For Quick Alerts
  ALLOW NOTIFICATIONS  
  For Daily Alerts

  "ದಪ್ಪ ಇದ್ದೀಯಾ.. ತಾಯಿ ಪಾತ್ರಕ್ಕೆ ಲಾಯಕ್ಕು": ರಾಷ್ಟ್ರಪ್ರಶಸ್ತಿ ವಿಜೇತ ನಟಿಗೆ ಬಾಡಿ ಶೇಮಿಂಗ್ ಕಾಟ!

  |

  'ಸುರರೈ ಪೊಟ್ರು' ಚಿತ್ರದಲ್ಲಿ ಮಾರನಷ್ಟೇ ಗಮನ ಸೆಳೆದಿದ್ದು ಆತನ ಪತ್ನಿ ಬೊಮ್ಮಿ. ಸುಧಾ ಕೊಂಗರ ನಿರ್ದೇಶನದ ಈ ಚಿತ್ರದಲ್ಲಿ ಸೂರ್ಯಗೆ ಜೋಡಿಯಾಗಿ ಮಡದಿ ಪಾತ್ರದಲ್ಲಿ ಅಪರ್ಣಾ ಬಾಲಮುರಳಿ ನಟಿಸಿದ್ದರು. ಇಬ್ಬರ ಅಭಿನಯಕ್ಕೂ ರಾಷ್ಟ್ರಪ್ರಶಸ್ತಿಯ ಗರಿ ಸಿಕ್ಕಿತ್ತು. ಆದರೆ ಈಗ ಅಪರ್ಣಾ ಈಗ ದಪ್ಪಗಾಗಿದ್ದಾರೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ಆಕೆ ಕೂಡ ತಿರುಗೇಟು ನೀಡಿದ್ದಾರೆ.

  ಮಲಯಾಳಿ ಚೆಲುವೆ ಅಪರ್ಣಾ ಬಾಲಮುರಳಿ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕ್ಲಾಸಿಕಲ್ ಡ್ಯಾನ್ಸರ್ ಅಷ್ಟೇ ಅಲ್ಲ ಈ ಚೆಲುವೆ ಒಳ್ಳೆ ಗಾಯಕಿ ಕೂಡ ಹೌದು. ಅಂದಕ್ಕೆ ಅಭಿನಯ ಅನ್ನುವ ಬಟ್ಟೆ ತೊಡಿಸಿದಂತಿರುವ ಚೆಲುವೆ 'ಸುರರೈ ಪೊಟ್ರು' ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಈಕೆಯ ನಟನೆಗೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ (ತೀರ್ಪುಗಾರ ವಿಶೇಷ) ಸಿಕ್ಕಿತ್ತು. ತಮಿಳು ಮನೆಯ ಹೆಣ್ಣಾಗಿ ಮಾರನ ಸಾಧನೆಗೆ ಬೆಂಬಲವಾಗಿ ನಿಲ್ಲುವ ಪತ್ನಿಯ ಪಾತ್ರದಲ್ಲಿ ಗಮನ ಸೆಳೆದಿದ್ದರು.

  Breaking: 68ನೇ ರಾಷ್ಟ್ರ ಪ್ರಶಸ್ತಿ ಪ್ರಕಟ: ಯಾರಿಗೆ ಯಾವ್ಯಾವ ಪ್ರಶಸ್ತಿ? ಇಲ್ಲಿದೆ ಪಟ್ಟಿ!Breaking: 68ನೇ ರಾಷ್ಟ್ರ ಪ್ರಶಸ್ತಿ ಪ್ರಕಟ: ಯಾರಿಗೆ ಯಾವ್ಯಾವ ಪ್ರಶಸ್ತಿ? ಇಲ್ಲಿದೆ ಪಟ್ಟಿ!

