50 ಸೆಕೆಂಡ್ ಜಾಹೀರಾತು, 5 ಕೋಟಿ ಸಂಭಾವನೆ; ಬಾಲಿವುಡ್ ಬೆಡಗಿಯರಿಗೆ ಸೆಡ್ಡು ಹೊಡೆದ ಸೌತ್ ಸುಂದರಿ!

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪುರುಷ ಪ್ರಧಾನ ಚಿತ್ರರಂಗದಲ್ಲಿ ನಾಯಕರದ್ದೇ ಕಾರುಬಾರು ಇತ್ತು. ಸಂಭಾವನೆ ವಿಚಾರದಲ್ಲಿಯೂ ನಾಯಕಿಯರಿಗೆ ಆಗ್ತಿದ್ದಿದ್ದು ಅನ್ಯಾಯನೇ. ನಾಯಕರಿಗೆ ಕೊಡಲಾಗುತ್ತಿದ್ದ ಸಂಭಾವನೆಯ ಅರ್ಧದಷ್ಟು ಹಣ ನಾಯಕಿಗೆ ಕೊಡಲು ಹಿಂದೇಟು ಹಾಕ್ತಿದ್ದ ಕಾಲ ಅದು.

ಆದರೆ ಈಗ ಕಾಲ ಪರಿಸ್ಥಿತಿ ಬದಲಾಗಿದೆ. ಅಲ್ಲೊಬ್ಬರು .. ಇಲ್ಲೊಬ್ಬರು .. ನಾಯಕರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ನಾಯಕರಿಗೆ ಎಣಿಸುವ ದುಡ್ಡಿಗಿಂತ ಹೆಚ್ಚಿನ ದುಡ್ಡನ್ನೂ ಎಣಿಸುತ್ತಿದ್ದಾರೆ. ಆ ಪೈಕಿ ನಯನತಾರಾ ಕೂಡ ಒಬ್ಬರು.

South Lady Superstar Nayanthara Charge 5 Crore For 50 Sec Ad

ಹೌದು, ದಕ್ಷಿಣದ ಲೇಡಿ ಸೂಪರ್ ಸ್ಟಾರ್ ಎಂಬ ಪಟ್ಟವನ್ನ ಅಲಂಕರಿಸಿರುವ ನಯನತಾರಾ, ಜಾಹೀರಾತುವೊಂದಕ್ಕೆ ಐದು ಕೋಟಿಯನ್ನ ಪಡೆದಿದ್ದಾರೆ ಅನ್ನುವ ಮಾತು ಸದ್ಯಕ್ಕೆ ಕೇಳಿ ಬರುತ್ತಿದೆ. ಆ ಜಾಹೀರಾತಿನ ಅವಧಿ, ಕೇವಲ ಐವತ್ತು ಸೆಕೆಂಡ್ ಅಷ್ಟೇ ಅನ್ನುವುದು ಚರ್ಚಿತ ವಿಷಯ.

ಇನ್ನೂ ಟಾಟಾ ಸ್ಕೈಗಾಗಿ ಮಾಡಲಾದ ಈ ಜಾಹೀರಾತಿನ ಚಿತ್ರೀಕರಣ ನಡೆದಿದ್ದು ಕೇವಲ ಎರಡು ದಿನದಲ್ಲಿ. ಈ ಕಾರಣಕ್ಕೆ ಕೇವಲ ಎರಡೇ ದಿನದಲ್ಲಿ ಐದು ಕೋಟಿ ಸಂಪಾದನೆಯನ್ನ ಮಾಡಿದ ನಯನತಾರಾ, ನಿಜಕ್ಕೂ ಗ್ರೇಟ್ ಎಂಬ ಮಾತು ಇವರ ಅಭಿಮಾನಿ ವಲಯದಲ್ಲಿ ಕೇಳಿ ಬರುತ್ತಿದೆ. 50 ಸೆಕೆಂಡುಗಳ ಜಾಹೀರಾತಿಗೆ ಐದು ಕೋಟಿ ಪಡೆಯುವ ಸುಲಭ ಅಲ್ಲ, ಇದಕ್ಕೆ ಅಲ್ಲವಾ ಇವರನ್ನ ಲೇಡಿ ಸೂಪರ್ ಸ್ಟಾರ್ ಎಂದು ಇವರ ಅಭಿಮಾನಿಗಳು ಹೆಮ್ಮೆಯನ್ನೂ ಪಡುತ್ತಿದ್ದಾರೆ

South Lady Superstar Nayanthara Charge 5 Crore For 50 Sec Ad

ಚಿತ್ರಕ್ಕೆ ನಯನತಾರಾ ಪಡೆಯುವ ಸಂಭಾವನೆ ಎಷ್ಟು..?

