twitter
    For Quick Alerts
    ALLOW NOTIFICATIONS  
    For Daily Alerts

    ಎಸ್‌ಪಿಬಿ ಕುಟುಂಬಕ್ಕೆ ಭಾರಿ ದೊಡ್ಡ ಮೊತ್ತದ ಬಿಲ್ ನೀಡಿತೆ ಎಂಜಿಎಂ ಆಸ್ಪತ್ರೆ?

    |

    ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಸತತ 52 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು ಸಾವು-ಬದುಕಿನ ಮಧ್ಯೆ ಹೋರಾಡಿ ಸೆಪ್ಟೆಂಬರ್ 25 ರಂದು ಕೊನೆ ಉಸಿರೆಳೆದಿದ್ದಾರೆ.

    Recommended Video

    SPB Hospital Bill, ನಿಜಕ್ಕೂ SPB ಆಸ್ಪತ್ರೆ ಬಿಲ್ ಎಷ್ಟು | Filmibeat Kannada

    ಎಸ್‌ಪಿಬಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಆಗಸ್ಟ್ 4 ರಂದು ದಾಖಲಾಗಿದ್ದರು, ಅಂದಿನಿಂದಲೂ ಎಸ್‌ಪಿಬಿ ಅವರು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ತೀವ್ರ ನಿಗಾ ಘಟಕದಲ್ಲಿ, ವೆಂಟಿಲೇಟರ್ ವ್ಯವಸ್ಥೆಯಲ್ಲಿ ಇಡಲಾಗಿತ್ತು.

    ಇದೀಗ ಎಸ್‌ಪಿಬಿ ಅವರ ನಿಧನದ ಬಳಿಕ, ಅವರ ಆಸ್ಪತ್ರೆ ಬಿಲ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಎಂಜಿಎಂ ಆಸ್ಪತ್ರೆಯು ಭಾರಿ ದೊಡ್ಡ ಮೊತ್ತದ ಬಿಲ್ ಅನ್ನು ಎಸ್‌ಪಿಬಿ ಕುಟುಂಬಕ್ಕೆ ನೀಡಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಸ್‌ಪಿಬಿ ಪುತ್ರ, ಎಸ್‌ಪಿ ಚರಣ್.

    ಬಿಲ್ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ?

    ಬಿಲ್ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ?

    ಭಾರಿ ದೊಡ್ಡ ಮೊತ್ತದ ಬಿಲ್ ಅನ್ನು ಎಸ್‌ಪಿಬಿ ಕುಟುಂಬಕ್ಕೆ ಎಂಜಿಎಂ ಆಸ್ಪತ್ರೆ ನೀಡಿತ್ತು, ಬಿಲ್ ಪಾವತಿಸುವಂತೆ ಎಸ್‌ಪಿಬಿ ಕುಟುಂಬದವರು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿಕೊಂಡರು, ಆದರೆ ಅಲ್ಲಿ ಆಗದ ಕಾರಣ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಬಳಿ ಮನವಿ ಮಾಡಿದರು. ಆಗ ಅವರು ಬಿಲ್ ಅನ್ನು ಸರ್ಕಾರದ ವತಿಯಿಂದ ಪಾವತಿಸಿದರು ಎಂಬ ಸುದ್ದಿ ಹರಿದಾಡುತ್ತಿದೆ.

