ನೆಚ್ಚಿನ ತೋಟದಲ್ಲಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅಂತಿಮಕ್ರಿಯೆ
ಇಂದು ನಿಧನರಾದ ದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಅಂತಿಮಕಾರ್ಯವು ನಾಳೆ (ಶನಿವಾರ) ನಡೆಯಲಿದೆ.
ಎಸ್‌ಪಿಬಿ ಅವರ ನೆಚ್ಚಿನ ತಾಮರೈಪಾಕಂ ತೋಟದ ಮನೆ ಯ ಬಳಿ ಅವರ ಅಂತಿಮಕಾರ್ಯ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಅಂತಿಮ ವಿಧಿ-ವಿಧಾನ ನೆರವೇರಿಸಲಾಗುತ್ತದೆ ಎನ್ನಲಾಗಿದೆ.
ಇಂದು ಮಧ್ಯಾಹ್ನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಕೊನೆ ಉಸಿರೆಳೆದರು. ನಂತರ ಅವರಿಗೆ ಕೊರೊನಾ ಪರೀಕ್ಷೆ ಮಾಡಲಾಯಿತು. ಕೊರೊನಾ ನೆಗೆಟಿವ್ ಬಂದ ಕಾರಣ ಅವರ ಮೃತದೇಹವನ್ನು ಚೆನ್ನೈನ ಅವರ ಮನೆಗೆ ಕೊಂಡೊಯ್ಯಲಾಯಿತು.

ಮನೆಯ ಬಳಿ ಕೆಲ ಕಾಲ ಅಭಿಮಾನಿಗಳ ಅಂತಿಮ ದರ್ಶನಕ್ಕೆಂದು ಎಸ್‌ಪಿಬಿ ಮೃತದೇಹವನ್ನು ಇಡಲಾಯಿತು. ಶುಕ್ರವಾರ ಬೆಳಿಗ್ಗೆ ಅಂತಿಮ ವಿಧಿವಿಧಾನ ಮಾಡಲು ಕುಟುಂಬವು ನಿಶ್ಚಯಿಸಿದೆ.
ಎಸ್‌ಪಿಬಿ ಅವರ ಮೆಚ್ಚಿನ ರೆಡ್ ಹಿಲ್ ಬಳಿಯ ತಾಮರೈಪಾಕಂ ತೋಟದ ಮನೆಯ ಬಳಿ ಅಂತಿಮ ವಿಧಿ-ವಿಧಾನ ನಡೆಯಲಿದೆ. ಕುಟುಂಬ ಸದಸ್ಯರು ಮತ್ತು ಅತ್ಯಾಪ್ತರು ಮಾತ್ರವೇ ಅಂತಿಮ ಸಂಸ್ಕಾರದ ವೇಳೆ ಇರಲಿದ್ದಾರೆ.
Recommended Video
SP Balasubramanyam : ಇದು SPB ಹಾಡಿದ ಕೊನೆಯ ಹಾಡು | Oneindia Filmibeat
More from Filmibeat
English summary
SP Balasubrahmanyam's funeral will takes place at his Kamalapakkam farm house on Saturday morning.


Click it and Unblock the Notifications











