"ನನ್ನ ಗಂಡ ಸಲಿಂಗಕಾಮಿ.. ಅವ್ನು, ಧನುಷ್ ಒಂದೇ ರೂಮ್‌ನಲ್ಲಿ ಏನ್ ಮಾಡ್ತಿದ್ರೋ ಗೊತ್ತಿಲ್ಲ"; ಸುಚಿತ್ರಾ

ಕಾಲಿವುಡ್ ಅಂಗಳದಲ್ಲಿ ಕೆಲ ವರ್ಷಗಳ ಹಿಂದೆ ಸುಚಿ ಲೀಕ್ಸ್ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಧನುಷ್, ತ್ರಿಶಾ, ರಾಣಾ, ಆಂಡ್ರಿಯಾ, ಅನಿರುದ್ಧ್ ಸೇರಿದಂತೆ ಹಲವರ ಖಾಸಗಿ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿ ಭಾರೀ ಚರ್ಚೆ ನಡೆದಿತ್ತು. ತಮಿಳು ಗಾಯಕಿ ಸುಚಿತ್ರಾ ಇದೆಲ್ಲ ಮಾಡುತ್ತಿದ್ದಾರೆ ಎನ್ನಲಾಗಿತ್ತು.

ಖುದ್ದು ಸುಚಿತ್ರಾ ಅದೆಲ್ಲಾ ಸುಳ್ಳು ಎಂದು ಖಂಡಿಸಿದ್ದರು. ಇದೀಗ ಹೊಸ ಸಂದರ್ಶನದಲ್ಲಿ ಮಾತನಾಡಿರುವ ಸುಚಿತ್ರಾ ಶಾಕಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ಬಾರಿ ತಮ್ಮ ಮಾಜಿ ಪತಿ ನಟ ಕಾರ್ತಿಕ್ ಕುಮಾರ್ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆತ ಗೇ ಎಂದು ಹೇಳಿದ್ದಾರೆ. ವೈದ್ಯರು ನನಗೆ ಈ ಬಗ್ಗೆ ಹೇಳಿದ್ದು ಎಂದು ಸುಚಿತ್ರಾ ವಿವರಿಸಿದ್ದಾರೆ. ಇನ್ನು ಧನುಷ್- ಐಶ್ವರ್ಯ ವಿಚ್ಛೇದನದ ಬಗ್ಗೆಯೂ ಮಾತನಾಡಿದ್ದಾರೆ.

Singer Suchitra shocking allegations over ex husband karthik and actor dhanush

ಸುಚಿತ್ರಾ ಮಾತನಾಡಿ ತಮ್ಮ ಮಾಜಿ ಪತಿ, ನಟ ಮತ್ತು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕಾರ್ತಿಕ್ ಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 2016 ರಲ್ಲಿ ಸುಚಿತ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಾರ್ತಿಕ್ ಕುಮಾರ್ ಮತ್ತು ಧನುಷ್ ಅವರ ವೈಯಕ್ತಿಕ ಫೋಟೋಗಳನ್ನು ಸುಚಿಲೀಕ್ಸ್(suchi leaks) ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು. ಅವರು ಫ್ರಾಂಕ್ ಮಾಡಲು ಈ ರೀತಿ ಮಾಡಿದು ಎಂದು ಹೇಳಿದ್ದಾರೆ. 'ಯಾರಿ ನೀ ಮೋಹಿನಿ' ಚಿತ್ರದ ನಂತರ ಧನುಷ್ ಹಾಗೂ ತಮ್ಮ ಮಾಜಿ ಪತಿ ಕಾರ್ತಿಕ್ ಕುಮಾರ್ ಜೊತೆ ಆತ್ಮೀಯ ಸ್ನೇಹಿತರಾಗಿದ್ದರು ಎಂದಿದ್ದಾರೆ.

