For Quick Alerts
  ALLOW NOTIFICATIONS  
  For Daily Alerts

  2021ರಲ್ಲಿ ರಿಲೀಸ್ ದಿನಾಂಕ ಕಾಯ್ದಿರಿಸಿದ ಸೌತ್ ಸ್ಟಾರ್ಸ್: ಯಾರು ಯಾವಾಗ ಬರ್ತಾರೆ?

  |

  ಕೊರೊನಾ ವೈರಸ್ ಪರಿಣಾಮ 2020ನೇ ವರ್ಷದಲ್ಲಿ ಚಿತ್ರರಂಗ ಸಂಪೂರ್ಣವಾಗಿ ಸ್ತಬ್ದವಾಗಿತ್ತು. ಬಿಡುಗಡೆಗೆ ಸಜ್ಜಾಗಿದ್ದ ಚಿತ್ರಗಳು 2021ಕ್ಕೆ ಮುಂದೂಡಲ್ಪಟ್ಟವು. ಈಗ ಒಂದೊಂದೇ ಚಿತ್ರಗಳು ರಿಲೀಸ್ ದಿನಾಂಕ ಘೋಷಣೆ ಮಾಡುತ್ತಿವೆ. ಸ್ಯಾಂಡಲ್‌ವುಡ್‌ನಲ್ಲಿ ಬಹುತೇಕ ಎಲ್ಲ ಸ್ಟಾರ್ ನಟರ ಚಿತ್ರಗಳು ರಿಲೀಸ್ ದಿನಾಂಕ ಪ್ರಕಟಿಸಿದೆ.

  ಜನವರಿ ಕೊನೆಯ ವಾರದಿಂದ ಮೇ ತಿಂಗಳ ಕೊನೆಯವರೆಗೂ ಕರ್ನಾಟಕದಲ್ಲಿ ನಿರಂತರವಾಗಿ ಸ್ಟಾರ್ ಚಿತ್ರಗಳು ತೆರೆಗೆ ಬರ್ತಿದೆ. ಕನ್ನಡದ ಜೊತೆಗೆ ಸೌತ್ ಇಂಡಿಯಾದ ಕೆಲವು ದೊಡ್ಡ ಪ್ರಾಜೆಕ್ಟ್‌ಗಳು ನಿರೀಕ್ಷೆ ಮೂಡಿಸಿದೆ. ಈಗ ತೆಲುಗು, ತಮಿಳಿನ ದೊಡ್ಡ ಸಿನಿಮಾಗಳು ಸಹ ರಿಲೀಸ್ ದಿನಾಂಕವನ್ನು ಲಾಕ್ ಮಾಡಿಕೊಂಡಿವೆ. ಹಾಗಾದ್ರೆ, ವಿಜಯ್, ಅಜಿತ್, ರಜನಿಕಾಂತ್, ರಾಜಮೌಳಿ ಚಿತ್ರಗಳು ಯಾವಾಗ ಚಿತ್ರಮಂದಿರಕ್ಕೆ ಬರಲಿದೆ? ಮುಂದೆ ಓದಿ...

  ದಸರಾ ಹಬ್ಬಕ್ಕೆ ಆರ್‌ಆರ್‌ಆರ್‌

  ದಸರಾ ಹಬ್ಬಕ್ಕೆ ಆರ್‌ಆರ್‌ಆರ್‌

  ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಆರ್ ಆರ್ ಆರ್ ಸಿನಿಮಾ ದಸರಾ ಹಬ್ಬದ ಪ್ರಯುಕ್ತ ರಿಲೀಸ್ ಆಗಲಿದೆ. ಅಕ್ಟೋಬರ್ 13ಕ್ಕೆ ಆರ್‌ಆರ್‌ಆರ್‌ ಚಿತ್ರ ವರ್ಲ್ಡ್ ವೈಡ್ ಬಿಡುಗಡೆಯಾಗಲಿದೆ. ಬಹುಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು, ಈ ಚಿತ್ರದ ಎದುರು ಬೇರೆ ಯಾವ ಚಿತ್ರವೂ ಬರುವುದು ಅನುಮಾನ.

  ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ ಪಕ್ಕಾ, ಇದೇನಾ ಅಧಿಕೃತ ಡೇಟ್?ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ ಪಕ್ಕಾ, ಇದೇನಾ ಅಧಿಕೃತ ಡೇಟ್?

