ವಿಜಯ್ ಜೊತೆ ಅಕ್ರಮ ಸಂಬಂಧ ; ಮೂರ್ಖತನದ ಪರಮಾವಧಿ-ತ್ರಿಶಾ ಕೆಂಡ..ಕೆಂಡ
ಸಂಸಾರ ಅಂದಮೇಲೆ ಜಗಳ ರೋಮ್ಯಾನ್ಸು ಅನ್ನೋದು ಒಂದೇ ನಾಣ್ಯದ ಎರಡು ಮುಖಗಳ ತರ. ಒಮ್ಮೆ ಬೈದಾಡಿಕೊಂಡವರೂ ಕೆಲ ನಿಮಿಷಗಳಲ್ಲಿ ಒಂದಾಗಬಹುದು. ಆದರೆ ಯಾವಾಗ ವೈಯಕ್ತಿಕ ವಿಚಾರಗಳು ಬೀದಿಗೆ ಬರುತ್ತಾವೋ ಆಗ ರಂಪ-ರಾಮಾಯಣ ಶುರುವಾಗುತ್ತೆ. ನಾಲ್ಕು ಗೋಡೆಗಳ ನಡುವೆ ಬಗೆಹರಿಯಬೇಕಿದ್ದ ವಿಷಯ ಸಾರ್ವಜನಿಕರ ಬಾಯಿಗೆ ಆಹಾರವಾಗುತ್ತೆ.
ಅದರಲ್ಲಿಯೂ ಬಣ್ಣದ ಪ್ರಪಂಚದವರ ಖಾಸಗಿ ಬದುಕು ಖಾಸಗಿಯಾಗಿದ್ದರೇನೆ ಚೆಂದ. ಹೊರ ಬಂದರೆ ವಿವಾದಕ್ಕೆ ನಾಂದಿ ಹಾಡುತ್ತಾವೆ. ಟ್ರೋಲಿಗರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗುತ್ತೆ. ಕಾಲೆಳೆಯಲು ಕಾದು ಕುಂತ ಗುಂಪಿನ ಕೈಗೆ ಬ್ರಹ್ಮಾಸ್ತ್ರ ಸಿಕ್ಕಂತಾಗುತ್ತೆ. ಇದಕ್ಕೆ ತ್ರಿಶಾ- ವಿಜಯ್ ಮತ್ತು ಸಂಗೀತಾ ಅವರ ವಿಚ್ಚೇದನ-ಪ್ರೇಮ ಮತ್ತು ಅಂತೆ ಕಂತೆ ಸದ್ಯದ ಉದಾಹರಣೆ.

ಹೌದು, ಅಸಲಿಗೆ ಈ ಸಮಯದಲ್ಲಿ ವಿಜಯ್ ರಾಜಕೀಯ ನಡೆ ಮತ್ತು ನುಡಿಯ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ, ವಿಜಯ್ ಮತ್ತು ತ್ರಿಶಾ ಸಂಬಂಧದ ಕುರಿತು ಚರ್ಚೆಯಾಗುತ್ತಿದೆ.
ಕೇವಲ ಜನಸಾಮಾನ್ಯರು ಮಾತ್ರವಲ್ಲ ಚಿತ್ರರಂಗದವರೇ ಈ ಚರ್ಚೆಯಲ್ಲಿ ಭಾಗವಹಿಸುತ್ತಿದ್ದಾರೆ. ಮನಸೋಇಚ್ಚೆ ಮಾತನಾಡುತ್ತಿದ್ದಾರೆ. ಬಹುಶಃ ತ್ರಿಶಾ ಜಾಗದಲ್ಲಿ ಬೇರೆ ಯಾರೇ ಇದ್ದರೂ ಕೂಡ ತಮ್ಮ ಮೇಲಾಗುತ್ತಿರುವ ಈ ಸೈಬರ್ ದಾಳಿಯಿಂದ ನಲುಗುತ್ತಿದ್ದರೇನೋ.. ಮೌನಕ್ಕೆ ಶರಣಾಗುತ್ತಿದ್ದರೇನೋ.. ಆದರೆ ತ್ರಿಶಾ ಮಾತ್ರ ಸದ್ಯ ತಿರುಗೇಟು ನೀಡಿದ್ದಾರೆ. ಪಾರ್ತಿಬನ್ ಹೆಸರೇಳದೇ ಕೆಂಡ ಕಾರಿದ್ದಾರೆ.
ಹೌದು,ನಿಮಗೆ ಗೊತ್ತಿರಲಿ. ಕನ್ನಡದಲ್ಲಿ ''ದಾದಾ ಇಸ್ ಬ್ಯಾಕ್'' ಎಂಬ ಸಿನಿಮಾ
2017ರ ಆಸು ಪಾಸು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ತಮಿಳಿನ ನಟ ಮತ್ತು ನಿರ್ದೇಶಕ ಪಾರ್ತಿಬನ್ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಇಂಥಾ ಪಾರ್ತಿಬನ್ ಎರಡು ಪ್ರತ್ಯೇಕ ವೇದಿಕೆಯಲ್ಲಿ ತ್ರಿಶಾ ಕುರಿತು ಮಾತನಾಡಿದ್ದರು. ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಾ ಈ ಕುಂದವೈನ ( ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ತ್ರಿಶಾ ಪಾತ್ರದ ಹೆಸರು ) ಕೆಲ ದಿನ ಮನೆಯಲ್ಲಿ ಕೂಡಿ ಹಾಕಬೇಕು. ಅದೇ ಒಳ್ಳೆಯದು. ಮನೆಯಿಂದ ಹೊರಗೆ ಬರಲು ಬಿಡಬಾರದು ಎಂದು ವ್ಯಂಗ್ಯವಾಡಿದ್ದರು. ಇದೀಗ ಪಾರ್ಥಿಬನ್ ಗೆ ತ್ರಿಶಾ ತಿರುಗೇಟು ನೀಡಿದ್ದರು.

