For Quick Alerts
  ALLOW NOTIFICATIONS  
  For Daily Alerts

  ಒಂದು ಕಾಲದ ಸ್ಟಾರ್ ನಟಿ ಇಂದು ಬೀದಿ-ಬೀದಿಯಲ್ಲಿ ಸೋಪು ಮಾರುತ್ತಿದ್ದಾರೆ!

  |

  ಸಿನಿಮಾ ರಂಗ ಬಹಳ ಅನಿಶ್ಚತತೆಯಿಂದ ಕೂಡಿದ ವೃತ್ತಿ. ಒಂದು ಸಿನಿಮಾದಿಂದ ಸಾಮಾನ್ಯ ವ್ಯಕ್ತಿ ಸ್ಟಾರ್ ಆಗಬಲ್ಲ. ಸ್ಟಾರ್ ಆಗಿದ್ದವನು ಪಾತಾಳಕ್ಕೆ ಕುಸಿಯಬಲ್ಲ. ಇಂಥಹಾ ಅನೇಕ ಉದಾಹರಣೆಗಳು ಚಿತ್ರರಂಗದಲ್ಲಿವೆ.

  ಒಂದು ಕಾಲದಲ್ಲಿ ಸ್ಟಾರ್‌ಗಳಾಗಿದ್ದವರು ಇದ್ದದ್ದನ್ನೆಲ್ಲ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇಂಥಹವರ ಪಟ್ಟಿಗೆ ಹೊಸ ಸೇರ್ಪಡೆ ನಟಿ ಐಶ್ವರ್ಯಾ ಭಾಸ್ಕರನ್.

  ತಮಿಳುನಾಡಿನ ನಟಿ ಐಶ್ವರ್ಯಾ ಭಾಸ್ಕರನ್ 1989ರಲ್ಲಿ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದವರು. ತೆಲುಗು, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿಯೂ ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸಿದಾಕೆ ಐಶ್ವರ್ಯಾ ಭಾಸ್ಕರನ್. ಈವರೆಗೆ ನೂರಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆದರೆ ಈಗ ಜೀವನ ಸಾಗಿಸಲು ಮನೆ-ಮನೆಗೆ ತೆರಳಿ ಸೋಪು ಮಾರುತ್ತಿದ್ದಾರಂತೆ.

  ಹೌದು, ನಟಿ ಐಶ್ವರ್ಯಾ ಭಾಸ್ಕರನ್ ಸ್ವತಃ ಈ ವಿಷಯವನ್ನು ಯೂಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನನ್ನ ಬಳಿ ಹಣವಿಲ್ಲ, ಇರಲು ಮನೆಯಿಲ್ಲ, ಹಾಗಾಗಿ ಬದುಕು ದೂಡಲು ಮನೆ-ಮನೆಗೆ ತೆರಳಿ ಸೋಪು ಮಾರಾಟ ಮಾಡುತ್ತಿದ್ದೇನೆ. ನಾನು ಈಗಲೂ ನಟಿಸುವುದರಲ್ಲಿ ಆಸಕ್ತಿ ಹೊಂದಿದ್ದೇನೆ. ಯಾರಾದರೂ ಕರೆ ಮಾಡಿ ಅವಕಾಶಕೊಡಲೆಂದು ಕಾಯುತ್ತಿದ್ದೇನೆ ಎಂದಿದ್ದಾರೆ.

  ವಿಚ್ಛೇಧನದ ಬಗ್ಗೆ ಐಶ್ವರ್ಯಾ ಮಾತು

  ವಿಚ್ಛೇಧನದ ಬಗ್ಗೆ ಐಶ್ವರ್ಯಾ ಮಾತು

  ''ನಾನು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ಮೂರೇ ವರ್ಷಕ್ಕೆ ನನ್ನ ಮದುವೆಯಾಯಿತು. ಅಷ್ಟೆ ಅಲ್ಲಿಗೆ ನನ್ನ ಕರಿಯರ್ ಸಹ ಮುಗಿಯಿತು. ನನ್ನ ಮದುವೆ ಒಂದು ನರಕದಂತಾಯಿತು. ಮದುವೆಯಾದ ಮೂರೇ ವರ್ಷಕ್ಕೆ ನಾನು ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದೆ. ಆಗ ನನ್ನ ಮಗಳಿಗೆ ಕೇವಲ ಒಂದೂವರೆ ವರ್ಷ. ಆದರೆ ನನಗೆ ವಿಚ್ಛೇಧನ ಬೇಕಾಗಿತ್ತು. ಆದರೆ ಈಗ ನಾನು ನನ್ನ ಮಾಜಿ ಪತಿ ಹಾಗೂ ಆತನ ಪತ್ನಿಯೊಂದಿಗೆ ಒಳ್ಳೆಯ ಗೆಳೆತನ ನಿಭಾಯಿಸುತ್ತಿದ್ದೇನೆ'' ಎಂದಿದ್ದಾರೆ.

