'ಪುದುಪೆಟ್ಟೈ' ಚಿತ್ರದ ದೃಶ್ಯದಲ್ಲಿ ಆ ನಟ ನನ್ನ ಹೊಟ್ಟೆಗೆ ನಿಜವಾಗಿ ಒದ್ದುಬಿಟ್ಟಿದ್ರು: ನಟಿ ಸ್ನೇಹಾ

ಬಹುಭಾಷಾ ನಟಿ ಸ್ನೇಹಾ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 'ರವಿಶಾಸ್ತ್ರಿ', 'ಕುರುಕ್ಷೇತ್ರ' ಚಿತ್ರಗಳಲ್ಲಿ ಮಿಂಚಿದ್ದರು. ಇತ್ತೀಚೆಗೆ ಆಕೆ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಒಂದ್ಕಾಲದಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಸ್ನೇಹಾ ಮೋಡಿ ಮಾಡಿದ್ದರು. 'ಪುದುಪೆಟ್ಟೈ' ಚಿತ್ರದಲ್ಲಿ ವೇಶ್ಯೆಯ ಪಾತ್ರಕ್ಕೆ ಜೀವ ತುಂಬಿದ್ದರು.

ಧನುಷ್ ಹೀರೊ ಆಗಿ ನಟಿಸಿದ್ದ 'ಪುದುಪೆಟ್ಟೈ' ಚಿತ್ರಕ್ಕೆ ಸಹೋದರ ಸೆಲ್ವ ರಾಘವನ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರದ ದೃಶ್ಯವೊಂದರಲ್ಲಿ ಸ್ನೇಹಾ ಅವರಿಗೆ ನಟ ಬಾಲಾಸಿಂಗ್ ಥಳಿಸಿ ಹಿಂಸಿಸುವ ದೃಶ್ಯವೊಂದಿದೆ. ಆ ದೃಶ್ಯದಲ್ಲಿ ನಿಜವಾಗಿಯೇ ಬಾಲಾಸಿಂಗ್ ಒದ್ದಿದ್ದರು ಎಂದು ನಟಿ ಸ್ನೇಹಾ ಹೇಳಿರುವುದು ವೈರಲ್ ಆಗ್ತಿದೆ. ನಿರ್ದೇಶಕ ಸೆಲ್ವ ಸರ್ ಇನ್ನು ಚೆನ್ನಾಗಿ ಮಾಡಿ ಎಕ್ಸ್‌ಪ್ರೆಶನ್ ಕೊಡಿ ಎನ್ನುತ್ತಿದ್ರು. ಬಾಲಾಸಿಂಗ್ ಅವರಿಗೆ ಹೊಡೆಯುವುದು, ಒದೆಯುವುದರಲ್ಲಿ ಕಂಟ್ರೋಲ್ ಇರಲಿಲ್ಲ. ಇನ್ನು ಚೆನ್ನಾಗಿ ಮಾಡು ಎಂದು ನಿರ್ದೇಶಕರು ಹೇಳಿದಾಗ ನಿಜವಾಗಿಯೇ ಒದ್ದುಬಿಟ್ರು ಎಂದು ಸ್ನೇಹಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಆ ವೀಡಿಯೋ ಸಖತ್ ವೈರಲ್ ಆಗ್ತಿದೆ.

Sneha Reveals Bala singh Actually Kicked Her During Pudhupettai Shoot Old Interview Goes Viral

ಮಾತು ಮುಂದುವರೆಸಿರುವ ಸ್ನೇಹಾ ಆ ದೃಶ್ಯದ ಬಳಿಕ ನಾನು ಕೊಂಚ ಬ್ರೇಕ್ ಪಡೆದು ಕ್ಯಾರವಾನ್‌ಗೆ ಹೋಗಿ ಅತ್ತಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. "ವಿಷಯ ಗೊತ್ತಾಗಿ ನಿರ್ದೇಶಕ ಸೆಲ್ವ ಸರ್ ಬಂದು ಕೇಳಿದ್ರು.. ನಿಜವಾಗಿ ಒದ್ದುಬಿಟ್ರಾ, ನೋವಾಯ್ತಾ ಅಂದ್ರು.. ಹೌದು ಸರ್.. ನೋವಾಯ್ತು ಎಂದೆ. ಸರಿ ಸ್ವಲ್ಪ ಹೊತ್ತು ಬಿಟ್ಟು ಬನ್ನಿ ಪರವಾಗಿಲ್ಲ ಅಂದ್ರು. ಆ ರೀತಿ ಈ ದೃಶ್ಯವನ್ನು ಸೆರೆಹಿಡಿಯಲಾಗಿತ್ತು" ಎಂದು ಸ್ನೇಹಾ ವಿವರಿಸಿದ್ದಾರೆ.

