ಕಮಲ್-ಮಣಿರತ್ನಂ 'ಥಗ್ ಲೈಫ್'ನಲ್ಲಿ ಸಿಂಬು: ಓವರ್‌ಸೀಸ್ ಹಕ್ಕು ಸೇಲ್ ಆಗಿದ್ದು ಎಷ್ಟಕ್ಕೆ ಗೊತ್ತೇ?

By ಫಿಲ್ಮಿಬೀಟ್ ಡೆಸ್ಕ್

ಮಣಿರತ್ನಂ ಸಿನಿಮಾಗಳ ನೋಡುವುದಕ್ಕಂತನೇ ಒಂದು ವರ್ಗವಿದೆ. ಸಿನಿಮಾ ಅನೌನ್ಸ್ ಆದಲ್ಲಿಂದ ಬಿಡುಗಡೆವರೆಗೂ ಪ್ರತಿಯೊಂದು ಹೆಜ್ಜೆಯನ್ನೂ ಗಮನಿಸುತ್ತಲೇ ಇರುತ್ತಾರೆ. ಈ ಬಾರಿ ಮಣಿರತ್ನ ಉಳಗನಾಯಗನ್ ಕಮಲ್ ಹಾಸನ್‌ಗೆ ಆಕ್ಷನ್ ಕಟ್ ಹೇಳುತ್ತಿರುವ ವಿಷಯ ಮತ್ತಷ್ಟು ಥ್ರಿಲ್ ಕೊಟ್ಟಿತ್ತು.

ಹೌದು, ಬರೋಬ್ಬರಿ 36 ವರ್ಷಗಳ ಬಳಿಕ ಕಮಲ್ ಹಾಸನ್ ಹಾಗೂ ಮಣಿರತ್ನಂ ಜೋಡಿ ಒಟ್ಟಾಗಿ ಒಂದೇ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಈ ಜೋಡಿ 'ನಾಯಕನ್' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅಲ್ಲಿಂದ ಮತ್ತೆ ಇವರಿಬ್ಬರು ಒಂದೇ ಸಿನಿಮಾದಲ್ಲಿ ಕೆಲಸ ಮಾಡಿರಲಿಲ್ಲ.

Simbu Joined Maniratnam Thug Life movie Overseas rights sold for big price Kamal Haasan leading the film

ಮೂರು ದಶಕಗಳ ಬಳಿಕ ಇವರಿಬ್ಬರ ಅಭಿಮಾನಿಗಳಿಗೆ ಖುಷಿ ವಿಷಯ ಸಿಕ್ಕಿದೆ. ಕಮಲ್ ಹಾಸನ್ ಹಾಗೂ ಮಣಿರತ್ನಂ ಇಬ್ಬರೂ ಜೊತೆಯಾಗಿ ಕೆಲಸ ಮಾಡುತ್ತಿರುವ ಆ ಸಿನಿಮಾವೇ ಥಗ್ಸ್ ಲೈಫ್'. ಈಗಾಗಲೇ ಕಮಲ್ ಹಾಸನ್ ಪಾತ್ರದ ಪೋಸ್ಟರ್‌ಗಳು ರಿಲೀಸ್ ಆಗಿದ್ದು, ಅವುಗಳಿಗೆ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ.

ಈಗ ಮಣಿರತ್ನಂ ನಿರ್ದೇಶಿಸುತ್ತಿರುವ ಈ 'ಥಗ್ಸ್ ಲೈಫ್'ಗೆ ಮತ್ತೊಬ್ಬ ಸ್ಟಾರ್ ನಟ ಸೇರಿಕೊಂಡಿದ್ದಾರೆ. ತಮಿಳಿನ ಮಾಸ್ ಹೀರೊ ಸಿಲಂಬರಸನ್ ಈ ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ. ಈಗಾಗಲೇ ಪೋಸ್ಟರ್ ರಿಲೀಸ್ ಆಗಿದ್ದು, ಸಿನಿ ಪ್ರಿಯರು ಆ ಫೋಸ್ಟರ್‌ಗೆ ಭೇಷ್ ಎಂದಿದ್ದಾರೆ.

