Sivakarthikeyan: ಸಂಭಾವನೆ ಕಿರಿಕ್, ಚಿತ್ರತಂಡದ ವಿರುದ್ಧ ಶಿವಕಾರ್ತಿಕೇಯನ್ ದೂರು!
ತಮಿಳು ನಟ ಶಿವಕಾರ್ತಿಕೇಯನ್ ಸದ್ಯ ಸಾಲು, ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಲವ್ ಸ್ಟೋರಿಯಿಂದ ಹಿಡಿದು, ಟ್ರ್ಯಾಜಿಡಿ ಸ್ಟೋರಿಗಳ ತನಕ ಎಲ್ಲಾ ರೀತಿಯ ಕಥೆಗಳಲ್ಲಿ ಶಿವಕಾರ್ತಿಕೇಯನ್ ಅಭಿನಯಿಸಿದ್ದಾರೆ. ಈಗ ಸಿನಿಮಾ ಬಿಟ್ಟು, ಬೇರೆ ವಿಚಾರಕ್ಕೆ ಸುದ್ದಿ ಆಗಿದ್ದಾರೆ.
ನಟ ಶಿವಕಾರ್ತಿಕೇಯನ್ ಸದ್ಯ ಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರತಂಡದ ಜೊತೆಗೆ ಸಂಭಾವನೆ ವಿಚಾರದಲ್ಲಿ ಕಿರಿಕ್ ಆಗಿದೆ. ಹಾಗಾಗಿ ಹಾಗಾಗಿ ಅವರು ಚಿತ್ರತಂಡದ ವಿರುದ್ಧ ಸಮರಕ್ಕೆ ಸಜ್ಜಾಗಿದ್ದಾರೆ. ಈ ವಿಚಾರದಲ್ಲಿ ಶಿವಕಾರ್ತಿಕೇಯನ್ ಕಾನೂನು ಮೊರೆ ಹೋಗಿದ್ದು, ಕೋರ್ಟ್‌ನಲ್ಲಿ ಕೇಸು ದಾಖಲಿಸಿದ್ದಾರೆ.
ಶಿವಕಾರ್ತಿಕೇಯನ್ ಅಭಿನಯದ 'ಮಿಸ್ಟರ್ ಲೋಕಲ್' ಚಿತ್ರದ ಬಗ್ಗೆ ನಿಮಗೆ ಗೊತ್ತಿರ ಬೇಕು, ಸಿನಿಮಾವನ್ನು ನೀವು ನೋಡಿಯೂ ಇರಬೇಕು. ಈ ಚಿತ್ರದ ರಿಲೀಸ್ ಸಮಯದಲ್ಲಿ ಹೆಚ್ಚಾಗಿ ಸದ್ದು ಮಾಡದೇ ಈಗ 3 ವರ್ಷದ ನಂತರ ವಿವಾದದ ಮೂಲಕ ಸುದ್ದಿ ಆಗುತ್ತಿದೆ.

ಶಿವಕಾರ್ತಿಕೇಯನ್ ಸಂಭಾವನೆ ಉಳಿಸಿಕೊಂಡ ನಿರ್ಮಾಪಕ!
'ಮಿಸ್ಟರ್ ಲೋಕಲ್' ಚಿತ್ರದಲ್ಲಿ ನಟ ಶಿವಕಾರ್ತಿಕೇಯನ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಆದರೆ ಚಿತ್ರ ರಿಲೀಸ್ ಆಗಿ ವರ್ಷಗಳೇ ಕಳೆದರು, ಅವರಿಗೆ ಕೊಡಬೇಕಾದ ಸಂಭಾವನೆ ಪ್ಯಾಕೇಜ್ ಪೂರ್ಣವಾಗಿ ಕೊಡದೆ ನಿರ್ಮಾಪಕರು ಬಾಕಿ ಉಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹಾಗಾಗಿ ಸ್ಟುಡಿಯೋ ಗ್ರೀನ್ ಫಿಲಂಸ್‌ನ ನಿರ್ಮಾಪಕ ಜ್ಞಾನವೇಲ್ ರಾಜಾ ವಿರುದ್ಧ ಶಿವಕಾರ್ತಿಕೇಯನ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

