For Quick Alerts
  ALLOW NOTIFICATIONS  
  For Daily Alerts

  ಎಸ್ ಪಿ ಬಿ ಅಂತ್ಯಕ್ರಿಯೆಯಲ್ಲಿ ನಟ ಅಜಿತ್ ಯಾಕೆ ಭಾಗಿಯಾಗಿಲ್ಲ?: ಪ್ರತಿಕ್ರಿಯೆ ನೀಡಿದ ಎಸ್ ಪಿ ಚರಣ್

  |

  ಲೆಜೆಂಡರಿ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಸತತ 52 ದಿನಗಳ ಕಾಲ ಚೆನ್ನೈನ ಎಂ ಜಿ ಎಂ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿ ಸೆಪ್ಟಂಬರ್ 25ರಂದು ಕೊನೆಯುಸಿರೆಳೆದಿದ್ದಾರೆ. ಆಗಸ್ಟ್ 5ರಂದು ಕೊರೊನಾ ಪಾಸಿಟಿವ್ ಬಂದ ಕಾರಣ ಎಸ್ ಪಿ ಬಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಎಸ್ ಪಿ ಬಿ ಆರೋಗ್ಯ ತೀರಾ ಹದಗೆಟ್ಟ ಕಾರಣ ಅವರನ್ನು ತೀವ್ರ ನಿಗಾಘಟಕಕ್ಕೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗಿತ್ತು.

  ಗಾನ ಗಾರುಡಿಗ ನಿಧನದ ಬಳಿಕ ಅವರ ಆಸ್ಪತ್ರೆ ಬಿಲ್ ವಿಚಾರವಾಗಿ ಸುದ್ದಿ ವೈರಲ್ ಆಗಿತ್ತು. ಎಂ ಜಿ ಎಂ ಆಸ್ಪತ್ರೆಯು ಭಾರಿ ಮೊತ್ತದ ಬಿಲ್ ಅನ್ನು ಎಸ್ ಪಿ ಬಿ ಗೆ ಕುಟುಂಬಕ್ಕೆ ನೀಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ವಿಚಾರವಾಗಿ ಎಸ್ ಪಿ ಬಿ ಪುತ್ರ ಎಸ್ ಪಿ ಚರಣ್ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇದೊಂದೆ ಅಲ್ಲ ಎಸ್ ಪಿ ಬಿ ನಿಧನದ ಬಳಿಕ ಅನೇಕ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಎಲ್ಲಾ ವದಂತಿಗಳಿಗೂ ಸ್ಪಷ್ಟನೆ ನೀಡಲು ಎಸ್ ಪಿ ಚರಣ್ ಇಂದು ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಮುಂದೆ ಓದಿ...

  ಎಸ್‌ಪಿಬಿ ಕುಟುಂಬಕ್ಕೆ ಭಾರಿ ದೊಡ್ಡ ಮೊತ್ತದ ಬಿಲ್ ನೀಡಿತೆ ಎಂಜಿಎಂ ಆಸ್ಪತ್ರೆ?ಎಸ್‌ಪಿಬಿ ಕುಟುಂಬಕ್ಕೆ ಭಾರಿ ದೊಡ್ಡ ಮೊತ್ತದ ಬಿಲ್ ನೀಡಿತೆ ಎಂಜಿಎಂ ಆಸ್ಪತ್ರೆ?

  ಅಂತ್ಯಕ್ರಿಯೆಯಲ್ಲಿ ಸ್ಟಾರ್ ನಟರು ಗೈರಾಗಿದ್ದೇಕೆ?

  ಅಂತ್ಯಕ್ರಿಯೆಯಲ್ಲಿ ಸ್ಟಾರ್ ನಟರು ಗೈರಾಗಿದ್ದೇಕೆ?

