ಮುಖ್ಯಮಂತ್ರಿ ಆಗುವ ಕನಸು ಭಗ್ನ ? ಕಿಂಗ್ ಮೇಕರ್ ಆಗ್ತಾರಾ ವಿಜಯ್ ? ಎಕ್ಸಿಟ್ ಪೋಲ್‌ ಫಲಿತಾಂಶವೇನು ?

ಚುನಾವಣೆಯ ಫಲಿತಾಂಶ ಬರುವ ಮುನ್ನ, ರಾಜಕೀಯದ ರಣರಂಗದಲ್ಲಿ ವಜ್ರಖಚಿತ ಸಿಂಹಾಸನ ಯಾರ ಪಾಲಾಗುತ್ತೆ ಎನ್ನುವ ಲೆಕ್ಕಾಚಾರವನ್ನು ಅನೇಕರು ಹಾಕುತ್ತಾರೆ. ರಾಜಕೀಯದ ಭಾಷೆಯಲ್ಲಿ ಇದನ್ನು ಎಕ್ಸಿಟ್ ಪೋಲ್ ಎನ್ನುತ್ತಾರೆ. ಫಲಿತಾಂಶ ಬರುವ ಎರಡು ಮೂರು ದಿನಗಳ ಮುನ್ನ ಟಿವಿ ಆನ್ ಮಾಡಿದ್ರೆ ಸಾಕು. ನಿಮಗೆ ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುವುದೇ ಈ ಎಕ್ಸಿಟ್ ಪೋಲ್‌ ಗಳ ಅಂಕಿ - ಅಂಶ.

ಈ ವರ್ಷ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ತಮಿಳುನಾಡಿನಲ್ಲಿ ಫಲಿತಾಂಶ ಬರುವ ಮುನ್ನ ಸದ್ಯ ಈ ಎಕ್ಸಿಟ್ ಪೋಲ್‌ ಬಹಿರಂಗವಾಗಿದ್ದು ಡಿಎಂಕೆ ಪಕ್ಷಕ್ಕೆ ಈ ಬಾರಿಯೂ ಜನ ಮಣೆ ಹಾಕಿದ್ದಾರೆ. ಕೇವಲ ರ್ಯಾಲಿಗಳಲ್ಲಿ‌ ಮಾತ್ರ ವಿಜಯ್ ಗೆ ಜೈ ಎಂದು ತಮಿಳುನಾಡಿನ ಜನ ಕೈ ತೊಳೆದುಕೊಂಡಿದ್ದಾರೆ.

stalin-leads-vijay-disrupts-exit-polls-predict-dmk-return-as-tvk-rocks-2026

ಹೌದು, ನಿಮಗೆ ಗೊತ್ತಿರಲಿ.. ತಮಿಳುನಾಡಿನಲ್ಲಿ ಒಟ್ಟು 234 ವಿಧಾನಸಭಾ ಕ್ಷೇತ್ರಗಳಿವೆ. ಸರ್ಕಾರ ರಚನೆಗೆ 118 ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ಕೀರ್ತಿ ಪತಾಕೆಯನ್ನು ಹಾರಿಸಬೇಕಿದೆ. ಸದ್ಯ ಎಕ್ಸಿಟ್ ಫೋಲ್ ಲೆಕ್ಕಾಚಾರದ ಪ್ರಕಾರ ತಮಿಳುನಾಡಿನಲ್ಲಿ ಆಡಳಿತರೂಢ ಡಿಎಂಕೆ ( ದ್ರಾವಿಡ ಮುನ್ನೇತ್ರ ಕಳಗಂ) ಈ ಬಾರಿಯೂ ಗದ್ದುಗೆ ಏರಲಿದೆ.

ಸದ್ಯ ಹೊರ ಬಿದ್ದಿರುವ ಎಕ್ಸಿಟ್ ಪೋಲ್ ಲೆಕ್ಕಾಚಾರವನ್ನು ನೋಡುವುದಾದರೆ, ''ಪೀಪಲ್ಸ್ ಪಲ್ಸ್'' ಪ್ರಕಾರ, ಡಿಎಂಕೆ 125ರಿಂದ 145 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಎಐಡಿಎಂಕೆಯು 65ರಿಂದ 80 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಹಲವರು ಈ ಬಾರಿ ವಿಜಯ್ ಈ ಚುನಾವಣೆಯ ಕಿಂಗ್ ಆಗ್ತಾರೆ ಎಂದು ಅಂದುಕೊಂಡಿದ್ದರು. ಕಿಂಗ್ ಆಗದೇ ಇದ್ದರೂ ಕಿಂಗ್ ಮೇಕರ್ ಆಗುವುದು ಖಚಿತ ಎನ್ನುವ ಮಾತುಗಳನ್ನಾಡಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ಈ ಚುನಾವಣೆ ವಿಜಯ್ ಪಾಲಿಗೆ ಮಾಡು ಇಲ್ಲ ಮಡಿ ಎಂಬಂತಾಗಿತ್ತು. ಪತ್ನಿ ಸಂಗೀತಾ ಬೇರೆ ತಿರುಗಿ ಬಿದ್ದಿದ್ದರು. ಸಂಗೀತಾ ಅವರ ಈ ನಡೆಯಿಂದ ವಿಜಯ್ ಪೊಲಿಟಿಕಲ್ ಇಮೇಜ್ ಡ್ಯಾಮೇಜ್ ಆಯ್ತು ಎಂದು ಹಲವರು ಲೆಕ್ಕಾಚಾರ ಹಾಕಿದ್ದರು. ವಿಜಯ್ ಹೆಚ್ಚೆಂದರೆ 10 ಕ್ಷೇತ್ರಗಳಲ್ಲಿ ಗೆದ್ದರೆ ಅದೇ ಹೆಚ್ಚು ಎನ್ನುವ ಕುಹುಕದ ಮಾತುಗಳನ್ನಾಡಿದ್ದರು.

