"ಧನುಷ್- ಐಶ್ವರ್ಯ ಇಬ್ಬರೂ ಬೇರೆಯವರೊಟ್ಟಿಗೆ ಡೇಟಿಂಗ್ ಮಾಡುತ್ತಿದ್ದಾರೆ"; ಸುಚಿತ್ರಾ ಬಾಂಬ್

ತಮಿಳು ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. 18 ವರ್ಷಗಳ ಕಾಲ ಒಟ್ಟಿಗೆ ಜೀವನ ಸಾಗಿಸಿದ ದಂಪತಿ ದೂರಾಗುತ್ತಿದ್ದಾರೆ ಎನ್ನುವ ವಿಚಾರ ಅಭಿಮಾನಿಗಳಿಗೆ ಬೇಸರ ತಂದಿದೆ. ಇನ್ನು ಇಬ್ಬರ ನಿರ್ಧಾರಕ್ಕೆ ಕಾರಣ ಏನು ಎನ್ನುವ ಪ್ರಶ್ನೆಯೂ ಎದ್ದಿದೆ.

ಧನುಷ್- ಐಶ್ವರ್ಯ ಡಿವೋರ್ಸ್ ಸಂಬಂಧ ಗಾಯಕಿ ಸುಚಿತ್ರಾ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಸುಚೀ ಲೀಕ್ಸ್ ವಿಚಾರದಲ್ಲಿ ಗಾಯಕಿ ಸುಚಿತ್ರಾ ಹೆಸರು ಜೋರಾಗಿ ಕೇಳಿಬಂದಿತ್ತು. ಸುಚಿಲೀಕ್ಸ್ ಹೆಸರಿನಲ್ಲಿ ಕೆಲ ವರ್ಷಗಳ ಹಿಂದೆ ನಟ ಧನುಷ್, ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದರ್, ಆಂಡ್ರಿಯಾ, ಸಂಚಿತಾ ಶೆಟ್ಟಿ ಸೇರಿದಂತೆ ಹಲವು ತಾರೆಗಳ ಖಾಸಗಿ ವಿಡಿಯೋ, ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

Suchi leaks Singer Suchitra shocking comments on dhanush and aishwarya divorce

ಗಾಯಕಿ ಸುಚಿತ್ರಾ ಈ ಲೀಕ್ಸ್ ಹಿಂದೆ ಇದ್ದಾರೆ ಎಂದು ಹೇಳಲಾಗಿತ್ತು. ಮಾನಸಿಕವಾಗಿ ದುರ್ಬಲವಾಗಿ ಆಕೆ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಬಳಿಕ ಆಕೆ ಅದನ್ನು ಅಲ್ಲಗಳೆದಿದ್ದರು. ಇದೀಗ ಧನುಷ್ ಹಾಗೂ ಐಶ್ವರ್ಯ ಡಿವೋರ್ಸ್ ಬಗ್ಗೆ ತಮಿಳು ಸಂದರ್ಶನವೊಂದರಲ್ಲಿ ಆಕೆ ಮಾತನಾಡಿದ್ದಾರೆ. ಧನುಷ್ ಒಳ್ಳೆ ತಂದೆ, ಆದರೆ ಐಶ್ವರ್ಯ ರಜನಿಕಾಂತ್ ಒಳ್ಳೆ ತಾಯಿ ಅಲ್ಲ ಎಂದು ಸುಚಿತ್ರಾ ಹೇಳಿದ್ದಾರೆ.

"ಐಶ್ವರ್ಯ ರಜನಿಕಾಂತ್ ಜೀವನದಲ್ಲಿ ಏನು ಸಾಧಿಸಿದ್ದಾರೆ. ಜನರ ಸಿಂಪಥಿ ಎಲ್ಲಾ ಧನುಷ್ ಪರವಾಗಿಯೇ ಇದೆ. ಯಾಕಂದರೆ ಐಶ್ವರ್ಯ ಒಳ್ಳೆ ತಾಯಿ ಅಲ್ಲ, ಆದರೆ ಧನುಷ್ ಒಳ್ಳೆಯ ತಂದೆ. ಆಕೆ ತಾಯಿಯಾಗಿ ಏನು ಮಾಡಿದ್ದಾರೆ. ತನ್ನನ್ನು ತಾನು ಪ್ರಚಾರ ಮಾಡಿಕೊಂಡಿದ್ದಾರೆ. ಆಕೆ ಒಳ್ಳೆ ತಾಯಿ ಅಲ್ಲ ಎಂದು ಧನುಷ್ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಅದು ನಮಗೆ ಗೊತ್ತು" ಎಂದು ಸುಚಿತ್ರಾ ಹೇಳಿದ್ದಾರೆ.

