ತಮಿಳಿನ ಸ್ಟಾರ್ ನಟನ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡ 'ಸೀತಾ ರಾಮಂ' ಚೆಲುವೆ ಮೃಣಾಲ್ ಠಾಕೂರ್!

2014ರಲ್ಲಿ ಬಿಡುಗಡೆಗೊಂಡ ಮರಾಠಿ ಚಿತ್ರ ವಿಟ್ಟಿ ದಂಡು ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟ ನಟಿ ಮೃಣಾಲ್ ಠಾಕೂರ್ ಬಳಿಕ ಬಾಲಿವುಡ್‌ನಲ್ಲಿ ಏಳೆಂಟು ಚಿತ್ರಗಳಲ್ಲಿ ನಟಿಸಿದರು. ಈ ಯಾವ ಚಿತ್ರದಲ್ಲಿಯೂ ಮೃಣಾಲ್ ಠಾಕೂರ್‌ಗೆ ಬ್ರೇಕ್ ಹಾಗೂ ಖ್ಯಾತಿ ದೊರಕಲಿಲ್ಲ. ಆದರೆ ಕಳೆದ ವರ್ಷ ತೆರೆಕಂಡ ತೆಲುಗಿನ ಸೀತಾ ರಾಮಂ ಎಂಬ ಚಿತ್ರ ಮೃಣಾಲ್ ಠಾಕೂರ್‌ಗೆ ದೊಡ್ಡ ಬ್ರೇಕ್ ಕೊಟ್ಟಿತು.

ನೂರು ಕೋಟಿ ಕ್ಲಬ್ ಸೇರಿದ ಈ ಚಿತ್ರ ಕಂಟೆಂಟ್ ವಿಚಾರವಾಗಿ ಸದ್ದು ಮಾಡಿದರೆ, ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಮೃಣಾಲ್ ಠಾಕೂರ್ ದೇಶವ್ಯಾಪಿ ಹೆಸರು ಮಾಡಿದರು. ಮೃಣಾಲ್ ಠಾಕೂರ್ ಸೀತಾ ಎಂದೇ ಖ್ಯಾತಿ ಪಡೆದರು. ಹೀಗೆ ಸೀತಾ ರಾಮಂ ಮೂಲಕ ಹೆಸರು ಮಾಡುವುದರ ಜತೆಗೆ ಬೇಡಿಕೆಯನ್ನೂ ಸಹ ಮೃಣಾಲ್ ಠಾಕೂರ್ ಗಿಟ್ಟಿಸಿಕೊಂಡರು.

Sita Ramam fame Mrunal Thakur grabs lead role in Suriya 42 film

ಈ ಚಿತ್ರದ ಬಳಿಕ ಹಿಂದಿಯ ಐದು ಸಿನಿಮಾಗಳಿಗೆ ಮೃಣಾಲ್ ಠಾಕೂರ್ ಸಹಿ ಹಾಕಿದ್ದು, ಇದರ ಜತೆಗೆ ತೆಲುಗಿನ ನಾನಿ ನಟನೆಯ ಚಿತ್ರಕ್ಕೂ ಸಹ ಸಹಿ ಹಾಕಿದ್ದಾರೆ. ಹೀಗೆ ಸಾಲು ಸಾಲು ಆಫರ್‌ಗಳನ್ನು ಪಡೆದುಕೊಂಡ ನಟಿ ಮೃಣಾಲ್ ಠಾಕೂರ್ ಈಗ ತಮಿಳು ಚಿತ್ರವೊಂದಕ್ಕೆ ಸಹಿ ಹಾಕಿದ್ದು, ಕಾಲಿವುಡ್ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.

ಹೌದು, ತಮಿಳಿನ ಸ್ಟಾರ್ ನಟ ಸೂರ್ಯ ನಟನೆಯ 42ನೇ ಚಿತ್ರಕ್ಕೆ ಮೃಣಾಲ್ ಠಾಕೂರ್ ನಾಯಕಿಯಾಗಿ ಆಯ್ಕೆಯಾಗಿದ್ದು, ಈ ಚಿತ್ರಕ್ಕೆ ಸಿರುತೈ ಸಿವ ನಿರ್ದೇಶನವಿರಲಿದೆ. ತ್ರೀಡಿ ತಂತ್ರಜ್ಞಾನದಲ್ಲಿ ಚಿತ್ರೀಕರಣವಾಗಲಿರುವ ಈ ಚಿತ್ರ ಬಿಗ್ ಬಜೆಟ್‌ನ ಚಿತ್ರವಾಗಿರಲಿದ್ದು, ಸೌತ್‌ನಲ್ಲಿ ನಟಿ ಮತ್ತಷ್ಟು ಖ್ಯಾತಿ ಪಡೆಯುವುದಂತೂ ಪಕ್ಕಾ. ಇನ್ನು ಈ ಚಿತ್ರದ ಹಿಂದಿ ಸ್ಯಾಟಲೈಟ್ ಹಕ್ಕು, ಚಿತ್ರಮಂದಿರದ ವಿತರಣೆ ಹಕ್ಕು ಹಾಗೂ ಡಿಜಿಟಲ್ ಹಕ್ಕು ಬರೋಬ್ಬರಿ 100 ಕೋಟಿಗೆ ಮಾರಾಟವಾಗಿದೆ. ಈ ಚಿತ್ರ ಒಟ್ಟು ಹತ್ತು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Sita Ramam fame Mrunal Thakur grabs lead role in Suriya 42 film. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X