ಪಾರ್ತಿಬನ್ ನೀಡಿದ ಈ ಹೇಳಿಕೆಯಿಂದ ಇಂದು ( ಮಾರ್ಚ್ 8) ಸೋಶಿಯಲ್ ಮೀಡಿಯಾದಲ್ಲಿ ಅಲ್ಲೋಲ ಕಲ್ಲೋಲವಾಗಿತ್ತು. ಹಲವರು ಈ ವಿಚಾರದ ಕುರಿತು ಚರ್ಚೆ ಮಾಡುತ್ತಿದ್ದರು. ನಡೆಯುತ್ತಿರುವ ಈ ಚರ್ಚೆ ಸದ್ಯ ತ್ರಿಶಾ ಅವರ ಗಮನಕ್ಕೆ ಕೂಡ ಬಂದಿದ್ದು ಪಾರ್ತಿಬನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೆಸರೇಳದೇ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ತ್ರಿಶಾ ''ಮೂರ್ಖತನದ ಪರಮಾವಧಿ'' ಎಂದು ಹೇಳಿದ್ದಾರೆ. ನೇರವಾಗಿ ಹೆಸರಿಸದೆ ಖಂಡಿಸಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದ ಆಯೋಜಕರಿಂದ ನನಗೆ ಮಾಹಿತಿ ಸಿಕ್ಕಿದ್ದು, ಆ ವ್ಯಕ್ತಿಯ ಸಹಾಯಕನ ಕೋರಿಕೆಯಂತೆ ಕೊನೆಯ ಕ್ಷಣದಲ್ಲಿ ನನ್ನ ಹೆಸರು ಮತ್ತು ನನ್ನ ಫೋಟೋವನ್ನು ಕಾರ್ಯಕ್ರಮದಲ್ಲಿ ಸೇರಿಸಲಾಗಿದೆ ಎಂದು ಕಿಡಿ ಕಾರಿದ್ದಾರೆ.ಕಾಮೆಂಟ್ ಬುದ್ಧಿವಂತಿಕೆಯಿಂದ ಮಾಡುವುದಿಲ್ಲ, ಅದು ಹಾಸ್ಯಮಯವೂ ಆಗಿರುವುದಿಲ್ಲ. ಅದು ಕೇವಲ ಮೂರ್ಖತನದ ಪರಮಾವಧಿಯಷ್ಟೇ ಎಂದು ಹೇಳಿದ್ದಾರೆ.
ಸದ್ಯ ತ್ರಿಶಾ ಅವರ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಸದ್ದು ಮಾಡುತ್ತಿದ್ದು, #StandWithTrisha ಎಂಬ ಹ್ಯಾಶ್‌ಟ್ಯಾಗ್‌ನಡಿ ಹಲವರು ತ್ರಿಶಾಗೆ ಬೆಂಬಲ ಸೂಚಿಸುತ್ತಿದ್ದಾರೆ. ಪಾರ್ತಿಬನ್ ಮುಂಬರುವ ದಿನಗಳಲ್ಲಿ ತ್ರಿಶಾ ಅವರ ಈ ಟ್ವೀಟ್ ಗೆ ಪ್ರತ್ಯುತ್ತರ ನೀಡುತ್ತಾರಾ ..? ಅಥವಾ ಮೌನಕ್ಕೆ ಶರಣಾಗುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ. ವಿಜಯ್ ಮತ್ತು ಸಂಗೀತಾ ಅವರ ಈ ವಿಚ್ಚೇದನ ಪ್ರಕರಣ ಮುಂದೆ ಯಾವ ತಿರುವು ಪಡೆಯುತ್ತೆ..? ವಿಜಯ್ ರಾಜಕೀಯದ ಭವಿಷ್ಯಕ್ಕೆ ಈ ವಿವಾದದಿಂದ ಹಿನ್ನೆಡೆಯಾಗುತ್ತಾ..? ಎನ್ನುವುದನ್ನು ಕೂಡ ನೋಡಬೇಕಿದೆ.


Click it and Unblock the Notifications