    ಇದೆಲ್ಲವೂ ಸುಳ್ಳು ಸುದ್ದಿ: ಎಸ್‌ಪಿ ಚರಣ್

    ಇದೆಲ್ಲವೂ ಸುಳ್ಳು ಸುದ್ದಿ: ಎಸ್‌ಪಿ ಚರಣ್

    ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್‌ಪಿ ಬಾಲಸುಬ್ರಹ್ಮಣ್ಯಂ ಪುತ್ರ ಎಸ್.ಪಿ.ಚರಣ್, ಇದೆಲ್ಲವೂ ಸುಳ್ಳು ಸುದ್ದಿಗಳು, ಎಂಜಿಎಂ ಆಸ್ಪತ್ರೆ ನಮಗೆ ಭಾರಿ ದೊಡ್ಡ ಬಿಲ್ ನೀಡಿಲ್ಲ, ಬಿಲ್ ನೀಡದೆ ಬಾಡಿ ಕೊಡುವುದಿಲ್ಲ ಎಂದು ಸಹ ಹೇಳಿರಲಿಲ್ಲ. ನಾವು ಸರ್ಕಾರಗಳನ್ನು ಸಂಪರ್ಕಿಸಿದ್ದು ಸಹ ಸುಳ್ಳು, ಇಂಥಹಾ ಸುಳ್ಳುಗಳನ್ನು ಕೆಲವರು ಏಕೆ ಹಬ್ಬಿಸುತ್ತಾರೋ ಗೊತ್ತಿಲ್ಲ ಎಂದಿದ್ದಾರೆ ಚರಣ್.

    ಪ್ರೆಸ್ ಮೀಟ್ ಮಾಡಿ ಎಲ್ಲಾ ಮಾಹಿತಿ ಕೊಡುತ್ತೀವಿ: ಚರಣ್

    ಪ್ರೆಸ್ ಮೀಟ್ ಮಾಡಿ ಎಲ್ಲಾ ಮಾಹಿತಿ ಕೊಡುತ್ತೀವಿ: ಚರಣ್

    ಆಸ್ಪತ್ರೆ ಎಷ್ಟು ಬಿಲ್ ನೀಡಿದೆ, ಎಸ್‌ಪಿಬಿ ಅವರಿಗೆ ಎಂಥಹಾ ಚಿಕಿತ್ಸೆ ನೀಡಲಾಯಿತು ಎಂಬುದೆಲ್ಲದರ ಮಾಹಿತಿ ಇಲ್ಲದೆ ಕೆಲವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಆದರೆ ನಮ್ಮ ಕುಟುಂಬದವರು ಹಾಗೂ ಆಸ್ಪತ್ರೆಯವರು ಒಟ್ಟಿಗೆ ಪ್ರೆಸ್ ಮೀಟ್ ಮಾಡಿ ಈ ವಿಷಯಗಳನ್ನು ಬಹಿರಂಗಪಡಿಸುತ್ತೇವೆ ಎಂದಿದ್ದಾರೆ ಚರಣ್.

    ಆಸ್ಪತ್ರೆ ಬಿಲ್ ಅನ್ನು ದೀಪಾ ವೆಂಕಟ್ ಪಾವತಿಸಿದರೆ?

    ಆಸ್ಪತ್ರೆ ಬಿಲ್ ಅನ್ನು ದೀಪಾ ವೆಂಕಟ್ ಪಾವತಿಸಿದರೆ?

    ಬಿಲ್ ನೀಡದೆ ಸುಬ್ರಹ್ಮಣ್ಯಂ ಅವರ ದೇಹವನ್ನು ಕೊಡಲಿಲ್ಲ ಎಂದೂ ಸಹ ಸುದ್ದಿ ಹರಡಿಸಲಾಗಿತ್ತು, ಆಗ ವೆಂಕಯ್ಯನಾಯ್ಡು ಪುತ್ರಿ ದೀಪಾ ವೆಂಕಟ್ ಬಂದು ಆಸ್ಪತ್ರೆ ಬಿಲ್ ಪಾವತಿಸಿದರು ಎಂದು ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿಗಳೆಲ್ಲಾ ಸುಳ್ಳು ಮತ್ತು ಬೇಸರ ಹುಟ್ಟಿಸುವವಂಥಹವು ಎಂದಿದ್ದಾರೆ ಚರಣ್.

    English summary
    SPB's son SP Charan gave clarification about MGM hospital bill. He said some people spreading fake news about hospital bill.
    Monday, September 28, 2020, 9:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X