For Quick Alerts
  ALLOW NOTIFICATIONS  
  For Daily Alerts

  ಗಿರಕಿ ಹೊಡೆದ 'ಆ' ಸುದ್ದಿ ಸುಳ್ಳು ಎಂದ ಕಿಚ್ಚ ಸುದೀಪ್.!

  |
  ಗಾಳಿ ಸುದ್ದಿಗೆ ಬ್ರೇಕ್ ಹಾಕಿದ ಕಿಚ್ಚ ಸುದೀಪ್ | FILMIBEAT KANNADA

  ಯಾವುದೇ ಪಾತ್ರ ಆದರೂ ಅದನ್ನ ನೀರು ಕುಡಿದಷ್ಟೇ ಸಲೀಸಾಗಿ ನಿಭಾಯಿಸುವುದರಲ್ಲಿ ಕಿಚ್ಚ ಸುದೀಪ್ ಎತ್ತಿದ ಕೈ. ಅಷ್ಟಿಲ್ದೇ ಅವರನ್ನ 'ಅಭಿನಯ ಚಕ್ರವರ್ತಿ' ಅಂತ ಕರೆಯುತ್ತಾರಾ ಹೇಳಿ.?!

  'ಈಗ' ಸೇರಿದಂತೆ ಪರಭಾಷೆಯ ಹಲವು ಸಿನಿಮಾಗಳಲ್ಲಿ ಕಿಚ್ಚ ಸುದೀಪ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ತೆರೆಗೆ ಬಂದ 'ದಬಾಂಗ್-3' ಚಿತ್ರದಲ್ಲೂ ಸುದೀಪ್ ನೆಗೆಟಿವ್ ರೋಲ್ ನಲ್ಲಿ ಮಿಂಚಿದ್ದರು. ಇದರ ಬೆನ್ನಲ್ಲೇ ತಮಿಳು ಚಿತ್ರವೊಂದರಲ್ಲೂ ಸುದೀಪ್ 'ಕೇಡಿ'ಯಾಗಲಿದ್ದಾರೆ ಎಂಬ ಗುಸುಗುಸು ಎಲ್ಲೆಡೆ ಗಿರಕಿ ಹೊಡೆದಿತ್ತು.

  ಕಾಲಿವುಡ್ ನಟ ಸಿಲಂಬರಸನ್ ಅಭಿನಯದ 'ಮಾನಾಡು' ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ಆಕ್ಟ್ ಮಾಡ್ತಾರಂತೆ. ಚಿತ್ರದ ನಿರ್ದೇಶಕರು ಈಗಾಗಲೇ ಸುದೀಪ್ ರನ್ನ ಭೇಟಿ ಮಾಡಿ, ಕಥೆ ಹೇಳಿದ್ದಾರಂತೆ. ಪಾತ್ರವನ್ನ ಮೆಚ್ಚಿರುವ ಸುದೀಪ್ ಆಫರ್ ನ ಒಪ್ಪಿಕೊಂಡಿದ್ದಾರಂತೆ ಎಂಬ ಅಂತೆ-ಕಂತೆ ರೆಕ್ಕೆ ಪುಕ್ಕ ಕಟ್ಟಿಕೊಂಡು ಎಲ್ಲಾ ಕಡೆ ಹರಿದಾಡಿತ್ತು.

  ಸ್ಪೆಷಲ್ ಗಿಫ್ಟ್ ಕೊಟ್ಟ ಸಲ್ಮಾನ್ ಪ್ರೀತಿಗೆ ಮನಸಾರೆ ಧನ್ಯವಾದ ತಿಳಿಸಿದ ಸುದೀಪ್ಸ್ಪೆಷಲ್ ಗಿಫ್ಟ್ ಕೊಟ್ಟ ಸಲ್ಮಾನ್ ಪ್ರೀತಿಗೆ ಮನಸಾರೆ ಧನ್ಯವಾದ ತಿಳಿಸಿದ ಸುದೀಪ್

  ಈ ಗಾಳಿ ಸುದ್ದಿ ಕಿಚ್ಚ ಸುದೀಪ್ ಕಿವಿಗೂ ಬಿದ್ದ ಮೇಲೆ ಸ್ಪಷ್ಟನೆ ಕೊಟ್ಟಿದ್ದಾರೆ. 'ಮಾನಾಡು' ಚಿತ್ರದಲ್ಲಿ ವಿಲನ್ ಆಗಿ ನಟಿಸಲು ಒಪ್ಪಿಕೊಂಡಿರುವ ಸುದ್ದಿ ಸುಳ್ಳು ಎಂದು ಸುದೀಪ್ ಟ್ವಿಟ್ಟರ್ ನಲ್ಲಿ ಸ್ಪಷ್ಟ ಪಡಿಸಿದ್ದಾರೆ.

  ಅಂದ್ಹಾಗೆ, 'ಕೋಟಿಗೊಬ್ಬ-3' ಮತ್ತು 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸದ್ಯ ಸುದೀಪ್ ಬಿಜಿಯಾಗಿದ್ದಾರೆ. ಈ ಎರಡು ಪ್ರಾಜೆಕ್ಟ್ ಕಂಪ್ಲೀಟ್ ಆದ್ಮೇಲೆ ಸುದೀಪ್ ಡೈರೆಕ್ಟರ್ ಕ್ಯಾಪ್ ತೊಡುವ ಸಾಧ್ಯತೆ ಇದೆ.

  English summary
  Kannada Actor Kiccha Sudeep denies playing Villain in Tamil Movie Maanaadu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X