"ಧನುಷ್‌ ಕಂಡ್ರೆ ನನಗೆ ಆಗಲ್ಲ. ಆದರೆ ಅವರ ದಾಂಪತ್ಯ ಜೀವನದಲ್ಲಿ ಆತನೇ ಸರಿ. ಧನುಷ್‌ ಕಂಡ್ರೆ ನನಗೂ ಕೋಪ ಇದೆ. ಆದರೆ ಅದನ್ನು ಬೇರೆ ರೀತಿ ತೀರಿಸಿಕೊಳ್ಳುತ್ತೇನೆ. ಮಕ್ಕಳ ವಿಚಾರದಲ್ಲಿ ಮಾತ್ರ ಆತನೇ ಬೆಸ್ಟ್. ನನಗೆ ರೀಲ್ಸ್ ಹಾಕುವ ತಾಯಂದಿರನ್ನು ಕಂಡ್ರೆ ಆಗಲ್ಲ" ಎಂದಿದ್ದಾರೆ.

"ಧನುಷ್ ಮೋಸ ಮಾಡುತ್ತಿದ್ದಾನೆ ಎಂದು ಐಶ್ವರ್ಯ ಹೇಳುತ್ತಿದ್ದಾರೆ. ಆದರೆ ಅದನ್ನೇ ಆಕೆ ಕೂಡ ಮದುವೆ ಬಳಿಕ ಮಾಡುತ್ತಾ ಬರುತ್ತಿದ್ದಾಳೆ. ಐಶ್ವರ್ಯಗೆ ಧನುಷ್, ಅದೇ ರೀತಿ ಧನುಷ್‌ಗೆ ಐಶ್ವರ್ಯ ಮೋಸ ಮಾಡಿದ್ದಾರೆ. ಇಬ್ಬರೂ ಕ್ರಮಬದ್ಧವಾಗಿ ಒಬ್ಬರಿಗೊಬ್ಬರು ಮೋಸ ಮಾಡಿಕೊಂಡಿದ್ದಾರೆ"

Suchi leaks Singer Suchitra shocking comments on dhanush and aishwarya divorce

"ಇಬ್ಬರು ತಾವು ಡೇಟಿಂಗ್ ಮಾಡುವವರ ಜೊತೆ ಪಾರ್ಟಿ, ಪಬ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಡ್ರಿಂಕ್ಸ್ ಮಾಡಿದ್ದಾರೆ. ವೈವಾಹಿಕ ಜೀವನ ನಡೆಸುವುದು ಬೇರೆಯವರೊಟ್ಟಿಗೆ ಡೇಟ್ ಹೋಗುವುದು ಎಷ್ಟು ಸರಿ? ಆಳವಾದ ಸಮುದ್ರ ಹಾಗೂ ದೆವ್ವ ಇಬ್ಬರಲ್ಲಿ ದೆವ್ವನೇ ಉತ್ತಮ ಅಂದ್ರೆ, ಧನುಷ್ ವಾಸಿ" ಎಂದು ಸುಚಿತ್ರಾ ಹೇಳಿರುವುದು ವೈರಲ್ ಆಗ್ತಿದೆ.

ಧನುಷ್ ಹಾಗೂ ಐಶ್ವರ್ಯ ಒಂದೂವರೆ ವರ್ಷದ ಹಿಂದೆ ಡಿವೋರ್ಸ್‌ಗೆ ಮುಂದಾಗಿರುವ ವಿಚಾರವನ್ನು ಘೋಷಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. ಬಳಿಕ ಬೇರೆ ಬೇರೆ ಮನೆಗಳಲ್ಲಿ ಇಬ್ಬರೂ ವಾಸಿಸುತ್ತಿದ್ದು ಇತ್ತೀಚೆಗೆ ಡಿವೋರ್ಸ್ ಕೋರಿ ಚೆನ್ನೈ ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಟ ರಜನಿಕಾಂತ್ ಎಷ್ಟೇ ಪ್ರಯತ್ನಿಸಿದ್ದರೂ ಇಬ್ಬರೂ ದೂರಾಗುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎನ್ನಲಾಗಿತ್ತು.

ಡಿವೋರ್ಸ್ ಅರ್ಜಿ ವಿಚಾರಣೆ ನಡೆದು ಕೋರ್ಟ್ ಮುಂದಿನ ವಿಚಾರಣೆಗೆ ಧನುಷ್ ಹಾಗೂ ಐಶ್ವರ್ಯ ಇಬ್ಬರೂ ಹಾಜರಾಗಬೇಕು ಎಂದು ತಿಳಿಸಿದೆ. ಶೀಘ್ರದಲ್ಲೇ ಅಧಿಕೃತವಾಗಿ ದಂಪತಿ ಡಿವೋರ್ಸ್ ಪಡೆದು ದೂರಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಮಗನ ಶಾಲಾ ಕಾರ್ಯಕ್ರಮವೊಂದರಲ್ಲಿ ಧನುಷ್ ಹಾಗೂ ಐಶ್ವರ್ಯ ಇಬ್ಬರೂ ಭಾಗಿ ಆಗಿದ್ದರು.

More from Filmibeat

English summary
Singer Suchitra Says Dhanush and aishwarya Rajinikanth cheated each other
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X