ಕೇವಲ ಐವತ್ತು ಸೆಕೆಂಡ್ ಜಾಹೀರಾತಿಗೆ ನಯನತಾರಾ ಐದು ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಮಾತು ಗುಲ್ಲಾದ ಬೆನ್ನಲ್ಲೇ, ಚಿತ್ರವೊಂದಕ್ಕೆ ನಯನತಾರಾ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಟಾಪಿಕ್ ಮೇಲೆ ಈಗ ಚರ್ಚೆ ನಡೆಯುತ್ತಿದೆ. ಕೆಲವರು ಸ್ಟಾರ್ ಕಾಸ್ಟ್ ಹಾಗೂ ನಿರ್ಮಾಣ ಸಂಸ್ಥೆಯ ಆಧಾರದ ಮೇಲೆ ನಯನತಾರಾ ತಮ್ಮ ಫೀಸ್ ಪಡೆಯುತ್ತಾರೆ ಎಂದರೆ, ಇನ್ನೂ ಕೆಲವರು ಚಿತ್ರವೊಂದಕ್ಕೆ ನಯನತಾರಾ ಹತ್ತು ಕೋಟಿಯನ್ನ ಪಡೆಯುತ್ತಾರೆ ಎನ್ನುತ್ತಿದ್ದಾರೆ

ನಯನತಾರಾ ಐಷಾರಾಮಿ ಜೀವನ

ನಯನತಾರಾ ಜೀವನ ಶೈಲಿ ಸಿಕ್ಕಾಪಟ್ಟೆ ಅದ್ದೂರಿ. 3 ಐಷಾರಾಮಿ ಮನೆಗಳನ್ನ ಹೊಂದಿರುವ ನಯನತಾರಾ, ಮುಂಬೈನಲ್ಲಿಯೂ ಬೃಹತ್ ಬಂಗಲೆ ಹೊಂದಿದ್ದಾರೆ. ಒಂದು ಲೆಕ್ಕಾಚಾರದ ಪ್ರಕಾರ, ಇದರ ಬೆಲೆಯೇ 100 ಕೋಟಿ. ಇನ್ನೂ ನಯನತಾರಾಗೆ ಕಾರಿನ ಕ್ರೇಜ್ ಇದೆ. ಈ ಕಾರಣಕ್ಕೆ ಒಂದಕ್ಕಿಂತ ಒಂದು ದುಬಾರಿ ಕಾರುಗಳು ಇವರ ಮನೆಯ ಅಂಗಳದಲ್ಲಿ ಕಾಣಸಿಗುತ್ತವೆ. ಐಷಾರಾಮಿ ಖಾಸಗಿ ಜೆಟ್‌ನ ಒಡತಿಯೂ ಹೌದು ನಯನತಾರಾ.

South Lady Superstar Nayanthara Charge 5 Crore For 50 Sec Ad

'ಜವಾನ್' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ

ಕಳೆದ ವರ್ಷ, ಆಟ್ಲೀ ನಿರ್ದೇಶನದ 'ಜವಾನ್' ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ನಯನತಾರಾ ತೆರೆ ಹಂಚಿಕೊಂಡರು. ಜವಾನ್ ಚಿತ್ರದ ಮೂಲಕ ಬಾಲಿವುಡ್ ನ ಪ್ರವೇಶಿಸಿದರು. ಇನ್ನೂ ನಯನತಾರಾ ಅವರನ್ನ ಮೊದಲ ಬಾರಿ ಹಿಂದಿ ಸಿನಿಮಾದಲ್ಲಿ ನೋಡಿದ ಅನೇಕರು, ಇವರ ಅಭಿನಯಕ್ಕೆ ಹಾಗೂ ಇವರ ಅಂದ ಚೆಂದಕ್ಕೆ ಮನಸನ್ನೂ ಸೋತಿದ್ದರು. ಇವತ್ತು ಕೇವಲ ದಕ್ಷಿಣದಲ್ಲಿ ಅಷ್ಟೇ ಅಲ್ಲ, ಉತ್ತರದಲ್ಲಿಯೂ ಇವರ ಅಭಿಮಾನಿ ಬಳಗ ಸೃಷ್ಟಿಯಾಗಿದೆ.

More from Filmibeat

English summary
According to a report Lady Superstar Nayanthara charged Rs 5 crore for a 50-second advertisement for Tata Sky. The ad was shot over two days and was released in four languages, Tamil, Telugu, Malayalam, and Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X