'ಥಗ್ ಲೈಫ್' ಸಿನಿಮಾ ತಂಡಕ್ಕೀಗ ಸಿಂಬು ಸೇರ್ಪಡೆಯಾಗಿದ್ದಾರೆ. ಮರುಭೂಮಿಯಲ್ಲಿ ಕಾರ್ ಚೇಸಿಂಗ್ ಮಾಡುತ್ತಾ ಗುಂಡು ಹಾರಿಸುವ ಝಲಕ್ ಈ 'ಥಗ್ಸ್ ಲೈಫ್' ತಂಡದಲ್ಲಿದೆ. ಸಿಂಬು ಜೊತೆ ಸ್ಟೈಲ್, ಲುಕ್, ಮಾಸ್ ಲುಕ್‌ ಕಿಕ್ ಕೊಡುತ್ತಿದೆ. ಹಾಗೇ ಸಿಂಬು ಜೊತೆ ಈ ಸಿನಿಮಾದಲ್ಲಿ ನಟಿ ತ್ರಿಶಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Simbu Joined Maniratnam Thug Life movie Overseas rights sold for big price Kamal Haasan leading the film

ಸಿಂಬು 'ಥಗ್ಸ್ ಲೈಫ್' ತಂಡವನ್ನು ಸೇರಿಕೊಳ್ಳುತ್ತಿದ್ದಂತೆ ಸಿನಿಮಾಗೂ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ವರದಿಯಾಗಿರೋ ಪ್ರಕಾರ, ಸಿಂಬು ಪೋಸ್ಟರ್ ರಿಲೀಸ್ ಆದ ಬೆನ್ನಲ್ಲೇ ಈ ಸಿನಿಮಾದ ಓವರ್‌ಸೀಸ್ ಹಕ್ಕುಗಳು ಕೂಡ ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆಯಂತೆ. ಈ ಹಿಂದೆ ಓವರ್‌ಸೀನ್ ಡಿಜಿಟಲ್ ಹಕ್ಕುಗಳು 45 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎನ್ನಲಾಗಿತ್ತು. ಆದ್ರೀಗ ಈ ಸಿನಿಮಾ ಹಕ್ಕುಗಳು ಸುಮಾರು 60 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ.

'ಥಗ್ಸ್ ಲೈಫ್' ಸಿನಿಮಾವನ್ನು ಕಮಲ್‌ ಹಾಸನ್‌, ಮಣಿ ರತ್ನಂ, ಆರ್‌ ಮಹೇಂದ್ರನ್‌ ಮತ್ತು ಶಿವ ಅನಂತ್‌ ಜೊತೆಯಾಗಿ ರಾಜ್‌ ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ. ಎ. ಆರ್‌. ರೆಹಮಾನ್‌ ಸಂಗೀತ ನೀಡುತ್ತಿದ್ದಾರೆ.

ಈ ಸಿನಿಮಾದಲ್ಲಿ ದಿಗ್ಗಜರ ತಂಡವೇ ಇದೆ. ಕಮಲ್, ಸಿಂಬು ತ್ರಿಶಾ ಜೊತೆ ಜೋಜು ಜಾರ್ಜ್, ನಾಸರ್, ಅಭಿರಾಮಿ, ಐಶ್ವರ್ಯಾ ಲಕ್ಷ್ಮಿ, ಗೌತಮ್ ಕಾರ್ತಿಕ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದುಲ್ಖರ್ ಸಲ್ಮಾನ್ ನಟಿಸಬೇಕಿದ್ದ ಪಾತ್ರದಲ್ಲಿ ಸಿಂಬು ಹಾಗೂ ಜಯಂ ರವಿ ನಟಿಸಬೇಕಿದ್ದ ಪಾತ್ರದಲ್ಲಿ ಅಶೋಕ್ ಸೆಲ್ವನ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ಅರವಿಂದ್ ಸಾಮಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿನೂ ಇದೆ.

More from Filmibeat

English summary
Simbu Joined Maniratnam Thug Life movie Overseas rights sold for big price Kamal Haasan leading the film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X