  ದೀಪಾವಳಿ ಹಬ್ಬಕ್ಕೆ ಅಣ್ಣಾತ್ತೆ

  ದೀಪಾವಳಿ ಹಬ್ಬಕ್ಕೆ ಅಣ್ಣಾತ್ತೆ

  ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾದ ಬಿಡುಗಡೆ ದಿನಾಂಕವೂ ಘೋಷಣೆಯಾಗಿದೆ. ಸದ್ಯ ಚಿತ್ರೀಕರಣ ಮಾಡುತ್ತಿರುವ ಅಣ್ಣಾತ್ತೆ ಸಿನಿಮಾ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 4 ರಂದು ವರ್ಲ್ಡ್ ವೈಡ್ ತೆರೆಗೆ ಬರಲಿದೆ. ತಮಿಳು, ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರ ಪ್ಯಾನ್ ಇಂಡಿಯಾ ಬಿಡುಗಡೆಯಾಗಬಹುದು.

  ಸ್ವಾತಂತ್ರ್ಯ ದಿನಾಚರಣೆಗೆ ಅಜಿತ್ ಚಿತ್ರ

  ಸ್ವಾತಂತ್ರ್ಯ ದಿನಾಚರಣೆಗೆ ಅಜಿತ್ ಚಿತ್ರ

  ತಲಾ ಅಜಿತ್ ನಟಿಸುತ್ತಿರುವ ವಾಲಿಮೈ ಸಿನಿಮಾ ಕೊನೆಯ ಹಂತದ ಶೂಟಿಂಗ್ ಮಾಡುತ್ತಿದೆ. ವಿಶ್ವಾಸಂ ಬಳಿಕ ಅಜಿತ್ ಚಿತ್ರ ಯಾವುದು ಪ್ರೇಕ್ಷಕರ ಮುಂದೆ ಬಂದಿರಲಿಲ್ಲ. ಎಚ್ ವಿನೋದ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ವಾಲಿಮೈ ಮೇಲೆ ಹೆಚ್ಚಿನ ಲೆಕ್ಕಾಚಾರವಿದೆ. ಸದ್ಯದ ಮಾಹಿತಿ ಪ್ರಕಾರ ಆಗಸ್ಟ್ ಮೂರನೇ ವಾರಕ್ಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆಯಂತೆ.

  RRR ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ರಾಜಮೌಳಿRRR ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ರಾಜಮೌಳಿ

  2022 ಸಂಕ್ರಾಂತಿಗೆ ವಿಜಯ್ 65!

  2022 ಸಂಕ್ರಾಂತಿಗೆ ವಿಜಯ್ 65!

  ವಿಜಯ್ ನಟನೆಯ ಮಾಸ್ಟರ್ ಸಿನಿಮಾ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಮುಂದಿನ ಸಿನಿಮಾವನ್ನು ಸನ್‌ ಪಿಕ್ಚರ್ಸ್ ಜೊತೆ ಮಾಡುತ್ತಿದ್ದು, ನೆಲ್ಸನ್ (ಕೋಲಮಾವು ಕೋಕಿಲಾ) ನಿರ್ದೇಶನ ಮಾಡಲಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭಿಸಲಿದ್ದು, ಜುಲೈವೊತ್ತಿಗೆ ಶೂಟಿಂಗ್ ಮುಗಿಸುವ ಯೋಜನೆಯಲ್ಲಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಹಾಗೂ ಪ್ರಚಾರಕ್ಕೆ ಸಮಯ ತೆಗೆದುಕೊಂಡ 2022ರ ಸಂಕ್ರಾಂತಿಗೆ ವಿಜಯ್ 65ನೇ ಸಿನಿಮಾ ತೆರೆಗೆ ಬರಬಹುದು.

  ಏಪ್ರಿಲ್‌ನಲ್ಲಿ ಧನುಶ್, ವಿಕ್ರಂ

  ಏಪ್ರಿಲ್‌ನಲ್ಲಿ ಧನುಶ್, ವಿಕ್ರಂ

  ಏಪ್ರಿಲ್ ತಿಂಗಳಲ್ಲಿ ಧನುಶ್ ಅಭಿನಯದ 'ಜಗಮೇ ತಂಥೀರಮ್' ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ವಿಕ್ರಮ್ ನಟನೆಯ ಕೋಬ್ರಾ ಚಿತ್ರವೂ ಏಪ್ರಿಲ್ ಕೊನೆಯಲ್ಲಿ ರಿಲೀಸ್ ಆಗಬಹುದು. ಶಿವಕಾರ್ತಿಕೇಯನ್ ಅವರ ಡಾಕ್ಟರ್ ಚಿತ್ರವೂ ಅದೇ ತಿಂಗಳಿಗೆ ಪ್ರವೇಶಿಸಬಹುದು.