'ಪುದುಪೆಟ್ಟೈ' ಚಿತ್ರದಲ್ಲಿ ಸ್ನೇಹಾ ವೇಶ್ಯೆ ಪಾತ್ರದಲ್ಲಿ ನಟಿಸಿದ್ದು ಆಗ ಬಹಳ ಸುದ್ದಿಯಾಗಿತ್ತು. ಸ್ನೇಹಾ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿದವರಲ್ಲ. ಸೀರೆ, ಲಂಗಾ ದಾವಣಿ, ಚೂಡಿದಾರ್ ತೊಟ್ಟು ಪಕ್ಕದ್ಮನೆ ಹುಡುಗಿ ರೀತಿಯ ಪಾತ್ರಗಳಲ್ಲಿ ನಟಿಸಿದ್ದೇ ಹೆಚ್ಚು. ದಿಢೀರನೆ ವೇಶ್ಯೆ ಪಾತ್ರದಲ್ಲಿ ನಟಿಸುತ್ತಾರೆ ಎಂದಾಗ ಎಲ್ಲರೂ ಅಚ್ಚರಿ ಪಟ್ಟಿದ್ದರು. ಈ ಸಿನಿಮಾ ಕಥೆ ಕೇಳಲು ನಾನು ನಮ್ಮ ಅಪ್ಪನನ್ನು ಕರೆದುಕೊಂಡು ಹೋಗಿದ್ದೆ ಎಂದು ಇದೇ ಸಂದರ್ಶನದಲ್ಲಿ ಸ್ನೇಹಾ ಹೇಳಿದ್ದರು.

ಈ ಕಥೆ ಕೇಳುವಾಗ ನಮ್ಮ ಅಪ್ಪ ಜೊತೆಗಿದ್ರು.. ಕಥೆ ಹೇಳಿ ಮನೆಗೆ ಬಂದ ಮೇಲೆ ಈ ಪಾತ್ರ ನಾನು ಮಾಡ್ಬೇಕೋ, ಬೇಡವೋ ಎನ್ನುವ ಹಿಂಜರಿಕೆ ಇತ್ತು. ಆಗ ಅಪ್ಪ ಹೇಳಿದ್ರು, ಬಾಲಿವುಡ್‌ನಲ್ಲಿ ಕೆಲ ನಟಿಯರು ಇಂತಹ ಪಾತ್ರಗಳನ್ನು ಮಾಡಿದ್ದಾರೆ. ನಿರ್ದೇಶಕರು ಹೇಳಿದ ರೀತಿ ನೋಡಿದ್ರೆ, ಪಾತ್ರವನ್ನು ಕೆಟ್ಟದಾಗಿ ತೋರಿಸಲ್ಲ, ಅನ್ಸತ್ತೆ, ಚೆನ್ನಾಗಿ ಚಿತ್ರೀಕರಣ ಮಾಡ್ತಾರೆ, ನೀನು ಒಮ್ಮೆ ಯೋಚಿಸು ಅಂದ್ರು. ಅಪ್ಪ ಆ ಮಾತು ಹೇಳಿದ್ದು ನನಗೆ ಅಚ್ಚರಿ ತಂದಿತ್ತು. ನಮ್ಮ ಸ್ನೇಹಿತರೆಲ್ಲಾ ಅಪ್ಪನನ್ನು ಹಿಟ್ಲರ್ ಎಂದೇ ಕರೆಯುತ್ತಿದ್ರು. ಆದ್ರೆ ಅಪ್ಪ ಈ ಪಾತ್ರದ ಬಗ್ಗೆ ಹೀಗೆ ಹೇಳ್ತಾರೆ ಅಂದ್ರೆ, ಇದರಲ್ಲಿ ಏನೋ ಇದೆ ಎಂದು ಒಪ್ಪಿ ನಟಿಸಿದೆ ಎಂದು ಸ್ನೇಹಾ ತಿಳಿಸಿದ್ದರು.

'ಪುದುಪೆಟ್ಟೈ' ಸಿನಿಮಾ ತೆರೆಕಂಡ ಬಳಿಕ ಒಬ್ಬರು ಮಾತ್ರ ಫೋನ್ ಮಾಡಿ ಬೈದ್ರು.. ನೀನ್ಯಾಕೆ ಈ ಪಾತ್ರ ಮಾಡ್ದೆ ಅಂದ್ರು.. ಅದು ಯಾರು ಎನ್ನುವುದನ್ನು ಮಾತ್ರ ನಾನು ಹೇಳಲ್ಲ ಎಂದು ಸ್ನೇಹಾ ಹೇಳಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಧನುಷ್ - ಸೆಲ್ವರಾಘವನ್ ಕ್ರೇಜಿ ಕಾಂಬಿನೇಷನ್ ಕೂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಆವರೇಜ್ ಹಿಟ್ ಎನಿಸಿಕೊಂಡಿತ್ತು. ಆದರೆ ಇವತ್ತಿಗೂ ತಮಿಳಿನ ಕಲ್ಟ್ ಕ್ಲಾಸಿಕ್ ಸಿನಿಮಾಗಳ ಲಿಸ್ಟ್‌ನಲ್ಲಿ ಈ ಸಿನಿಮಾ ಕೂಡ ಇದೆ.

Read more about: sneha kollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X