For Quick Alerts
  ALLOW NOTIFICATIONS  
  For Daily Alerts

  ಸಂಕ್ರಾಂತಿ ಹಬ್ಬಕ್ಕೆ ತಮಿಳು ಪ್ರೇಕ್ಷಕರಿಗೆ ಭರ್ಜರಿ ಉಡುಗೊರೆ ನೀಡಲಿರುವ ಶ್ರೀಮುರಳಿ

  |

  ಮದಗಜ ಚಿತ್ರದ ಮೂಲಕ ರೋರಿಂಗ್ ಸ್ಟಾರ್ ಶ್ರೀಮುರಳಿ ಪ್ಯಾನ್ ಇಂಡಿಯಾ ಹೀರೋ ಎನಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ತಯಾರಾಗುತ್ತಿರುವ ಮದಗಜ ಸಿನಿಮಾ ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ.

  ಹೊಸ ವರ್ಷದ ಪ್ರಯುಕ್ತ ಮದಗಜ ಚಿತ್ರದ ತೆಲುಗು ಟೀಸರ್ ರಿಲೀಸ್ ಆಗಿತ್ತು. ಈಗ ಸಂಕ್ರಾಂತಿ ಹಬ್ಬದ ವಿಶೇಷವಾಗಿ ತಮಿಳಿನಲ್ಲಿ ಮದಗಜ ಟೀಸರ್ ರಿಲೀಸ್ ಆಗುತ್ತಿದೆ.

  ಮದಗಜ ತೆಲುಗು ಟೀಸರ್‌ಗೆ ಹಿನ್ನೆಲೆ ಧ್ವನಿ ನೀಡಿದ ನಟ ಶ್ರೀಮುರಳಿಮದಗಜ ತೆಲುಗು ಟೀಸರ್‌ಗೆ ಹಿನ್ನೆಲೆ ಧ್ವನಿ ನೀಡಿದ ನಟ ಶ್ರೀಮುರಳಿ

  ಜನವರಿ 14 ರಂದು ಸಂಜೆ 5.05 ಗಂಟೆಗೆ ಸ್ವತಃ ಶ್ರೀಮುರಳಿ ಅವರೇ ಮದಗಜ ತಮಿಳು ಟೀಸರ್ ಲಾಂಚ್ ಮಾಡಲಿದ್ದಾರೆ. ಈ ಕುರಿತು ಉಮಾಪತಿ ಫಿಲಂಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, 'ಅಯೋಗ್ಯ' ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡ್ತಿದ್ದಾರೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿಸಿರುವ ಮದಗಜ ಸಿನಿಮಾ ತಂಡ ಅಂತಿಮ ಹಂತದ ಶೂಟಿಂಗ್ ಬಾಕಿ ಉಳಿಸಿಕೊಂಡಿದೆ. ಶ್ರೀಮುರಳಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ.

  ಡಿಸೆಂಬರ್ 17 ರಂದು ಶ್ರೀಮುರಳಿಯ ಹುಟ್ಟುಹಬ್ಬದ ಪ್ರಯುಕ್ತ ಮದಗಜ ಸಿನಿಮಾದ ಟೀಸರ್ ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಆಮೇಲೆ ಜನವರಿ 1 ರಂದು ತೆಲುಗು ವರ್ಷನ್ ಟೀಸರ್ ರಿಲೀಸ್ ಬಂದಿತ್ತು. ಈಗ ತಮಿಳಿನಲ್ಲಿ ತೆರೆಕಾಣಲಿದೆ.

  ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ 'ಕಬ್ಜ'ದ ಕಥೆ | Filmibeat Kannada
  English summary
  Kannada Actor Srii Murali to annouce Madhagaja tamil teaser release Update on 14th Jan at 5.05pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X