  ''ಕುಡಿತಕ್ಕೆ ಖರ್ಚು ಮಾಡಿಲ್ಲ, ಕುಟುಂಬಕ್ಕೆ ಹಣ ಖರ್ಚು ಮಾಡಿದೆ''

  ''ಕುಡಿತಕ್ಕೆ ಖರ್ಚು ಮಾಡಿಲ್ಲ, ಕುಟುಂಬಕ್ಕೆ ಹಣ ಖರ್ಚು ಮಾಡಿದೆ''

  ''ನಾನು ದುಡಿದ ಹಣ ನನ್ನ ಮೇಲೆ ಖರ್ಚು ಮಾಡಿಕೊಳ್ಳಲಿಲ್ಲ. ಕುಡಿದು ಹಾಳು ಮಾಡಲಿಲ್ಲ ಬದಲಿಗೆ ನನ್ನ ಕುಟುಂಬಕ್ಕಾಗಿ ಖರ್ಚು ಮಾಡಿದ್ದೇನೆ'' ಎಂದಿದ್ದಾರೆ ನಟಿ ಐಶ್ವರ್ಯಾ ಭಾಸ್ಕರನ್. ತನ್ನ ಮಗಳು ಆಗಾಗ ಕರೆ ಮಾಡುತ್ತಾಳೆ, ಆದರೆ ಅವಳಿಗೆ ಹೇಳುತ್ತೇನೆ, ಸಹಾಯ ಮಾಡುವ ಮನಸ್ಸಿದ್ದರೆ ನನ್ನ ಜೊತೆ ಬಂದು ಸೋಪು ಮಾರು ಎಂದು'' ಎಂದಿದ್ದಾರೆ ನಟಿ ಐಶ್ವರ್ಯಾ ಭಾಸ್ಕರನ್.

  ನೂರಾರು ಸಿನಿಮಾಗಳಲ್ಲಿ ನಟಿಸಿರುವ ಐಶ್ವರ್ಯಾ

  ನೂರಾರು ಸಿನಿಮಾಗಳಲ್ಲಿ ನಟಿಸಿರುವ ಐಶ್ವರ್ಯಾ

  ಐಶ್ವರ್ಯಾ ಭಾಸ್ಕರನ್ ಆರಂಭದಲ್ಲಿ ನಾಯಕಿಯಾಗಿ ಮೋಹನ್‌ಲಾಲ್, ಮಮ್ಮುಟಿ, ಜಗಪತಿ ಬಾಬು ಇನ್ನೂ ಹಲವರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆರಂಭದಲ್ಲಿ ನನ್ನ ವಿರುದ್ಧ ಕೆಲವರು ಪಿತೂರಿ ಮಾಡಿದರು. ನನ್ನನ್ನು ಅನ್‌ಲಕ್ಕಿ ನಾಯಕಿ ಎಂದು ಕರೆದರು ಇದರಿಂದ ವೃತ್ತಿ ಜೀವನಕ್ಕೆ ಪೆಟ್ಟಾಯಿತು ಎಂದಿದ್ದಾರೆ ಐಶ್ವರ್ಯಾ ಭಾಸ್ಕರನ್. 2021 ರವರೆಗೆ ಹಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ. ಆದರೆ 2021 ರ ಆರಂಭದಿಂದ ಅವರಿಗೆ ಅವಕಾಶ ದೊರಕಿಲ್ಲ.

  ಮೂರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ

  ಮೂರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ

  ಕನ್ನಡದ 'ಹೊಸ ಕಾವ್ಯ', 'ಪಾಂಡವರು' ಹಾಗೂ ಪ್ರಕಾಶ್ ನಟಿಸಿ, ನಿರ್ದೇಶನ ಮಾಡಿದ್ದ 'ಒಗ್ಗರಣೆ' ಸಿನಿಮಾಗಳಲ್ಲಿ ಐಶ್ವರ್ಯಾ ಭಾಸ್ಕರನ್ ನಟಿಸಿದ್ದಾರೆ. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಐಶ್ವರ್ಯಾ, 25ಕ್ಕೂ ಹೆಚ್ಚು ಧಾರಾವಾಹಿ, ಹಲವಾರು ರಿಯಾಲಿಟಿ ಶೋಗಳಲ್ಲಿ ಸಹ ನಟಿಸಿದ್ದಾರೆ. 'ಗ್ಯಾಂಗ್‌ಸ್ಟರ್' ಹಾಗೂ 'ಡಿಯರ್ ಯು ಬ್ರದರ್ ಯು' ವೆಬ್ ಸರಣಿಗಳಲ್ಲಿ ಸಹ ಈ ನಟಿ ನಟಿಸಿದ್ದಾರೆ.

  English summary
  Once upon a time star actress Aishwarya Bhaskaran now struggling to lead her life. She said she is selling soaps to door to door to earn money.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X