ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯದ ಬಗ್ಗೆ ಹೊಸ ಸುದ್ದಿ: ವದಂತಿ ಎಂದ ಆಸ್ಪತ್ರೆ
ಖ್ಯಾತ ಗಾಯಕ ಎಸ್‌ಪಿ ಬಾಲಸುಪ್ರಬ್ರಹ್ಮಣ್ಯಂ ಅವರು ಕಳೆದ ಒಂದು ತಿಂಗಳಿನಿಂದ ಚೆನ್ನೈನ ಹೆಲ್ತ್ ಕೇರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ವೈರಸ್ ತಗುಲಿದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಎಸ್‌ಪಿಬಿ ಆರೋಗ್ಯದಲ್ಲಿ ಏರುಪೇರಾಗಿತ್ತು. ನಂತರ ಅವರನ್ನು ಐಸಿಯುಗೆ ಶಿಫ್ಟ್ ಮಾಡಿ ನಿಗಾ ವಹಿಸಲಾಗಿತ್ತು.
ಇದೀಗ, ಕೊರೊನಾ ವೈರಸ್‌ನಿಂದ ಎಸ್‌ಪಿಬಿ ಚೇತರಿಸಿಕೊಂಡಿದ್ದಾರೆ. ಈ ಕುರಿತು ಸ್ವತಃ ಎಸ್‌ಪಿಬಿ ಪುತ್ರ ಎಸ್‌ಪಿ ಚರಣ್ ಮಾಹಿತಿ ನೀಡಿದ್ದರು. ''ತಂದೆಯವರಿಗೆ ಕೊರೊನಾ ವರದಿ ನೆಗೆಟಿವ್ ಬಂದಿದೆ ಆದರೆ, ಅವರ ಶ್ವಾಸಕೋಶಗಳು ಪೂರ್ಣ ಆರೋಗ್ಯಯುತವಾಗುವವರೆಗೂ ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ' ಎಂದು ತಿಳಿಸಿದ್ದರು. ಆದ್ರೀಗ, ಎಸ್‌ಪಿಬಿ ಅವರು ಪ್ರಮುಖವಾದ ಸರ್ಜರಿಗೆ ಒಳಗಾಗಲಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಇದು ಸಹಜವಾಗಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಏನದು? ಮುಂದೆ ಓದಿ...

ಎಸ್‌ಪಿಬಿ ಶ್ವಾಸಕೋಶ ಕಸಿ!
ಎಸ್‌ಪಿ ಬಾಲಸುಪ್ರಬ್ರಹ್ಮಣ್ಯಂ ಅವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ ಅವರಿಗೆ ಕೊರೊನಾ ವೈರಸ್ ನೆಗಿಟಿವ್ ಬಂದಿದೆ. ಹಾಗಾಗಿ, ಎಸ್‌ಪಿಬಿ ಅವರಿಗೆ ಶ್ವಾಸಕೋಶ ಕಸಿ ಮಾಡಲು ವೈದ್ಯರು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.

ವದಂತಿ ಎಂದ ಆಸ್ಪತ್ರೆ
ಎಸ್‌ಪಿಬಿ ಅವರಿಗೆ ಶ್ವಾಸಕೋಶ ಕಸಿ ಮಾಡಲಾಗುತ್ತದೆ ಎಂಬ ಸುದ್ದಿಗಳು ಕೇವಲ ವದಂತಿ ಎಂದು ಆಸ್ಪತ್ರೆ ತಿಳಿಸಿದೆ. ಎಂಜಿಎಂ ಹೆಲ್ತ್‌ಕೇರ್‌ನ ವಕ್ತಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಎಸ್‌ಪಿ ಬಾಲಸುಬ್ರಹ್ಮಣ್ಯಂ ಶ್ವಾಸಕೋಶ ಕಸಿಗೆ ಒಳಗಾಗುತ್ತಿಲ್ಲ. ಇವು ಆಧಾರರಹಿತ ವದಂತಿಗಳು" ಎಂದು ತಿಳಿಸಿರುವುದಾದಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಎಸ್‌ಪಿಬಿ ಆರೋಗ್ಯ ಉತ್ತಮವಾಗಿದೆ
ಎಸ್‌ಪಿಬಿ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ಅವರ ಪುತ್ರ ಎಸ್‌ಪಿ ಚರಣ್ ''ತಂದೆಯವರು ಆರಾಮಾಗಿದ್ದಾರೆ, ಈ ಹಿಂದಿನ ಸ್ಥಿತಿಗಿಂತ ಚೇತರಿಕೆ ಕಂಡಿದೆ. ತಂದೆ-ತಾಯಿ ವಿವಾಹ ವಾರ್ಷಿಕೋತ್ಸವ ಸಹ ಆಸ್ಪತ್ರೆಯಲ್ಲಿ ಆಚರಿಸಿಕೊಂಡಿದ್ದಾರೆ. ಕ್ರಿಕೆಟ್ ಹಾಗೂ ಟೆನ್ನಿಸ್ ಪಂದ್ಯಗಳನ್ನು ನೋಡುತ್ತಿದ್ದಾರೆ'' ಎಂದು ಹೇಳಿದ್ದರು.
Recommended Video

ವೆಂಟಿಲೇಟರ್‌ನಲ್ಲಿಯೇ ಇದ್ದಾರೆ
ಎಸ್‌ಪಿಬಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆಯ ವೈದ್ಯರು ಹಾಗೂ ಪುತ್ರ ಚರಣ್ ಮಾಹಿತಿ ನೀಡಿದ್ದಾರೆ. ಆದರೂ, ಎಸ್‌ಪಿಬಿ ಅವರು ವೆಂಟಿಲೇಟರ್‌ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿಯೇ ಇದ್ದಾರೆ. ಶ್ವಾಸಕೋಶದ ಸಮಸ್ಯೆ ಇರುವುದರಿಂದ ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಶ್ವಾಸಕೋಶ ಕಸಿ ಮಾಡುತ್ತಿಲ್ಲ ಎಂದು ತಿಳಿದಿದೆ.


Click it and Unblock the Notifications











