ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ: ಆಸ್ಪತ್ರೆ ನೀಡಿದ ಅಧಿಕೃತ ಮಾಹಿತಿ

ಇಂದು (ಆಗಸ್ಟ್ 24) ರ ಮುಂಜಾನೆಯಿಂದ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದ ಕುರಿತು ಹಲವಾರು ಗಾಳಿಸುದ್ದಿಗಳು ಹರಿದಾಡುತ್ತಿದೆ.

Recommended Video

Brahma ಚಿತ್ರದ ಅದ್ದೂರಿ ತೆರೆ ಹಿಂದಿನ ದೃಶ್ಯಗಳು | Behind the scenes | Filmibeat Kannada

ಮೊದಲಿಗೆ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ವೈರಸ್ ನೆಗೆಟಿವ್ ವರದಿ ಬಂದಿದೆ ಎನ್ನಲಾಗಿತ್ತು. ಆದರೆ ನಂತರ ಅದು ಸುಳ್ಳು ಅವರ ಸ್ಥಿತಿ ಗಂಭೀರವಾಗಿದೆ ಎಂಬ ವರದಿ ಹೊರಬಿದ್ದಿತು. ಅಂತಿಮವಾಗಿ ಪುತ್ರ ಚರಣ್ ಕೊಟ್ಟ ಮಾಹಿತಿಯಂತೆ, ಎಸ್‌ಪಿಬಿ ಅವರಿಗೆ ಕೊರೊನಾ ನೆಗೆಟಿವ್ ಬಂದಿದೆ ಎಂಬ ವರದಿ ಕಣ್ತಿಪ್ಪಿನಿಂದ ಆಗಿದೆ.

ಎರಡು ವಾರಗಳ ಬಳಿಕ ಇಂದು ಎಸ್‌ಪಿಬಿ ಅವರನ್ನು ಭೇಟಿ ಆಗಿದ್ದಾಗಿ ಚರಣ್ ಹೇಳಿದ್ದಾರೆ. ಎಸ್‌ಪಿಬಿ ಅವರೊಂದಿಗೆ ಮಾತನಾಡಿದೆ. ಜನರ ಪ್ರಾರ್ಥನೆಯನ್ನು ಅವರಿಗೆ ತಲುಪಿಸಿದೆ. ಅವರ ರೂಂ ನಲ್ಲಿ ಸಂಗೀತ ಹಾಕಿದೆ, ಅದನ್ನು ಅವರು ಆಲಿಸಿದರು ಎಂದು ಚರಣ್ ವಿಡಿಯೋದಲ್ಲಿ ವಿವರಿಸಿದ್ದಾರೆ.

ಎಲ್ಲರ ಬಗ್ಗೆ ವಿಚಾರಿಸಿದರು ಎಸ್‌ಪಿಬಿ: ಚರಣ್

ಎಲ್ಲರ ಬಗ್ಗೆ ವಿಚಾರಿಸಿದರು ಎಸ್‌ಪಿಬಿ: ಚರಣ್

ತಾವು ಹುಷಾರಾಗುತ್ತಿರುವುದಾಗಿ ಎಸ್‌ಪಿಬಿ ಹೇಳಿದರು. ಅಮ್ಮನ ಬಗ್ಗೆ ಇನ್ನಿತರರ ಬಗ್ಗೆ ಅವರು ವಿಚಾರಿಸಿದರು. ವೆಂಟಿಲೇಟರ್‌ನಲ್ಲಿ ಇರುವ ಕಾರಣ ಮಾತನಾಡದೆ ಬಹುತೇಕ ಸಂಜ್ಞೆಯಲ್ಲಿಯೇ ಅವರು ಮಾತನಾಡಿದರು ಎಂದಿದ್ದಾರೆ ಚೇತನ್.

ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ

ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ

ಚೆನ್ನೈನ ಎಂಜಿಎಂ ಆಸ್ಪತ್ರೆಯು ಸಂಜೆ ವೇಳೆಗೆ ಎಸ್‌ಪಿಬಿ ಅವರ ಆರೋಗ್ಯದ ಕುರಿತಂತೆ ಅಧಿಕೃತ 'ಹೆಲ್ತ್ ಬುಲೆಟಿನ್' ಬಿಡುಗಡೆ ಮಾಡಿದ್ದು, ಎಸ್‌ಪಿಬಿ ಆರೋಗ್ಯ ಗಂಭೀರ ಪರಿಸ್ಥಿತಿಯಲ್ಲಿಯೇ ಮುಂದುವರೆಯುತ್ತಿದೆ ಎಂದು ಹೇಳಿದೆ.

ವೆಂಟಿಲೇಟರ್‌ನಲ್ಲೇ ಮುಂದುವರೆದಿರುವ ಎಸ್‌ಪಿಬಿ

ವೆಂಟಿಲೇಟರ್‌ನಲ್ಲೇ ಮುಂದುವರೆದಿರುವ ಎಸ್‌ಪಿಬಿ

ಎಸ್‌ಪಿಬಿ, ವೆಂಟಿಲೇಟರ್‌ ಹಾಗೂ ಇಸಿಎಂವೋ ಸಹಾಯದಲ್ಲಿಯೇ ಇದ್ದಾರೆ. ಎಸ್‌ಪಿಬಿ ಅವರ ಸದ್ಯದ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದಿರುವ ಆಸ್ಪತ್ರೆ. ಆರೋಗ್ಯದಲ್ಲಿ ಮಂದಗತಿಯ ಚೇತರಿಕೆ ಕಾಣುತ್ತಿದೆ ಎಂದಿದೆ. ಎಸ್‌ಪಿಬಿ ಆರೋಗ್ಯದ ಬಗ್ಗೆ ತೀವ್ರ ನಿಘಾವಹಿಸಲಾಗಿದೆ ಎಂದಿದೆ.

ಆಗಸ್ಟ್ 5 ರಂದು ಆಸ್ಪತ್ರೆಗೆ ದಾಖಲಾಗಿದ್ದ ಎಸ್‌ಪಿಬಿ

ಆಗಸ್ಟ್ 5 ರಂದು ಆಸ್ಪತ್ರೆಗೆ ದಾಖಲಾಗಿದ್ದ ಎಸ್‌ಪಿಬಿ

ಎಸ್‌ಪಿಬಿ ಅವರು ಆಗಸ್ಟ್ 5 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಪಾಸಿಟಿವ್ ಆದಾಗ ಮನೆಯಲ್ಲೇ ಇದ್ದ ಅವರಿಗೆ ನಂತರ ಎದೆನೋವು ಕಾಣಿಸಿಕೊಂಡಿತ್ತು. ಹಾಗಾಗಿ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದರು. ಆಗಸ್ಟ್ 9 ರಂದು ಅವರನ್ನು ಐಸಿಯುಗೆ ವರ್ಗಾಯಿಸಲಾಗಿತ್ತು.

More from Filmibeat

English summary
SP Balasubrahmanyam's health continues to be critical and he is still on ventilator support.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X