ಅವರದ್ದೊಂದು ಗ್ರೂಪ್ ಇದೆ. ಆ ಗ್ರೂಪ್ ಜಗತ್ತನ್ನು ಬದಲಾಯಿಸುತ್ತದೆ ಎಂದು ಹೇಳುತ್ತಿದ್ದರು. ಆ ಗ್ರೂಪ್‌ನಲ್ಲಿ ಧನುಷ್, ನನ್ನ ಮಾಜಿ ಪತಿ, ಆಂಡ್ರಿಯಾ ಮತ್ತು ರಾಮು ಎಂಬ ಛಾಯಾಗ್ರಾಹಕ ಕೂಡ ಇದ್ದರು. ಆದರೆ ಆ ಗ್ರೂಪ್‌ನಲ್ಲಿ ನಾನಿಲ್ಲ. ವಿಜಯ್ ಯೇಸುದಾಸ್ ಅವರ ಮನೆಯಲ್ಲಿ ಅವರಿಗೆ ಹೋಮ್ ಥಿಯೇಟರ್ ಇತ್ತು. ಅಲ್ಲಿ ಭೇಟಿಯಾಗುತ್ತಿದ್ದರು. ದೇಶ ವಿದೇಶಗಳ ಸಿನಿಮಾಗಳನ್ನು ನೋಡಿ ಚರ್ಚಿಸುತ್ತಿದ್ದರು. ಸಿನಿಮಾ ಬಿಟ್ಟು ಬೇರೆ ಏನೇನೊ ಮಾಡುತ್ತಿದ್ದರು ಎಂದು ಬಾಂಬ್ ಸಿಡಿಸಿದ್ದಾರೆ.

ಒಮ್ಮೆ ಬೆಳಗಿನ ಜಾವ ಮೂರು ಗಂಟೆಗೆ ನನ್ನ ಮಾಜಿ ಪತಿ ಮನೆಗೆ ಬಂದರು. ಆತನ ಕಾಲು ನಡುಗುತ್ತಿತ್ತು. ಸಿಗರೇಟ್ ಸೇದುತ್ತಿದ್ದ. ಆಗಲೇ, ಧನುಷ್, ನಿರ್ದೇಶಕ ಜವಾಹರ್ ಫೋನ್‌ ಇಂದ ಕಾರ್ತಿಕ್‌ಗೆ ಅಸಹ್ಯಕರ ಮೆಸೇಜ್‌ಗಳನ್ನು ಕಳುಹಿಸಿದ್ದ. ಆಗಲೇ ಸುಚೀ ಲೀಕ್ಸ್‌ಗೆ ಶುರುವಾಯಿತು ಎನ್ನಬಹುದು. ಅವರಿಗೆ ಟ್ವೀಟ್ ಮಾಡಲು ಒಬ್ಬರ ಟ್ವಿಟರ್ ಖಾತೆಯ ಅಗತ್ಯವಿತ್ತು. ಆಗ ಕಾರ್ತಿಕ್ ಖುಷಿಯಿಂದ ತನ್ನ ಪತ್ನಿಯಾದ ನನ್ನನ್ನು ಬಲಿಕೊಟ್ಟ ಎಂದು ಸುಚಿತ್ರಾ ಆಗ್ರಹ ವ್ಯಕ್ತಪಡಿಸಿದ್ದಾರೆ.

Singer Suchitra shocking allegations over ex husband karthik and actor dhanush

ಒಂದು ವರ್ಷದ ಬಳಿಕ ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದೆ. ನಾನು ವಿಚ್ಛೇದನ ಪಡೆದಿದ್ದೇನೆ. ಕಾರ್ತಿಕ್ ನನ್ನ ಮಾನಸಿಕ ಸ್ಥಿತಿಯ ಬಗ್ಗೆ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾನೆ. ಸುಚೀ ಲೀಕ್ಸ್ ಕಾರಣಕ್ಕೆ ಧನುಷ್ ಮತ್ತು ಕಾರ್ತಿಕ್ ಇನ್ನೂ ತನ್ನ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸುಚಿತ್ರಾ ಆರೋಪಿಸಿದ್ದಾರೆ. ಸುಚೀ ಲೀಕ್ಸ್‌ನಲ್ಲಿ ಅಷ್ಟೆಲ್ಲಾ ನಟಿಯರ ಫೋಟೊಗಳು ಬಂತು. ಯಾರೊಬ್ಬರೂ ಯಾಕೆ ದೂರು ನೀಡಲಿಲ್ಲ. ಅದಕ್ಕೆ ಕಾರಣ ಏನು ಎಂದು ಸುಚಿತ್ರಾ ಪ್ರಶ್ನಿಸಿದ್ದಾರೆ.