  ರಜನಿಕಾಂತ್ 'ಅಣ್ಣಾತ್ತೆ' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆರಜನಿಕಾಂತ್ 'ಅಣ್ಣಾತ್ತೆ' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ

  ಆಚಾರ್ಯ ಯಾವಾಗ?

  ಆಚಾರ್ಯ ಯಾವಾಗ?

  ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದ ರಿಲೀಸ್ ದಿನಾಂಕ ಸದ್ಯಕ್ಕೆ ತಿಳಿದಿಲ್ಲ. ಆದರೆ, ವೇಗವಾಗಿ ಶೂಟಿಂಗ್ ನಡೆಯುತ್ತಿದೆ. ಕೊರಟಲಾ ಶಿವ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಕಾಜಲ್ ಅಗರ್‌ವಾಲ್, ರಾಮ್ ಚರಣ್ ತೇಜ ಸಹ ಅಭಿನಯಿಸುತ್ತಿದ್ದಾರೆ. ಬಹುಶಃ ಈ ಚಿತ್ರವೂ ಸಮ್ಮರ್‌ಗೆ ರಿಲೀಸ್ ಆಗಬಹುದು.

  ಕೆಜಿಎಫ್ ಚಾಪ್ಟರ್ 2 ಕಥೆ ಏನು?

  ಕೆಜಿಎಫ್ ಚಾಪ್ಟರ್ 2 ಕಥೆ ಏನು?

  ದಸರಾ ಸಮಯಕ್ಕೆ ಆರ್ ಆರ್ ಆರ್, ದೀಪಾವಳಿಗೆ ಅಣ್ಣಾತ್ತೆ, ಆಗಸ್ಟ್ ತಿಂಗಳಲ್ಲಿ ಅಜಿತ್ ಸಿನಿಮಾ ಎಂದು ನಿರ್ಧರಿಸಿದ್ದಾರೆ. ಈ ಎಲ್ಲ ಚಿತ್ರಗಳ ಜೊತೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಯಾವಾಗ ರಿಲೀಸ್ ಆಗಬಹುದು ಎಂಬ ಚರ್ಚೆಯೂ ಜೋರಾಗಿದೆ. ಟಾಲಿವುಡ್‌ನಲ್ಲಿ ವರದಿಯಾಗಿರುವ ಪ್ರಕಾರ ಮೇ ತಿಂಗಳ ಕೊನೆಯಲ್ಲಿ ಕೆಜಿಎಫ್ ಎಂಟ್ರಿಯಾಗಬಹುದು ಎನ್ನಲಾಗಿದೆ.

  ದರ್ಶನ್ ಮತ್ತು ಸುದೀಪ್ ಸ್ನೇಹದಲ್ಲಿ ಬಿರುಕು, ಸ್ಪಷ್ಟನೆ ಕೊಟ್ಟ ದೊಡ್ಡಣ್ಣ | Filmibeat Kannada
  ಕನ್ನಡ ಚಿತ್ರಗಳ ಬಿಡುಗಡೆಯ ವಿವರ

  ಕನ್ನಡ ಚಿತ್ರಗಳ ಬಿಡುಗಡೆಯ ವಿವರ

  ಜನವರಿ 29ಕ್ಕೆ ರಾಮಾರ್ಜುನ ಸಿನಿಮಾ, ಫೆಬ್ರವರಿ 19ಕ್ಕೆ ಪೊಗರು, ಮಾರ್ಚ್ 11ಕ್ಕೆ ರಾಬರ್ಟ್, ಏಪ್ರಿಲ್ 1ಕ್ಕೆ ಸಲಗ, ಏಪ್ರಿಲ್ 15ಕ್ಕೆ ಸಲಗ, ಏಪ್ರಿಲ್ 29ಕ್ಕೆ ಕೋಟಿಗೊಬ್ಬ 3, ಮೇ 14ಕ್ಕೆ ಭಜರಂಗಿ 2 ಚಿತ್ರಗಳು ರಿಲೀಸ್ ಆಗಲಿದೆ.

  English summary
  SS Rajamouli's RRR, Rajinikanth's Annaatthe, Ajith starrer Valimai and KGF chapter 2 release date revealed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X