ಅಪ್ಪನ ಆರೋಗ್ಯದಲ್ಲಿ ಚೇತರಿಕೆಯಿಲ್ಲ: ಕಣ್ಣೀರಿಟ್ಟ ಎಸ್‌ಪಿ ಬಾಲಸುಬ್ರಹ್ಮಣ್ಯಂ ಪುತ್ರ
ಕೊರೊನಾ ವೈರಸ್‌ಗೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿರುವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ ಕಂಡು ಬಂದಿಲ್ಲ. ಅವರಿನ್ನೂ ವೆಂಟಿಲೇಟರ್‌ನಲ್ಲೇ ಮುಂದುವರೆದಿದ್ದಾರೆ.
Recommended Video
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಕುರಿತು ಅಭಿಮಾನಿಗಳು, ಸಿನಿರಂಗದ ಗೆಳೆಯರು, ಸಂಗೀತಲೋಕದ ಗೆಳೆಯರು ಆತಂಕದಲ್ಲಿದ್ದಾರೆ.
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಆಸ್ಪತ್ರೆಗೆ ದಾಖಲಾದಾಗಿನಿಂದಲೂ ಅವರ ಪುತ್ರ ಚರಣ್ ಅವರು ತಂದೆಯ ಆರೋಗ್ಯದ ಕುರಿತು ಪ್ರತಿದಿನ ವಿಡಿಯೋ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇಂದು ಗುರುವಾರವೂ ಸಹ ವಿಡಿಯೋ ಹಂಚಿಕೊಂಡಿರುವ ಚರಣ್, ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಅಪ್ಪನ ಆರೋಗ್ಯದ ಬಗ್ಗೆ ಚರಣ್ ಚಿಂತಿತ
ಇಂದಿನ ವಿಡಿಯೋದಲ್ಲಿ, ಅಪ್ಪನ ಆರೋಗ್ಯದ ಬಗ್ಗೆ ಚಿಂತಿತರಾದಂತೆ ಕಾಣುತ್ತಿರುವ ಚರಣ್, ಅಪ್ಪನ ಚೇತರಿಕೆಗಾಗಿ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಪ್ರಾರ್ಥಿಸುತ್ತಿರುವ ಎಲ್ಲರಿಗೂ ನಮ್ಮ ಇಡೀಯ ಕುಟುಂಬ ಋಣಿಯಾಗಿದೆ ಎಂದು ಹೇಳಿದ್ದಾರೆ.

ಭಾವುಕರಾಗಿ ಕಣ್ಣೀರು ಹಾಕಿದ ಎಸ್‌ಪಿಬಿ ಪುತ್ರ
ಅಪ್ಪನ ಆರೋಗ್ಯ ಯಥಾಸ್ಥಿತಿಯಲ್ಲಿ ಮುಂದುವರೆದಿದೆ ಎಂದು ಹೇಳಿರುವ ಚರಣ್, ಹೀಗೆಯೇ ಪ್ರಾರ್ಥಿಸುತ್ತಿರಿ, ಪ್ರಾರ್ಥನೆ ದೇವರಿಗೆ ತಲುಪಿಯೇ ತೀರುತ್ತದೆ. ದೇವರು ಕರುಣಾಳು ಅವನು ಅಪ್ಪನನ್ನು ನಮ್ಮೊಂದಿಗೆ ಇರುವಂತೆ ಮಾಡುತ್ತಾನೆ ಎಂದು ಹೇಳುತ್ತಾ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.

ಚಿತ್ರರಂಗದ ಗಣ್ಯರು ಪ್ರಾರ್ಥನೆ ಮಾಡಿದ್ದಾರೆ
ಗುರುವಾರ ಸಂಜೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಭಿಮಾನಿಗಳು, ಚಿತ್ರರಂಗದ ಗೆಳೆಯರಾದ ರಜನೀಕಾಂತ್, ಕಮಲ್‌ಹಾಸನ್, ಚಿರಂಜೀವಿ, ಕನ್ನಡದ ಶಿವರಾಜ್ ಕುಮಾರ್ ಹೀಗೆ ಹಲವರು ಎಸ್‌ಪಿಬಿ ಶೀಘ್ರ ಚೇತರಿಕೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ.

ಆಗಸ್ಟ್ 5 ರಂದು ಎಸ್‌ಪಿಬಿಗೆ ಕೊರೊನಾ ಆಗಿತ್ತು
ಆಗಸ್ಟ್ 5 ರಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ವೈರಸ್ ಇರುವುದು ಖಾತ್ರಿಯಾಗಿತ್ತು. ಅಂದೇ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 14 ರಂದು ಅವರನ್ನು ಐಸಿಯುಗೆ ವರ್ಗಾಯಿಸಲಾಗಿತ್ತು. ಇದೀಗ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಬಗ್ಗೆ ವೈದ್ಯರು ಏನು ಹೇಳಿದ್ದಾರೆಂದು ಅವರ ಎಸ್‌ಪಿಬಿ ಪುತ್ರ ತಿಳಿಸಿದ್ದಾರೆ.


Click it and Unblock the Notifications