  ಖ್ಯಾತ ಗಾಯಕ, ದಕ್ಷಿಣ ಭಾರತದ ಅನೇಕ ಸ್ಟಾರ್ ನಟರಿಗೆ ಧ್ವನಿಯಾದ ಗಾನ ಗಾರುಡಿಗನ ಅಂತ್ಯಕ್ರಿಯೆಗೆ ತಮಿಳು ಸ್ಟಾರ್ ನಟರು ಯಾಕೆ ಬಂದಿಲ್ಲ ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿ ಸುಮ್ಮನಾದ ನಟರ ವಿರುದ್ಧ ಅನೇಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಕಮಲ್ ಹಾಸನ್, ರಜನಿತಾಂಕ್, ತಲಾ ಅಜಿತ್ ಅಂತ್ಯಕ್ರಿಯಲ್ಲಿ ಯಾಕೆ ಭಾಗಿಯಾಗಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

  ತಲಾ ಅಜಿತ್ ಮೌನಕ್ಕೆ ಕಾರಣವೇನು?

  ತಲಾ ಅಜಿತ್ ಮೌನಕ್ಕೆ ಕಾರಣವೇನು?

  ನಟ ವಿಜಯ್ ಕೊನೆಯಲ್ಲಿ ಬಂದು ಅಂತಿಮ ದರ್ಶನ ಪಡೆದು ತೆರಳಿದರು. ವಿಜಯ್ ಬಿಟ್ಟರೆ ಬೇರೆ ಯಾವ ದೊಡ್ಡ ಕಲಾವಿದರು ಕಾಣಿಸಿಕೊಂಡಿಲ್ಲ. ವಿಶೇಷವಾಗಿ ನಟ ಅಜಿತ್ ಯಾಕೆ ಬಂದಿಲ್ಲ, ಎಸ್ ಪಿ ಬಿ ವಿಚಾರದಲ್ಲಿ ನಟ ಅಜಿತ್ ಮೌನಕ್ಕೆ ಶರಣಾಗಿದ್ದೇಕೆ ಎನ್ನುವ ಸುದ್ದಿ ವೈರಲ್ ಆಗಿದೆ. ಅನೇಕರು ಅಜಿತ್ ಗೈರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಎಸ್ ಪಿ ಚರಣ್ ಪ್ರತಿಕ್ರಿಯೆ ನೀಡಿದ್ದಾರೆ.

  'ಬರ್ತಾರೆ ಅಂದ್ಕೊಂಡಿದ್ದೆ, ಹಾಗೆ ಹೋಗ್ಬಿಟ್ರು'- ಬಾಲು ಅಗಲಿಕೆಗೆ ಎಸ್ ಜಾನಕಿ ಕಣ್ಣೀರು'ಬರ್ತಾರೆ ಅಂದ್ಕೊಂಡಿದ್ದೆ, ಹಾಗೆ ಹೋಗ್ಬಿಟ್ರು'- ಬಾಲು ಅಗಲಿಕೆಗೆ ಎಸ್ ಜಾನಕಿ ಕಣ್ಣೀರು

  ಅಜಿತ್ ಬಗ್ಗೆ ಎಸ್ ಪಿ ಬಿ ಪುತ್ರ ಹೇಳಿದ್ದೇನು?

  ಅಜಿತ್ ಬಗ್ಗೆ ಎಸ್ ಪಿ ಬಿ ಪುತ್ರ ಹೇಳಿದ್ದೇನು?

