್ ಸ್ಮಿತಾ ಕ್ರೇಜ್ ನೋಡಿ ಇಂದಿರಾ ಗಾಂಧಿ ಶಾಕ್ ಆಗಿದ್ರಾ? ಬಯೋಪಿಕ್ ಟೀಸರ್ ವೈರಲ್

ಒಂದ್ಕಾಲದಲ್ಲಿ ನಟಿ ಸಿಲ್ಕ್ ಸ್ಮಿತಾ ಕ್ರೇಜ್ ಹೇಗಿತ್ತು ಎನ್ನುವುದು ಗೊತ್ತೇಯಿದೆ. ನಟಿಯಾಗಿ ಹೆಚ್ಚು ನಟಿಸದೇ ಇದ್ದರೂ ಬರೀ ಸ್ಪೆಷಲ್ ಸಾಂಗ್‌ಗಳಲ್ಲಿ ಕುಣಿದು ಸಿನಿರಸಿಕರ ಮನಗೆದ್ದವರು ಸಿಲ್ಕ್ ಸ್ಮಿತಾ. ಈಗಾಗಲೇ ಆಕೆಯ ಜೀವನವನ್ನಾಧರಿಸಿ 'ಡರ್ಟಿ ಪಿಕ್ಚರ್' ಸಿನಿಮಾ ಬಂದಿದೆ. ಇದೀಗ ಮತ್ತೊಂದು ಸಿನಿಮಾ ಸಿದ್ಧವಾಗುತ್ತಿದೆ.

ಸಿಲ್ಕ್ ಸ್ಮಿತಾ ಜನ್ಮದಿನದಂದೇ ಟೀಸರ್ ಸಮೇತ 'ಸಿಲ್ಕ್ ಸ್ಮಿತಾ'- ಕ್ವೀನ್‌ ಆಫ್‌ ದಿ ಸೌತ್‌ ಘೋಷಣೆ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. STRI ಸಿನಿಮಾಸ್ ಸಂಸ್ಥೆ ಚಿತ್ರ ನಿರ್ಮಾಣ ಮಾಡುತ್ತಿದೆ. ಜಯರಾಮ್‌ ಸಂಕರನ್‌ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಸಿಲ್ಕ್ ಪಾತ್ರದಲ್ಲಿ ರಾಧಿಕಾ ರವಿ ನಟಿಸುತ್ತಿದ್ದಾರೆ.

Silk Smitha Biopic movie announced Chandrika Ravi is playing Smitha

ದಕ್ಷಿಣದ ಖ್ಯಾತ ನಟಿ, ಐಟಂ ಡಾನ್ಸರ್‌ ಸಿಲ್ಕ್‌ ಸ್ಮಿತಾ 5 ಭಾಷೆಗಳಲ್ಲಿ ನೂರಾರು ಸಿನಿಮಾಗಳಲ್ಲಿ ಮಿಂಚಿದ್ದರು. 80, 90ರ ದಶಕದಲ್ಲಿ ಪಡ್ಡೆ ಹುಡುಗರ ಪಾಲಿನ ಕನಸಿನ ರಾಣಿಯಾಗಿ ಮೆರೆದರು. ಆಕೆಯನ್ನು ನೋಡಲು ಮಾತನಾಡಿಸಲು ಮನೆ ಮುಂದೆ ಅಭಿಮಾನಿಗಳು ಕ್ಯೂ ನಿಲ್ಲುತ್ತಿದ್ದರು. ಅಷ್ಟರಮಟ್ಟಿಗೆ ಕ್ರೇಜ್ ಸೃಷ್ಟಿಸಿಕೊಂಡಿದ್ದರು. ಮಾದಕ ಮೈಮಾಟ ಪ್ರದರ್ಶಿಸುತ್ತಾ ಬಿಂದಾಸ್ ಆಗಿ ಕುಣಿಯುತ್ತ ಮೋಡಿ ಮಾಡಿದ್ದರು.

ಸಿಲ್ಕ್ ಕ್ರೇಜ್ ಹೇಗಿತ್ತು ಎನ್ನುವುದನ್ನು ಸಣ್ಣ ಟೀಸರ್ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಅಂದು ಪತ್ರಿಕೆಗಳಲ್ಲಿ, ಮ್ಯಾಗಜೀನ್‌ಗಳಲ್ಲಿ ಸಿಲ್ಕ್ ಸ್ಮಿತಾ ಬಗ್ಗೆ ಬರುತ್ತಿದ್ದ ಲೇಖನಗಳನ್ನು ನೋಡಿ ಸ್ವತಃ ಪ್ರಧಾನಿ ಇಂದಿರಾ ಗಾಂಧಿ ಅಚ್ಚರಿಗೊಂಡಿದ್ದರು ಎನ್ನುವ ಅರ್ಥದಲ್ಲಿ ಟೀಸರ್ ಕಟ್ಟಿಕೊಡಲಾಗಿದೆ. ಇನ್ನು ಸಿಲ್ಕ್ ಒಂದು ನೋಟಕ್ಕೆ, ಆಕೆಯ ದರ್ಶನಕ್ಕೆ ಅಭಿಮಾನಿಗಳು ಮನೆ ಮುಂದೆ ಹೇಗೆ ಜಮಾಯಿಸುತ್ತಿದ್ದರು ಎನ್ನುವುದನ್ನು ಕೊಂಚ ಅತಿರೇಕವಾಗಿಯೇ ತೋರಿಸಿದ್ದಾರೆ.

