ಡ್ರಗ್ಸ್ ಪ್ರಚೋದನೆ ದೂರಿಗೆ ತಲೆಬಾಗಿದ ದಳಪತಿ ವಿಜಯ್; ಲಿಯೊ ಹಾಡಿನಲ್ಲಿ ಪ್ರಮುಖ ಬದಲಾವಣೆ!

ಜೂನ್ 22ರಂದು ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ನಟನ ಮುಂದಿನ ಚಿತ್ರ 'ಲಿಯೊ' ಚಿತ್ರದ ಮೊದಲ ಹಾಡು ಬಿಡುಗಡೆಗೊಂಡಿತ್ತು. ವಿಷ್ಣು ಎಡವನ್ ಎಂಬುವವರು ಬರೆದಿದ್ದ ಸಾಹಿತ್ಯಕ್ಕೆ ನಟ ದಳಪತಿ ವಿಜಯ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ದನಿ ನೀಡಿದ್ದಾರೆ.

'ನಾ ರೆಡಿ' ಎಂಬ ಈ ಹಾಡು ಬಿಡುಗೆಡಯಾದ ನಿಮಿಷಗಳಲ್ಲೇ ಮಿಲಿಯನ್‌ಗಟ್ಟಲೇ ವ್ಯೂಸ್ ಪಡೆದುಕೊಂಡು ದಾಖಲೆ ಬರೆದಿದ್ದು, ಅಷ್ಟೇ ವೇಗದಲ್ಲಿ ವಿವಾದವನ್ನೂ ಸಹ ಮೈಮೇಲೆ ಎಳೆದುಕೊಂಡಿತ್ತು.

Smoking awareness line added to Na ready song after RTI case has been filed against Leo

ಹೌದು, ಚೆನ್ನೈನ ಸಾಮಾಜಿಕ ಕಾರ್ಯಕರ್ತನೊಬ್ಬ ಈ ಹಾಡಿನ ವಿರುದ್ಧ ಡ್ರಗ್ಸ್ ವೈಭವೀಕರಣದ ದೂರನ್ನು ದಾಖಲಿಸಿದ್ದರು. ಸೆಲ್ವಂ ಎಂಬ ಸಾಮಾಜಿಕ ಕಾರ್ಯಕರ್ತ ನಾ ರೆಡಿ ಹಾಡಿನಲ್ಲಿ ಡ್ರಗ್ಸ್ ವೈಭವೀಕರಣ ಹಾಗೂ ರೌಡಿಸಂ ಅನ್ನು ಹೊಗಳಲಾಗಿದೆ, 'ಚಿತ್ರತಂಡದ ಮಾದಕ ದ್ರವ್ಯ ನಿಯಂತ್ರಣ ಕಾಯಿದೆ' ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ದೂರನ್ನು ದಾಖಲಿಸಿದ್ದರು.

ಮೊದಲಿಗೆ ಜೂನ್ 25ರಂದು ಆನ್‌ಲೈನ್ ಮೂಲಕ ದೂರನ್ನು ದಾಖಲಿಸಿದ್ದ ಸೆಲ್ವಮ್ ನಂತರ ಇಂದು ( ಜೂನ್ 26 ) ಬೆಳಗ್ಗೆ 10 ಗಂಟೆಗೆ ಪಿಟಿಷನ್ ಸಲ್ಲಿಸಿದ್ದರು. ಹೀಗೆ ದೂರು ದಾಖಲಾಗುತ್ತಾ ಇದ್ದಂತೆ ಎಚ್ಚೆತ್ತ ಲಿಯೊ ಚಿತ್ರತಂಡ ಹಾಡಿನಲ್ಲಿ 'ಧೂಮಪಾನ ಹಾಗೂ ಮದ್ಯಪಾನ ಆರೋಗ್ಯಕ್ಕೆ ಹಾನಿಕರ' ಎಂಬ ಸಾಲನ್ನು ಬಳಸಿದೆ. ಇದಕ್ಕೂ ಮುಂಚೆ ಹಾಡಿನಲ್ಲಿ ಯಾವುದೇ ರೀತಿಯ ಎಚ್ಚರಿಕೆಯ ಸಾಲನ್ನಾಗಲಿ ಬಳಸದಿದ್ದ ಚಿತ್ರತಂಡ ಇದೀಗ ಬದಲಾವಣೆ ಮಾಡಿಕೊಂಡಿದೆ.

ಇನ್ನು ಚಿತ್ರಕ್ಕೆ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳಿದ್ದು, ಇಂತಹ ಮದ್ಯಪಾನ, ಧೂಮಪಾನದ ಹಾವಳಿ ಚಿತ್ರದಲ್ಲಿ ಜೋರಾಗಿಯೇ ಇರಲಿದೆ. ಕಳೆದ ವರ್ಷ ತೆರೆಗೆ ಬಂದಿದ್ದ ಕಮಲ್ ಹಾಸನ್ ನಟನೆಯ ವಿಕ್ರಮ್ ಚಿತ್ರದಲ್ಲಿಯೂ ಸಹ ಡ್ರಗ್ ಹಾಗೂ ಮದ್ಯಪಾನದ ಕುರಿತಾದ ದೃಶ್ಯಗಳು ಹೆಚ್ಚಿದ್ದವು. ಅಲ್ಲದೇ ಮಾಸ್ಟರ್ ಹಾಗೂ ಖೈದಿ ಚಿತ್ರದಲ್ಲಿಯೂ ಈ ಅಂಶಗಳಿದ್ದವು.

More from Filmibeat

English summary
Smoking awareness line added to Na ready song after RTI case has been filed against Leo. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X