ಸೂರ್ಯ 43ನೇ ಸಿನಿಮಾ ಸುಧಾ ಕೊಂಗರ ಆಕ್ಷನ್ ಕಟ್: ಮತ್ತೆ ಒಂದಾಯ್ತು 'ಸೂರರೈ ಪೋಟ್ರು' ಟೀಮ್
ಸೂರ್ಯ ವೃತ್ತಿ ಬದುಕಿಗೆ ಹೊಸ ಇಮೇಕ್ ಕೊಟ್ಟ ಸಿನಿಮಾ 'ಸೂರರೈ ಪೋಟ್ರು'. ಈ ಸಿನಿಮಾಗೆ ಕ್ರಿಟಿಕ್ಸ್ ಅಷ್ಟೇ ಅಲ್ಲ. ಬಾಕ್ಸಾಫೀಸ್‌ನಲ್ಲೂ ಒಂದೊಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಅದೇ ತಂಡದಿಂದ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ.
ತಮಿಳಿನ ಖ್ಯಾತ ನಟ ಸೂರ್ಯ ಹಾಗೂ 'ಸೂರರೈ ಪೋಟ್ರು' ನಿರ್ದೇಶಕಿ ಸುಧಾ ಕೊಂಗರ ಮತ್ತೊಮ್ಮೆ ಒಂದಾಗಿದ್ದಾರೆ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧಾರಿತ ಸಿನಿಮಾ 'ಸೂರರೈ ಪೋಟ್ರು' ತೆರೆಗೆ ತಂದ ಬಳಿಕ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದಾರೆ.

'ಸೂರರೈ ಪೋಟ್ರು' ಮೂಲಕ ಸಂಚಲನ ಸೃಷ್ಟಿಸಿದ್ದ ಈ ಜೋಡಿ ಮಗದೊಮ್ಮೆ ಒಂದಾಗಿದ್ದಾರೆ. ಸೂರ್ಯ ನಟಿಸಲಿರುವ 43ನೇ ಸಿನಿಮಾಗೆ ಸುಧಾ ಕೊಂಗರ ಅವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ಸೂರರೈ ಪೋಟ್ರು' ಸಿನಿಮಾ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆಸ್ಕರ್ ರೇಸ್‌ಗೂ ಇಳಿದಿದ್ದ ಈ ಸಿನಿಮಾ ಹಲವು ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಯನ್ನೂ ಗೆದ್ದಿತ್ತು. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಈ ತಂಡ ಹೊಸ ಪ್ರಾಜೆಕ್ಟ್ ಗೆ ಕೈ ಹಾಕಿದೆ.
'ಸೂರರೈ ಪೋಟ್ರು' ಮೂಲಕ ಸದ್ದು ಮಾಡಿದ್ದ ಸೂರ್ಯ ಹಾಗೂ ಸುಧಾ ಕೊಂಗರ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಮಾಲಿವುಡ್ ಹ್ಯಾಂಡ್ಸಮ್ ಹಂಕ್ ದುಲ್ಕರ್ ಸಲ್ಮಾನ್, ನಜ್ರಿಯಾ ಫಹಾದ್ ಹಾಗೂ ವಿಜಯ್ ವರ್ಮಾ 'ಸೂರ್ಯ 43' ಸಿನಿಮಾದಲ್ಲಿ ಇರುತ್ತಾರೆ.
ಸದ್ಯಕ್ಕೆ #Suriya43 ಎಂದು ಟೈಟಲ್ ಇಡಲಾಗಿದೆ. ಸೂರ್ಯ ಒಡೆತನದ 2D ಎಂಟರ್‌ಟೈನ್‌ಮೆಂಟ್ ನಡಿ ಜ್ಯೋತಿಕಾ, ಸೂರ್ಯ ಮತ್ತು ರಾಜಶೇಖರ್ ಕರ್ಪೂರ ಸುಂದರ ಪಾಂಡಿಯನ್ ಈ ಸಿನಿಮಾವನ್ನು ನಿರ್ಮಿಸಲಿದ್ದಾರೆ. ಜಿವಿ ಪ್ರಕಾಶ್ ಸಂಗೀತ ನೀಡುತ್ತಿದ್ದಾರೆ. ಇದು ಅವರ 100 ಚಿತ್ರ ಇದಾಗಿರೋದು ಮತ್ತೊಂದು ವಿಶೇಷ. 'ಸೂರರೈ ಪೋಟ್ರು' ಜನರ ಮನಸ್ಸು ಗೆದ್ದಿದ್ದ ಸೂರ್ಯ, ಸುಧಾ ಹಾಗೂ ಜಿವಿ ಪ್ರಕಾಶ್ ಹೊಸ ಪ್ರಾಜೆಕ್ಟ್ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.


Click it and Unblock the Notifications