'ಸಿಲ್ಕ್ ಸ್ಮಿತಾ'- ಕ್ವೀನ್‌ ಆಫ್‌ ದಿ ಸೌತ್‌ ಚಿತ್ರವನ್ನು ಎಸ್‌. ಬಿ ವಿಜಯ್‌ ಅಮೃತ್‌ರಾಜ್‌ ನಿರ್ಮಾಣ ಮಾಡಲಿದ್ದಾರೆ. ಮುಂದಿನ ವರ್ಷ ಸಿನಿಮಾ ಶುರುವಾಗಲಿದೆ. ಸದ್ಯ ಸಣ್ಣ ಟೀಸರ್ ಬಿಟ್ಟು ಸಿನಿಮಾ ಘೋಷಣೆ ಮಾಡಲಾಗಿದೆ. ವಿಜಯಲಕ್ಷ್ಮಿ ಹೇಗೆ ಸಿಲ್ಕ್ ಸ್ಮಿತಾ ಆದಳು, ಆಕೆ ಚಿತ್ರರಂಗಕ್ಕೆ ಬಂದಿದ್ದೇಗೆ? ಮೆರೆದಿದ್ದು ಹೇಗೆ? ಎನ್ನುವುದನ್ನೆಲ್ಲಾ ಚಿತ್ರದಲ್ಲಿ ತೋರಿಸಲಾಗ್ತಿದೆ.

Silk Smitha Biopic movie announced Chandrika Ravi is playing Smitha

18 ವರ್ಷಗಳ ತಮ್ಮ ಸಿನಿ ಜೀವನದಲ್ಲಿ ಸಿಲ್ಕ್ ಸ್ಮಿತಾ 450ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿದ್ದರು. ಸೂಪರ್ ಸ್ಟಾರ್‌ಗಳ ಜೊತೆ ಸ್ಪೆಷಲ್ ಸಾಂಗ್‌ಗಳಿಗೆ ಕುಣಿದಿದ್ದರು. 1996ರಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡು ಕೊನೆಯುಸಿರೆಳೆದಿದ್ದರು. ಆಕೆಯ ಸಾವಿನ ಬಗ್ಗೆ ಸಾಕಷ್ಟು ಜನ ಅನುಮಾನ ವ್ಯಕ್ತಪಡಿಸುತ್ತಲೇ ಇದ್ದಾರೆ.

ಸಿಲ್ಕ್ ಸ್ಮಿತಾ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ ಹೆಸರು. ಕನ್ನಡ ಕೆಲ ಸಿನಿಮಾಗಳಲ್ಲಿ ಬಿಂದಾಸ್ ಸಾಂಗ್‌ಗೆ ಹೆಜ್ಜೆ ಹಾಕಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಒಳ್ಳೆ ಒಡನಾಟ ಇತ್ತು. 'ಕುಂಕುಮ ತಂದ ಸೌಭಾಗ್ಯ', 'ಅಳಿಮಯ್ಯ', 'ಹಳ್ಳಿಮೇಷ್ಟ್ರು', 'ಟೈಗರ್', 'ಹೊಸ ಕಳ್ಳ ಹಳೇ ಕುಳ್ಳ', 'ಚಿನ್ನ', 'ಲಾಕಪ್ ಡೆತ್' ಸೇರಿದಂತೆ ಕೆಲ ಕನ್ನಡ ಸಿನಿಮಾಗಳಲ್ಲಿ ಸಿಲ್ಕ್ ಮಿಂಚಿದ್ದರು.

ಇನ್ನು ವಿದ್ಯಾಬಾಲನ್ ನಟಿಸಿದ 'ದಿ ಡರ್ಟಿ ಪಿಕ್ಚರ್' ಸಿನಿಮಾ 13 ವರ್ಷ ಪೂರೈಸಿದೆ. 2011ರಲ್ಲಿ ಸಿಲ್ಕ್ ಸ್ಮಿತಾ ಹುಟ್ಟುಹಬ್ಬದ ದಿನವೇ ಆ ಸಿನಿಮಾ ತೆರೆಗೆ ಬಂದಿತ್ತು. ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಹಲವು ಪ್ರಶಸ್ತಿಗಳನ್ನು ಸಿನಿಮಾ ಬಾಚಿಕೊಂಡಿತ್ತು. 18 ಕೋಟಿ ರೂ. ಬಜೆಟ್ ಸಿನಿಮಾ 110 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.

ಸದ್ಯ ಶುರುವಾಗಿರುವ 'ಸಿಲ್ಮ್ ಸ್ಮಿತಾ' ಸಿನಿಮಾ ಯಾವ ರೀತಿ ಸದ್ದು ಮಾಡುತ್ತದೆ ಕಾದು ನೋಡಬೇಕಿದೆ. ಮುಂದಿನ ವರ್ಷದ ಕೊನೆಗೆ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆಯಿದೆ.

More from Filmibeat

English summary
Silk Smitha biopic confirmed: Here's what we know about film based on famous actress;
Read more about: silk smitha kollywood tamil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X