"ಕಸ್ತೂರಿ ನೀನು ಕಾಗೆಗಿಂತ ಕಡೆ, ಕೆಟ್ಟದಾಗಿ ಸಾಯ್ತೀಯ"; ಸುಚಿ ಲೀಕ್ಸ್ ಸುಚಿತ್ರಾ ಆಕ್ರೋಶ
ಹಲವು ವರ್ಷಗಳ ಹಿಂದೆ ತಮಿಳಿನ ಗಾಯಕಿ ಸುಚಿತ್ರಾ ಅವರು ಸುಚಿ ಲೀಕ್ಸ್ ವಿವಾದದ ಮೂಲಕ ಸುದ್ದಿಯಲ್ಲಿ ಇದ್ದರು. ಸುಚಿ ಲೀಕ್ಸ್ ಬಳಿಕ ಸುಚಿತ್ರಾ ತಮಿಳು ಚಿತ್ರರಂಗದಿಂದ ದೂರ ಉಳಿದಿದ್ದರು. ಪತಿಯಿಂದಲೂ ಬೇರೆಯಾಗಿದ್ದರು. ಹಲವು ವರ್ಷಗಳ ಬಳಿಕ ಸುಚಿತ್ರಾ ಮತ್ತೆ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು.
ಆ ಸಂದರ್ಶನದಲ್ಲಿ ತಮ್ಮ ಮಾಜಿ ಪತಿ ಕಾರ್ತಿಕ್ ಕುಮಾರ್ ಸಲಿಂಗಕಾಮಿ ಎಂದು ಹೇಳಿಕೆ ಕೊಡುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು. ತಮ್ಮ ಪತಿಯೊಂದಿಗೆ ನಟ ಧನುಷ್‌ರನ್ನೂ ಲಿಂಕ್ ಮಾಡಿದ್ದರು. ಈ ಸಂದರ್ಶನ ವಿವಾದಕ್ಕೆ ಎಡೆ ಮಾಡಿಕೊಡುತ್ತಿದ್ದಂತೆ ಮತ್ತೊಬ್ಬ ವಿವಾದಾತ್ಮಕ ನಟಿ ಕಸ್ತೂರಿ ಕಾಮೆಂಟ್ ಮಾಡಿದ್ದರು. ಅದಕ್ಕೀಗ ಗಾಯಕಿ ಸುಚಿತ್ರಾ ಕೆಟ್ಟದಾಗಿ ಟೀಕೆ ಮಾಡಿದ್ದಾರೆ.

ಎರಡು ದಶಕಗಳಿಂದ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. 2005ರಲ್ಲಿ ಕಾರ್ತಿಕ್ ಕುಮಾರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಸುಚಿತ್ರಾ 12 ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಆದರೆ, ಸುಚಿ ಲೀಕ್ಸ್ ಬಳಿಕ ಇಬ್ಬರ ದಾಂಪತ್ಯದಲ್ಲಿ ಸಮಸ್ಯೆಗಳಾಗಿ ಬೇರ್ಪಟ್ಟಿದ್ದರು. ಬಳಿಕ ವಿದೇಶದಲ್ಲಿ ಹಲವು ವರ್ಷ ಅಲ್ಲಿಯೇ ನೆಲೆಸಿದ್ದರು.
ಒಂದು ತಿಂಗಳ ಹಿಂದಷ್ಟೇ ಗಾಯಕಿ ಸುಚಿತ್ರಾ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು. ಅದರಲ್ಲಿ ತನ್ನ ಪತಿ ಕಾರ್ತಿಕ್ ಕುಮಾರ್ ಸಲಿಂಗಕಾಮಿ. ಧನುಷ್ ಹಾಗೂ ನನ್ನ ಪತಿ ಇಬ್ಬರೂ ಮದ್ಯಪಾನ ಮಾಡಿ ಒಟ್ಟಿಗೆ ರೂಮಿನೊಳಗೆ ಹೋಗಿದ್ದನ್ನು ನಾನು ನೋಡಿದ್ದೇನೆ. ಮದುವೆಯಾದ ಎರಡು ವರ್ಷಗಳ ಬಳಿಕ ನನ್ನ ಪತಿ ಸಲಿಂಗಕಾಮಿ ಎಂಬುದು ಗೊತ್ತಾಯ್ತು ಎಂದು ಹೇಳಿದ್ದರು. ಇದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.
ಗಾಯಕಿ ಸುಚಿತ್ರಾ ಸಂದರ್ಶನ ವಿವಾದ ಸೃಷ್ಟಿಸುತ್ತಿದ್ದಂತೆ 'ಜಾಣ' ಸಿನಿಮಾದ ನಟಿ ಕಸ್ತೂರಿ ಟೀಕಿಸಿದ್ದರು. "ಗಾಯಕಿ ಸುಚಿತ್ರಾಗೆ ವೈದ್ಯಕೀಯ ನೆರವು ಬೇಕಿದೆ. ಮನೋವೈದ್ಯರ ಸಹಾಯದ ಅಗತ್ಯವಿದೆ. ಅವರಿಗೆ ತಮ್ಮ ಕಷ್ಟಗಳನ್ನು, ನೋವುಗಳನ್ನು ಹೇಳಿಕೊಳ್ಳಲು ಸಂಗಾತಿಯಿಲ್ಲ. ಹೀಗಾಗಿಯೇ ಮಾಧ್ಯಮಗಳಲ್ಲಿ ಈ ರೀತಿ ಮಾತಾಡುತ್ತಿದ್ದಾರೆ" ಎಂದು ಹೇಳಿದ್ದರು.
ಇದೇ ವೇಳೆ ಕಾರ್ತಿಕ್ ಕುಮಾರ್ ಅವರನ್ನು ಮದುವೆ ಆದಾಗ ಸುಚಿತ್ರಾಗೆ ತಂದೆ, ತಾಯಿ ಇರಲಿಲ್ಲ. ಅವರ ಪೋಷಕರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಚಿತ್ರಾ ಅವರ ಸಮಸ್ಯೆಯನ್ನು ಬಗೆಹರಿಸಿ ಮಾರ್ಗದರ್ಶನ ನೀಡಲು ಯಾರೂ ಇಲ್ಲ" ಎಂದು ನಟಿ ಕಸ್ತೂರಿ ಶಂಕರ್ ಹೇಳಿದ್ದರು. ಇದು ಸುಚಿತ್ರಾಗೆ ಮತ್ತಷ್ಟು ಕೋಪ ತರಿಸಿದೆ.
"ಕಸ್ತೂರಿ ನೀನು ಕಾಗೆಗಿಂತ ಕಡೆ. ನೀನೊಬ್ಬಳು ಸತ್ತ ಕಾಗೆ ಇದ್ದಂತೆ. ಕೆಟ್ಟದಾಗಿ ಸಾಯುತ್ತೀಯಾ" ಎಂದು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೆ ತನ್ನ ತಂದೆ, ತಾಯಿ ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಬಗ್ಗೆ ಹೀಗೆ ಕೆಟ್ಟದಾಗಿ ಮಾತಾಡಬಾರದಿತ್ತು ಎಂದು ಕಿಡಿಕಾರಿದ್ದಾರೆ.


Click it and Unblock the Notifications