  ಮೊದಲಿನಿಂದಲೂ ಕೊಂಚ ಗುಂಡಗಿದ್ದ ಅಪರ್ಣಾ ಇತ್ತೀಚಿಗೆ ಮತ್ತಷ್ಟು ದಪ್ಪಗಾಗಿದ್ದಾರೆ. ಇದೇ ಕಾರಣಕ್ಕೆ ಆಕೆಗೆ ಬಾಡಿ ಶೇಮಿಂಗ್ ಕಾಟ ಶುರುವಾಗಿದೆ. ಈ ಹಿಂದೆ ಕೂಡ ಅಪರ್ಣಾ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಸದ್ಯ ಈ ಕೇರಳ ಕೊಟ್ಟು 'ನೀತಂ ಒರು ವಾನಂ' ಎನ್ನುವ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತೆಲುಗು, ತಮಿಳಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ಬಿಡುಗಡೆಯಾಗ್ತಿದೆ. ಇತ್ತೀಚೆಗೆ ಆಕೆಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿತ್ತು. ಪೋಸ್ಟರ್‌ನಲ್ಲಿ ಲಂಗಾ ದಾವಣಿಯಲ್ಲಿ ಟ್ರ್ಯಾಕ್ಟರ್ ಓಡಿಸುತ್ತಾ ಅಪರ್ಣಾ ಕಾಣಿಸಿಕೊಂಡಿದ್ದಾರೆ. ಆಕೆಯನ್ನು ನೋಡಿ "ಏನು ಇಷ್ಟು ದಪ್ಪಾ ಆಗಿದ್ದೀಯಾ, ನೀನು ಬರೀ ತಾಯಿ ಪಾತ್ರಕ್ಕಷ್ಟೇ ಲಾಯಕ್ಕು" ಎಂದು ಕೆಲವರು ಟ್ರೋಲ್‌ ಮಾಡುತ್ತಿದ್ದಾರೆ.

  ಟ್ರೋಲಿಂಗ್ ಮತ್ತು ಬಾಡಿ ಶೇಮಿಂಗ್ ಬಗ್ಗೆ ಇದೀಗ ಅಪರ್ಣಾ ಪ್ರತಿಕ್ರಿಯಿಸಿದ್ದಾರೆ. "ದೇಹದ ತೂಕಕ್ಕೂ ಪ್ರತಿಭೆಗೂ ಸಂಬಂಧವಿಲ್ಲ. ದೇಹದಲ್ಲಿನ ಅನೇಕ ಸಮಸ್ಯೆಗಳು ವ್ಯಕ್ತಿಯ ತೂಕವನ್ನು ಹೆಚ್ಚಿಸಬಹುದು. ನಾನು ದಪ್ಪಗಿದ್ದೇನೆ. ಅದೇ ಲುಕ್‌ನಲ್ಲಿ ಸಿನಿಮಾದಲ್ಲಿ ನಟಿಸಲು ಕೇಳುವವರೇ ಹೆಚ್ಚು. ಮೊದಲಿಗೆ ನನ್ನ ದೇಹದ ಆಕಾರದ ಬಗ್ಗೆ ಬರುತ್ತಿದ್ದ ಕಾಮೆಂಟ್‌ಗಳಿಂದ ನನಗೆ ತುಂಬಾ ನೋವಾಯಿತು. ನೀವು ದಪ್ಪ, ತಾಯಿಯ ಪಾತ್ರ ಮಾಡ್ತೀರಾ ಎಂದು ಕೆಲವರು ಕೇಳುತ್ತಿದ್ದಾರೆ. ಆದರೆ ನನಗೆ ಇನ್ನು ತಾಯಿಯಾಗಿ ನಟಿಸುವ ವಯಸ್ಸಾಗಿಲ್ಲ." ಎಂದಿದ್ದಾರೆ.

  Soorarai Pottru Actress Aparna Balamurali fires back at body shaming remarks

  "ಕೆಲವರು ತೆಳ್ಳಗಿದ್ದರೆ ಮಾತ್ರ ನಾಯಕಿ ಎಂದುಕೊಳ್ಳುತ್ತಾರೆ. ಬಳಕುವ ಬಳ್ಳಿಯಂತೆ ಇದ್ದರೆ ಮಾತ್ರವೇ ನಾಯಕಿಯಾಗಿ ಅವಕಾಶ ಸಿಗುತ್ತದೆ ಎನ್ನುವುದು ಅರ್ಥವಾಗುತ್ತಿಲ್ಲ. ಮೊದಲು ಯಾರದರೂ ನಾನು ದಪ್ಪ ಎಂದರೆ ಬೇಸರವಾಗುತ್ತಿತ್ತು. ಆದರೆ ಈಗ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ" ಎಂದು ಅಪರ್ಣಾ ಪ್ರತಿಕ್ರಿಯಿಸಿದ್ದಾರೆ. ಸದ್ಯ ಸಾಲು ಸಾಲು ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಈ ಮಲಯಾಳಿ ದುಂಡುಮಲ್ಲಿಗೆ ಬಣ್ಣ ಹಚ್ಚಿದ್ದಾರೆ.

  English summary
  Soorarai Pottru Actress Aparna Balamurali fires back at body shaming remarks. Know More.
  Friday, September 16, 2022, 9:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X