4 ಕೋಟಿ ಸಂಭಾವನೆ ನೀಡಬೇಕಿತ್ತು!
ದೂರಿನಲ್ಲಿ ಶಿವಕಾರ್ತಿಕೇಯನ್ ನಮೂದಿಸಿರುವ ಪ್ರಕಾರ 'ಮಿ.ಲೋಕಲ್' ಚಿತ್ರಕ್ಕಾಗಿ ಕಾರ್ತಿಕೇಯನ್ ಒಪ್ಪಿಕೊಂಡಿದ್ದ 15 ಕೋಟಿ ರೂ. ಆದರೆ ನಿರ್ಮಾಣ ಸಂಸ್ಥೆ 11 ಕೋಟಿ ರೂ.ಗಳನ್ನು ಮಾತ್ರ ಕೊಟ್ಟು ಮಿಕ್ಕ ಹಣವನ್ನು ಕೊಟ್ಟಿಲ್ಲವಂತೆ. ಹಾಗಾಗಿ ಆ ಹಣವನ್ನು ನೀಡುವಂತೆ ಹಲವು ಬಾರಿ ಕೇಳಿದ್ದರು. ನಿರ್ಮಾಣ ಸಂಸ್ಥೆ ಮಿಕ್ಕ ಸಂಭಾವನೆ ಕೊಟ್ಟಿಲ್ಲ. ಹಾಗಾಗಿ ಸ್ಟುಡಿಯೋ ಗ್ರೀನ್ ವಿರುದ್ಧ ಶಿವಕಾರ್ತಿಕೇಯನ್ ಕೋರ್ಟ್ ಮೊರೆ ಹೋಗಿದ್ದಾರೆ.

ಮೇ 13ಕ್ಕೆ ವಿಚಾರಣೆ ಮುಂದೂಡಿಕೆ!
'ಮಿಸ್ಟರ್ ಲೋಕಲ್' ಚಿತ್ರದ ನಿರ್ಮಾಪಕರು ಸಂಭಾವನೆ ಬಾಕಿ ಉಳಿಸಿಕೊಂಡ ಕಾರಣ, ಹಣ ನೀಡುವವರೆಗೆ ನಿರ್ಮಾಣ ಹಂತದಲ್ಲಿರುವ ನಿರ್ಮಾಪಕರ ಸದ್ಯದ ಚಿತ್ರಗಳನ್ನು ಬ್ಯಾನ್ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ವಿಚಾರಣೆಯನ್ನು ಮಾರ್ಚ್ 31ಕ್ಕೆ ಮುಂದೂಡಿದ್ದಾರೆ.
Recommended Video


2019ರಲ್ಲಿ ಬಂದ 'ಮಿಸ್ಟರ್ ಲೋಕಲ್'!
'ಮಿಸ್ಟರ್ ಲೋಕಲ್' 2019ರಲ್ಲಿ ರಿಲೀಸ್ ಆಯ್ತು. ಈ ಚಿತ್ರದಲ್ಲಿ ನಟ ಶಿವಕಾರ್ತಿಕೇಯನ್ ಜೊತೆಗೆ ನಟಿ ನಯನತಾರ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಈ ಚಿತ್ರಕ್ಕೆ ಎಂ ರಾಜೇಶ್ ನಿರ್ದೇಶನದವಿದ್ದು, ರೊಮ್ಯಾಂಟಿಕ್ ಕಾಮಿಡಿ ಕಥಾಹಂದರಯುಳ್ಳ ಕಥೆ ಇದು. ಆದರೆ 'ಮಿಸ್ಟರ್ ಲೋಕಲ್' ಅಷ್ಟೇನು ಯಶಸ್ಸು ಕಾಣಲಿಲ್ಲ. ಬಾಕ್ಸಾಫೀಸ್‌ನಲ್ಲಿ ಸೋತು, ಫ್ಲಾಪ್ ಸಿನಿಮಾಗಳ ಸಾಲು ಸೇರಿದೆ.


Click it and Unblock the Notifications











