For Quick Alerts
  ALLOW NOTIFICATIONS  
  For Daily Alerts

  ವಿಜಯ್ 65ನೇ ಚಿತ್ರದ ಹಾಡಿಗೆ ಸಾಹಿತ್ಯ ರಚಿಸಲಿದ್ದಾರೆ ಸ್ಟಾರ್ ನಟ?

  |

  ಸೌತ್ ಇಂಡಸ್ಟ್ರಿಯಲ್ಲಿ ಸದ್ಯ ವಿಜಯ್ 65ನೇ ಸಿನಿಮಾ ಬಹಳ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ. 'ಕೋಲಮಾವು ಕೋಕಿಲಾ' ಖ್ಯಾತಿಯ ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ ತಯಾರಾಗುತ್ತಿದೆ.

  ಇದೀಗ, ವಿಜಯ್ 65ನೇ ಚಿತ್ರಕ್ಕೆ ತಮಿಳಿನ ಸ್ಟಾರ್ ನಟ ಶಿವಕಾರ್ತಿಕೇಯನ್ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಆದ್ರೆ, ಶಿವಕಾರ್ತಿಕೇಯನ್ ಜೊತೆಯಾಗುತ್ತಿರುವುದು ನಟನಾಗಿ ಅಲ್ಲ, ಗೀತೆ ರಚನೆಕಾರನಾಗಿ ಎನ್ನಲಾಗಿದೆ.

  'ದಳಪತಿ 65' ಸಿನಿಮಾಗೆ ವಿಲನ್ ಆದ ಬಾಲಿವುಡ್ ನ ಖ್ಯಾತ ನಟ

  ಹೌದು, ವಿಜಯ್ 65ನೇ ಚಿತ್ರದ ಹೀರೋ ಇಂಟ್ರೋಡಕ್ಷನ್ ಹಾಡಿಗೆ ಶಿವಕಾರ್ತಿಕೇಯನ್ ಸಾಹಿತ್ಯ ರಚಿಸಲಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿದೆ.

  ಈ ಬಗ್ಗೆ ಖ್ಯಾತ ಕೊರಿಯೋಗ್ರಫರ್ ಸತೀಶ್ ಕೃಷ್ಣನ್ ಸುಳಿವು ನೀಡಿದ್ದಾರೆ. ಅನಿರುದ್ಧ್ ರವಿಚಂದ್ರನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಶಿವಕಾರ್ತಿಕೇಯನ್ ಅವರಿಂದ ಹಾಡೊಂದಕ್ಕೆ ಸಾಹಿತ್ಯ ಬರೆಸುವ ಯೋಜನೆ ಮಾಡಲಾಗಿದೆ.

  ನೆಲ್ಸನ್ ದಿಲೀಪ್ ಕುಮಾರ್ ಈಗಾಗಲೇ ಶಿವಕಾರ್ತಿಕೇಯನ್ ಜೊತೆಯಲ್ಲಿ 'ಡಾಕ್ಟರ್' ಎಂಬ ಚಿತ್ರ ಮಾಡಿದ್ದಾರೆ. ಈ ಸಿನಿಮಾಗೂ ಅನಿರುದ್ಧ್ ರವಿಚಂದ್ರನ್ ಮ್ಯೂಸಿಕ್ ಡೈರೆಕ್ಟರ್. ಈ ಕಾಂಬಿನೇಷನ್ ವಿಜಯ್ 65ನೇ ಸಿನಿಮಾದಲ್ಲೂ ಮುಂದುವರಿಯುತ್ತಿದೆ.

  ಚಿತ್ರರಂಗಕ್ಕೆ ವಿಜಯ್ ಪುತ್ರನ ಎಂಟ್ರಿ: ಹಿಟ್ ಚಿತ್ರದ ರೀಮೇಕ್‌ನಲ್ಲಿ ನಟನೆ?

  ಉ.ಕರ್ನಾಟಕದ ಜನ ಮಾಡಿದ ಸಹಾಯ ನೆನಪಿಸಿಕೊಂಡ ಡಿ ಬಾಸ್ | Roberrt Pre Release Event Hubli | Filmibeat Kannada

  ವಿಜಯ್‌ಗೆ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುವ ಸಾಧ್ಯತೆ ಹೆಚ್ಚಿದೆ. ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  According to the grapevine, Actor Sivakarthikeyan pen the lyrics for the opening song of Thalapathy 65 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X