ಅನ್‌ಲೈನ್ ರಿಲೀಸ್ ಆದರೂ ತಪ್ಪುತ್ತಿಲ್ಲ ಪೈರಸಿ: ಸೂರ್ಯ ಚಿತ್ರಕ್ಕೆ ಮೊದಲ ದಿನವೇ ಶಾಕ್
ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದ್ದ ಸಮಯದಲ್ಲಿ ಪೈರಸಿ ಕಾಟ ಹೆಚ್ಚಿತ್ತು. ನಕಲಿ ಪ್ರಿಂಟ್ ಮಾಡುವುದು ಅಥವಾ ಥಿಯೇಟರ್‌ನಲ್ಲಿ ರೆಕಾರ್ಡ್ ಮಾಡುವುದು, ಅದನ್ನು ವೆಬ್‌ಸೈಟ್‌ಗಳಲ್ಲಿ ಪೋಸ್ಟ್ ಮಾಡುವ ಮೂಲಕ ಪೈರಸಿ ಮಾಡಲಾಗುತ್ತಿತ್ತು.
ಲಾಕ್‌ಡೌನ್ ಆದ್ಮೇಲೆ ಅಮೆಜಾನ್, ನೆಟ್‌ಫ್ಲಿಕ್ಸ್ ಅಂತಹ ವೇದಿಕೆಗಳಲ್ಲಿ ಅಧಿಕೃತವಾಗಿ ಹೊಸ ಚಿತ್ರಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೂ ಪೈರಸಿ ಆಗುವುದು ಕಮ್ಮಿ ಆಗಿಲ್ಲ. ಉಚಿತವಾಗಿ ಟೆಲಿಗ್ರಾಮ್ ಅಥವಾ ಇನ್ನಿತರ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಸಿನಿಮಾ ಪೈರಸಿಯಾಗುತ್ತಿದೆ.
ತಮಿಳು ನಟ ಸೂರ್ಯ ನಟನೆಯ ಸೂರರೈ ಪೊಟ್ರು ಸಿನಿಮಾ ಇಂದು (ನವೆಂಬರ್ 12) ಅಮೆಜಾನ್ ಪ್ರೈಮ್‌ನಲ್ಲಿ ತೆರೆಕಂಡಿದೆ. ರಿಲೀಸ್ ಆಗುತ್ತಿದ್ದಂತೆ ಟೆಲಿಗ್ರಾಮ್ ಹಾಗೂ ಇತರೆ ವೆಬ್‌ಸೈಟ್‌ಗಳಲ್ಲಿ ಪೈರಸಿ ಕಾಪಿ ಹರಿದಾಡುತ್ತಿದೆ. ಇದು ಸಹಜವಾಗಿ ಚಿತ್ರಕ್ಕೆ ಭಾರಿ ಹಿನ್ನಡೆ ತಂದಿದೆ.

ಇದಕ್ಕೂ ಮುಂಚೆ ಅಕ್ಟೋಬರ್ 23 ರಂದು ಈ ಸಿನಿಮಾ ಅಮೆಜಾನ್‌ನಲ್ಲಿ ರಿಲೀಸ್ ಆಗಬೇಕಿತ್ತು. ಆದ್ರೆ, ಇಂಡಿಯನ್ ಏರ್‌ಪೋರ್ಸ್ ಇಲಾಖೆಯಿಂದ ಎನ್‌ಒಸಿ ಸಿಗದ ಕಾರಣ ಅಂದುಕೊಂಡಿದ್ದ ದಿನಾಂಕಕ್ಕೆ ಚಿತ್ರ ಬಿಡುಗಡೆಯಾಗಿಲ್ಲ.
ಅಂದ್ಹಾಗೆ, ಅಸುಧಾ ಕೊಂಗರ ನಿರ್ದೇಶನ ಈ ಚಿತ್ರ ನಿವೃತ್ತ ವಾಯು ಸೇನಾ ಕ್ಯಾಪ್ಟನ್ ಜಿಆರ್ ಗೋಪಿನಾಥ್ ಅವರ ಜೀವನವನ್ನು ಸ್ಫೂರ್ತಿಯಾಗಿಸಿ ತಯಾರಾಗಿರುವ ಸಿನಿಮಾ.
20 ಕೋಟಿ ರೂ.ಗಳ ಬಜೆಟ್‌ನಲ್ಲಿ ತಯಾರಿಸಿದ ಸೂರರೈ ಪೊಟ್ರು ಸಿನಿಮಾದ ಡಿಜಿಟಲ್ ಹಕ್ಕನ್ನು ಅಮೆಜಾನ್ ಪ್ರೈಮ್ ವಿಡಿಯೋ 45-50 ಕೋಟಿ ನೀಡಿ ಖರೀದಿ ಮಾಡಿದೆ ಎಂದು ವರದಿಯಾಗಿದೆ. ಸ್ಯಾಟ್‌ಲೈಟ್ ಹಕ್ಕು ಸನ್ ಟಿವಿಗೆ 15 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ.
2 ಡಿ ಎಂಟರ್‌ಟೈನ್‌ಮೆಂಟ್ ಮತ್ತು ಶಿಕ್ಯ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಈ ಚಿತ್ರದಲ್ಲಿ ಮಲಯಾಳಂ ನಟಿ ಅಪರ್ಣ ಬಾಲಮುರಳಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಪರೇಶ್ ರಾವಲ್ ಮತ್ತು ಜಾಕಿ ಶ್ರಾಫ್ ಪ್ರಮುಖ ಪಾತ್ರದಲ್ಲಿದ್ದಾರೆ.
ಇನ್ನುಳಿದಂತೆ ಊರ್ವಶಿ, ಸಂಪತ್ ರಾಜ್, ಕರುಣಾಸ್, ಮೋಹನ್ ಬಾಬು, ಅಚ್ಯುತ್ ಕುಮಾರ್ ಮತ್ತು ವಿವೇಕ್ ಪ್ರಸನ್ನ ಕಾಣಿಸಿಕೊಂಡಿದ್ದಾರೆ.


Click it and Unblock the Notifications











