twitter
    For Quick Alerts
    ALLOW NOTIFICATIONS  
    For Daily Alerts

    ಲಾಕ್‌ಡೌನ್‌ನಲ್ಲಿಯೇ ಕಿರುಚಿತ್ರ ನಿರ್ದೇಶಿಸಿದ ಸುಹಾಸಿನಿ ಮಣಿರತ್ನಂ

    |

    ನಟಿ, ನಿರ್ದೇಶಕಿ ಸುಹಾಸಿನಿ ಮಣಿರತ್ನಂ ಲಾಕ್ ಡೌನ್ ಅವಧಿಯಲ್ಲಿಯೇ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ಸುಹಾಸಿನಿ, ಕೊರೊನಾ ವೈರಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದರು. ವಿದೇಶದಿಂದ ಬಂದ ಮಗ ನಂದನ್ ಸ್ವಯಂ ದಿಗ್ಬಂಧನಕ್ಕೆ ಒಳಗಾದ ಇತ್ತೀಚಿನ ವಿಡಿಯೋ ವೈರಲ್ ಆಗಿತ್ತು.

    Recommended Video

    ಲಾಕ್ ಡೌನ್ ಟೈಂನಲ್ಲಿ ರಿಯಲ್ ಸಿನಿಮಾ ಮಾಡಲು ಹೊರಟಿದ್ದಾರೆ ಉಪೇಂದ್ರ | Upendra | Oneindia Kannada

    ಈ ಎಲ್ಲ ಚಟುವಟಿಕೆಗಳ ನಡುವೆಯೇ ಲಾಕ್ ಡೌನ್ ಸಮಯವನ್ನು ಅವರು ಕಿರುಚಿತ್ರ ನಿರ್ದೇಶನಕ್ಕೆ ಬಳಸಿಕೊಂಡಿದ್ದಾರೆ. 20 ನಿಮಿಷಗಳ ಈ ಕಿರುಚಿತ್ರದ ಹೆಸರು 'ಚಿನ್ನಂಜಿರು ಕಿಲಿಯೆ'. ಈ ಕಿರುಚಿತ್ರವನ್ನು ಅವರು ಸಂಪೂರ್ಣವಾಗಿ ಒಳಾಂಗಣದಲ್ಲಿಯೇ ಚಿತ್ರೀಕರಿಸಿದ್ದಾರಂತೆ.

     Suhasini Mani Ratnam Directs Short Film During Lockdown

    ಚಿತ್ರದ ಶೀರ್ಷಿಕೆಯ ಲುಕ್‌ಅನ್ನು ಇನ್‌ಸ್ಟಾಗ್ರಾಂನಲ್ಲಿ ಸುಹಾಸಿನಿ ಹಂಚಿಕೊಂಡಿದ್ದಾರೆ. 'ನನ್ನ ಲಾಕ್ ಡೌನ್ ಕಥೆಗಳು. ಮೊದಲ ಕಥೆ 20 ನಿಮಿಷಗಳ ಶಾರ್ಟ್ ಫಿಲಂ ಮುಂದೆ ಬರಲಿದೆ. ಅದರ ಮೊದಲ ಔಟ್‌ಪುಟ್ ಇಂದು ಸಿಕ್ಕಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಕಿರುಚಿತ್ರವನ್ನು ನೀವು ನೋಡಬಹುದು' ಎಂದು ಅವರು ತಿಳಿಸಿದ್ದಾರೆ.

    ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ನಟಿ ಅಹಾನಾ ಕೃಷ್ಣ ಈ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐಫೋನ್ ಬಳಸಿ ತಮ್ಮ ತಮ್ಮ ಮನೆಗಳಲ್ಲಿಯೇ ಸಂಪೂರ್ಣ ಕಿರುಚಿತ್ರ ಚಿತ್ರೀಕರಿಸಲಾಗಿದೆ. ಜೇಮ್ಸ್ ವಸಂತನ್ ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

    English summary
    Actress Suhasini Mani Ratnam has revealed that she has directed a short film Chinnanjiru Kiliye during the lockdown time.
    Friday, May 8, 2020, 20:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X