  "ಅಜಿತ್ ನನ್ನ ಸ್ನೇಹಿತರು. ಅವರು ನನ್ನ ತಂದೆಗೂ ಉತ್ತಮ ಸ್ನೇಹಿತರಾಗಿದ್ದರು. ಅವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೋ ಇಲ್ಲವೋ ಎನ್ನುವುದು ಏಕೆ ದೊಡ್ಡ ವಿಷಯ ಮಾಡುತ್ತಿದ್ದೀರಾ? ಮನೆಯಿಂದನೇ ಸಂತಾಪ ಸೂಚಿಸಿರಬಹುದು. ಅವರು ಮಾತನಾಡುತ್ತಾರೋ ಇಲ್ಲವೋ ಎನ್ನುವುದು ಈಗ ಸಮಸ್ಯೆಯಲ್ಲ. ಯಾಕೆ ಇಂತ ವದಂತಿ ಹರಡಿಸುತ್ತೀರಿ? ದೂರವಾಣಿಯಿಂದ ಮಾತನಾಡುತ್ತಾರೋ ಇಲ್ಲವೋ ಅದು ಮುಖ್ಯವಲ್ಲ. ಇದನ್ನು ಚರ್ಚೆಯ ವಿಷಯವನ್ನಾಗಿ ಮಾಡಬಾರದು" ಎಂದಿದ್ದಾರೆ.

  ನನ್ನ ತಾಯಿಯನ್ನು ನೋಡಿಕೊಳ್ಳಬೇಕು

  ನನ್ನ ತಾಯಿಯನ್ನು ನೋಡಿಕೊಳ್ಳಬೇಕು

  "ನನಗೆ ತಂದೆ ಇನ್ನಿಲ್ಲ. ಈ ಜಗತ್ತು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಕಳೆದು ಕೊಂಡಿದೆ. ನಾವು ತುಂಬಾ ದುಃಖದಲ್ಲಿದ್ದೀವಿ. ಇದರಿಂದ ಹೊರಬರಲು ನಮಗೂ ಸಮಯ ಬೇಕು. ಪ್ರತಿಯೊಂದು ವಿಷಯಕ್ಕೂ ಸ್ಪಷ್ಟನೆ ಕೊಡುತ್ತಾ, ನಾನು ಪ್ರತಿದಿನ ಸಾಕಷ್ಟು ಫೋನ್ ಕರೆಗಳನ್ನು ಸ್ವೀಕರಿಸುತ್ತಿದ್ದೇನೆ. ನಾನು ನನ್ನ ತಾಯಿಯನ್ನು ನೋಡಿಕೊಳ್ಳಬೇಕು"

  ಸಚಿವರ ಕೆಟ್ಟ ಅಂತ್ಯಕ್ರಿಯೆ ನೋಡಿ ಕಂಬನಿ ಮಿಡಿದ ಜಗ್ಗೇಶ್ | Filmibeat Kannada
  ನೋವಿನಿಂದ ಹೊರಬರಲು ನಮಗೆ ಸಮಯ ಕೊಡಿ

  ನೋವಿನಿಂದ ಹೊರಬರಲು ನಮಗೆ ಸಮಯ ಕೊಡಿ

  "ನಿವೆಲ್ಲರೂ ನನ್ನ ತಂದೆಯ ಬಗ್ಗೆ ತುಂಬಾ ಗೌರವ ಹೊಂದಿದ್ದೀರಿ. ಈ ಸಮಯದಲ್ಲಿ ನಮ್ಮ ಕುಟುಂಬದ ಮೇಲೆ ಕರುಣೆ ತೋರಿಸಿ. ನಾನು ಎಲ್ಲಿಯೂ ಹೋಗುತ್ತಿಲ್ಲ. ನಾನು ಮತ್ತೆ ಸಿನಿಮಾ ಕೆಲಸಗಳಿಗೆ ಮರಳುತ್ತೇನೆ. ಈ ನೋವಿನಿಂದ ಹೊರಬರಲು ನಮಗೆ ಸ್ವಲ್ಪ ಸಮಯ ನೀಡಬೇಕೆಂದು ಕೇಳಿಕೊಳ್ಳುತ್ತೇನೆ" ಎಂದು ಭಾವುಕರಾಗಿ ಮಾತನಾಡಿದ್ದಾರೆ.

  English summary
  SP Charan reaction about questions on actor Ajith not attend to SPB's Funeral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X