stalin-leads-vijay-disrupts-exit-polls-predict-dmk-return-as-tvk-rocks-2026

ಎಕ್ಸಿಟ್ ಪೋಲ್ ಪ್ರಕಾರ ಸದ್ಯ ಹಲವರ ಈ ಲೆಕ್ಕಾಚಾರ ಸರಿಯಾಗಿದ್ದು,
ವಿಜಯ್ ಸಾರಥ್ಯದ ಟಿವಿಕೆ ಪಕ್ಷ ಕೇವಲ 18ರಿಂದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ಭವಿಷ್ಯವನ್ನು ಈ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ.

ವಿಜಯ್ ಹೊರತು ಪಡಿಸಿದರೆ ಕಣದಲ್ಲಿ ಇರುವುದು ಪಕ್ಷೇತರರು. ಈ ಪಕ್ಷೇತರರು ಅಬ್ಬಬ್ಬಾ ಅಂದರೆ 2ರಿಂದ 6 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎನ್ನುವ ವಿಚಾರ ಸದ್ಯ ಹೊರ ಬಂದಿದೆ.

ಇನ್ನು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮತ ಹಂಚಿಕೆ ಲೆಕ್ಕ ತೆಗೆದುಕೊಂಡರೆ ಡಿಎಂಕೆ ಮೈತ್ರಿಕೂಟಕ್ಕೆ 38.4% ಎಐಡಿಎಂಕೆ ಮೈತ್ರಿಕೂಟಕ್ಕೆ 31.5% ಹಾಗೂ ಟಿವಿಕೆಗೆ 23.6% ಇದೆ. ಉಳಿದಂತೆ ಪಕ್ಷೇತರರಿಗೆ ಶೇ 6.5% ಮತ ಚಲಾವಣೆ ಆಗಿದೆ.

ತಮಿಳುನಾಡು ವಿಧಾನಸಭಾ ಚುನಾವಣೆ 2026 - ಎಕ್ಸಿಟ್ ಪೋಲ್ಸ್

ಒಟ್ಟು ಸ್ಥಾನಗಳು: 234 | ಬಹುಮತಕ್ಕೆ ಅಗತ್ಯ: 118

ಸಮೀಕ್ಷೆ ನಡೆಸಿದ ಸಂಸ್ಥೆಗಳು ಡಿಎಂಕೆ+ ಎಐಎಡಿಎಂಕೆ+ ಟಿವಿಕೆ ಎನ್‌ಟಿಕೆ ಇತರೆ
ಪೀಪಲ್ಸ್ ಪಲ್ಸ್ 125-145 65-80 18-24 0 2-6
ನ್ಯೂಸ್18 125-145 65-80 13-18 5-8 2-6
ಟುಡೇಸ್ ಚಾಣಕ್ಯ 145-160 50-65 13-18 5-8 0
ಮ್ಯಾಟ್ರೈಸ್ 122-132 87-100 12-16 1-6 0
ಪಿ-ಮಾರ್ಕ್ 125-145 65-85 16-26 1-6 0
ಪೋಲ್ ಆಫ್ ಪೋಲ್ಸ್ 135-149 66-79 12-17 3-7 2-6

ಹೀಗೆ ಸದ್ಯ ಎಕ್ಸಿಟ್ ಪೋಲ್‌ನಲ್ಲಿ ವಿಜಯ್ ರಾಜಕೀಯ ಭವಿಷ್ಯವನ್ನು ಬರೆಯಲಾಗಿದೆ. ವಿಜಯ್ ನಿಜಕ್ಕೂ ತಮಿಳುನಾಡಿನ ಕಿಂಗ್ ಆಗ್ತಾರಾ ..? ಅಥವಾ ಕಿಂಗ್ ಮೇಕರ್ ಆಗ್ತಾರಾ..? ಇಲ್ಲವಾದಲ್ಲಿ ಸೋತು ಮರಳಿ ಚಿತ್ರರಂಗಕ್ಕೆ ಬರುತ್ತಾರಾ..? ಎನ್ನುವುದಕ್ಕೆ ಉತ್ತರ ಮೇ 4ರಂದು ಸಿಗಲಿದೆ.

Read more about: vijay politics kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X