ತಮ್ಮ ಮಾಜಿ ಪತಿ ಕಾರ್ತಿಕ್ ವಿರುದ್ಧವೂ ಸುಚಿತ್ರಾ ಗಂಭೀರ ಆರೋಪ ಮಾಡಿದ್ದಾರೆ. ಅವನು ಸಲಿಂಗಕಾಮಿ. ಆದರೆ ಅದನ್ನು ಹೇಳಲು ಅವನಿಗೆ ಧೈರ್ಯವಿಲ್ಲ. ನನ್ನ ಪತಿ ಸಲಿಂಗಕಾಮಿ ಎಂದು ನನಗೆ ಮದುವೆಯಾದ 2 ವರ್ಷಕ್ಕೆ ತಿಳಿಯಿತು. ಧನುಷ್ ಹಾಗೂ ನನ್ನ ಮಾತಿ ಪತಿ ಒಟ್ಟಿಗೆ ಕೋಣೆಯಲ್ಲಿ ಏನು ಮಾಡುತ್ತಿದ್ದರು? ಪಾರ್ಟಿಗಳಲ್ಲಿ ಏನು ನಡೆಯುತ್ತಿತ್ತು ಎಂದು ಸುಚಿತ್ರಾ ಕೇಳಿದ್ದಾರೆ.

ತಾನು ಗೇ (ಸಲಿಂಗಕಾಮಿ) ಎಂದು ಕಾರ್ತಿಕ್ ಬಹಿರಂಗವಾಗಿ ಹೇಳಿದ್ದ. ಅವನಿಗೆ ಇಬ್ಬರು ಗೆಳೆಯರಿದ್ದರು. ಮೂವರೂ ಆಗಾಗ ಹೋಟೆಲ್ ರೂಮಿನಲ್ಲಿ ಸೇರುತ್ತಿದ್ದರು. ಒಂದು ದಿನ ತನ್ನ ಐಪ್ಯಾಡ್‌ನಲ್ಲಿ ಅವರೆಲ್ಲಾ ಒಟ್ಟಿಗೆ ಇರುವ ಫೋಟೊಗಳನ್ನು ನೋಡಿ ಶಾಕ್ ಆಗಿತ್ತು. ಅವನು 100% ಸಲಿಂಗಕಾಮಿ. ಯಾರಿಗೂ ತಿಳಿಯದಂತೆ ಸಲಿಂಗಕಾಮಿಯಾಗಿ ವಿಭಿನ್ನ ಜೀವನ ನಡೆಸುತ್ತಿದ್ದ. ಮದುವೆಯಾದ 10 ವರ್ಷಗಳ ನಂತರ ನಾನು ಅದನ್ನು ಅರಿತುಕೊಂಡೆ ಎಂದು ಸುಚಿತ್ರಾ ವಿವರಿಸಿದ್ದಾರೆ.

ನಮಗೆ ಮದುವೆ ಆಗಿ 2 ವರ್ಷ ಕಳೆದರೂ ಮಕ್ಕಳಿಲ್ಲದ ಕಾರಣ ವೈದ್ಯರ ಬಳಿ ಹೋಗಿದ್ದೆವು. ಇದಕ್ಕೆ ಆತನೇ ಕಾರಣ ಎಂದರು. ಪುರುಷ ಸ್ನೇಹಿತರೊಂದಿಗೆ ಸುತ್ತಾಡುವುದನ್ನು ಯಾವಾಗಲೂ ನೋಡುತ್ತಿದ್ದೆ. ಒಮ್ಮೆ ಬಾಂಬೆಯಲ್ಲಿ ಒಟ್ಟಿಗೆ ರೂಮ್ ಬುಕ್ ಮಾಡಿ ಸೇರಿದ್ದರು. ಐಪ್ಯಾಡ್‌ನಲ್ಲಿ ಫೋಟೊಗಳನ್ನು ನೋಡಿ ಗೊತ್ತಾಯಿತು. ಬಳಿಕ ಪದೇ ಪದೇ ಜಗಳ ನಡೆಯುತ್ತಿತ್ತು. ನಟ ಧನುಷ್ ಕೂಡ ಗೇ ಎನ್ನುವ ಅರ್ಥದಲ್ಲಿ ಸುಚಿತ್ರಾ ಮಾತನಾಡಿದ್ದಾರೆ.

More from Filmibeat

English summary
Singer Suchitra on Actor dhanush and her husband Karthik Kumar friendship
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X