For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್ ಪರ ಪ್ರಚಾರ: ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಸುಹಾಸಿನಿ-ಅಕ್ಷರಾ

  |

  ತಮಿಳುನಾಡಿನಲ್ಲಿ ಚುನಾವಣೆ ದಿನದಿಂದ ದಿನಕ್ಕೆ ರಂಗೇರಿದೆ. ಎಂಎನ್‌ಎಂ (ಮಕ್ಕಳ್ ನೀದಿ ಮಯಮ್) ಪಕ್ಷದಿಂದ ನಟ ಕಮಲ್ ಹಾಸನ್ ಸ್ಪರ್ಧೆ ಮಾಡಿದ್ದಾರೆ. ಕಮಲ್ ಹಾಸನ್ ಪರವಾಗಿ ಅವರ ಮಗಳು ಅಕ್ಷರಾ ಹಾಸನ್ ಮತ್ತು ಅಣ್ಣನ ಮಗಳಾದ ನಟಿ ಸುಹಾಸಿನಿ ಪ್ರಚಾರ ಕೈಗೊಂಡಿದ್ದಾರೆ.

  ಕಮಲ್ ಹಾಸನ್ ಗೋಸ್ಕರ ರಸ್ತೆಗಿಳಿದ ನಟಿ ಸುಹಾಸಿನಿ | Filmibeat Kannada

  ಭಾನುವಾರ ಬೆಳಗ್ಗೆಯಿಂದ ಪ್ರಚಾರ ಆರಂಭಿಸಿರುವ ಅಕ್ಷರಾ ಮತ್ತು ಸುಹಾಸಿನಿ ಮಾರ್ಗ ಮಧ್ಯೆ ಡ್ಯಾನ್ಸ್ ಮಾಡಿರುವ ಘಟನೆ ನಡೆದಿದೆ. ರಸ್ತೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಸುಹಾಸಿನಿ ಮತ್ತು ಅಕ್ಷರಾ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ತಮಿಳುನಾಡಿನ 'ಹೃದಯದಿಂದ' ಸ್ಪರ್ಧಿಸಲಿದ್ದಾರೆ ಕಮಲ್ ಹಾಸನ್ತಮಿಳುನಾಡಿನ 'ಹೃದಯದಿಂದ' ಸ್ಪರ್ಧಿಸಲಿದ್ದಾರೆ ಕಮಲ್ ಹಾಸನ್

  ಕಮಲ್ ಹಾಸನ್ ಅವರು ದಕ್ಷಿಣ ಕೊಯಮತ್ತೂರಿನ ವಿಧಾನ ಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಚಾರ ಮಾಡುವ ವೇಳೆ ಸುಹಾಸಿನಿ ಮತ್ತು ಅಕ್ಷರಾ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ.

  ಕಳೆದ ಹಲವು ದಿನಗಳಿಂದ ಕಮಲ್ ಹಾಸನ್ ಜೊತೆ ಮಗಳು ಅಕ್ಷರಾ ಹಾಸನ್ ಪ್ರಚಾರ ಮಾಡುತ್ತಿದ್ದಾರೆ. ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಕಮಲ್ ಹಾಸನ್ ಸಂಬಂಧಿ ಸುಹಾಸಿನಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

  ಎಂಎನ್‌ಎಂ ಪಕ್ಷ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸುಹಾಸಿನಿ ಹೆಸರು ಇತ್ತು. ಈ ನಿಟ್ಟಿನಲ್ಲಿ ಕಮಲ್ ಪರ ಪ್ರಚಾರಕ್ಕೆ ಧುಮುಕಿರುವ ನಟಿ ಬ್ಯಾಟರಿ ಗುರುತಿಗೆ ತಮ್ಮ ಅಮೂಲ್ಯವಾದ ಮತ ಹಾಕಿ ಎಂದು ಮತಯಾಚನೆ ಮಾಡಿದರು.

  ಏಪ್ರಿಲ್ 6 ರಂದು ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ. ಸ್ವಂತ ಪಕ್ಷ ಸ್ಥಾಪಿಸಿರುವ ಕಮಲ್ ಹಾಸನ್ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ. ತಾವು ಕೂಡ ಸ್ಪರ್ಧೆ ಮಾಡಿದ್ದು, ಈ ಬಾರಿ ಚುನಾವಣೆ ಭಾರಿ ನಿರೀಕ್ಷೆ ಕುತೂಹಲ ಮೂಡಿಸಿದೆ.

  English summary
  Actresses Suhasini Maniratnam and Akshara Haasan campaigned for MNM founder Actor Kamal Haasan in Coimbatore South constituency on Sunday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X