ವೇದಿಕೆ ಮೇಲೆ ಕಮಲ್ ಹಾಸನ್ ಕಾಲಿಗೆ ಬಿದ್ದು ನಮಸ್ಕರಿಸಿದ ನಟಿ ಸುಹಾಸಿನಿ

ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ನವೆಂಬರ್ 7 ರಂದು ತಮ್ಮ 65ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಕಮಲ್ ಬರ್ತಡೇ ಪ್ರಯುಕ್ತ ಕುಟುಂಬ ಸದಸ್ಯರೆಲ್ಲರೂ ಒಟ್ಟಿಗೆ ಸೇರಿ ಕಾರ್ಯಕ್ರಮವೊಂದನ್ನ ಆಯೋಜಿಸಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ನಟಿ ಸುಹಾಸಿನಿ ಸಾರ್ವಜನಿಕವಾಗಿ ಕಮಲ್ ಹಾಸನ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.

ಕಾಲಿಗೆ ಬಿದ್ದು ನಮಸ್ಕರಿಸಿದ ಸುಹಾಸಿನಿ, ನಂತರ ಕೆನ್ನೆಗೆ ಮುತ್ತು ಕೊಟ್ಟು ಭಾವುಕರಾದರು. ಈ ದೃಶ್ಯ ಕೆಲವರಿಗೆ ಅಚ್ಚರಿ ತಂದರೆ, ಇನ್ನು ಕೆಲವರಿಗೆ ಸುಹಾಸಿನಿ ಯಾಕೆ ಕಮಲ್ ಹಾಸನ್ ಕಾಲಿಗೆ ಬಿದ್ದರು ಎಂಬ ಪ್ರಶ್ನೆಯೂ ಕಾಡಿದೆ. ಕಾರಣ ತಿಳಿಯಲು ಮುಂದೆ ಓದಿ...

ಕಮಲ್ ಹಾಸನ್ ಚಿಕ್ಕಪ್ಪ

ಕಮಲ್ ಹಾಸನ್ ಚಿಕ್ಕಪ್ಪ

ಅದೇಷ್ಟೊ ಜನಕ್ಕೆ ಗೊತ್ತೊ ಗೊತ್ತಿಲ್ವೊ, ಹಿರಿಯ ನಟಿ ಸುಹಾಸಿನಿ ಅವರು ಕಮಲ್ ಹಾಸನ್ ಅವರ ಕುಟುಂಬ ಸದಸ್ಯೆ. ಕಮಲ್ ಹಾಸನ್ ಅವರ ಅಣ್ಣ ಚಾರುಹಾಸನ್ ಅವರ ಎರಡನೇ ಮಗಳು ಸುಹಾಸಿನಿ. ಸಂಬಂಧದಲ್ಲಿ ಸುಹಾಸಿನಿ ಅವರಿಗೆ ಕಮಲ್ ಹಾಸನ್ ಚಿಕ್ಕಪ್ಪ ಆಗಬೇಕು.

ನನಗೆ ಜೀವನ ಕೊಟ್ಟಿದ್ದು ಕಮಲ್

ನನಗೆ ಜೀವನ ಕೊಟ್ಟಿದ್ದು ಕಮಲ್

''ನನ್ನ ಜೀವನದಲ್ಲಿ ನಡೆದ ಎಲ್ಲ ಒಳ್ಳೆಯ ವಿಷಯಗಳಿಗೆ ಕಮಲ್ ಹಾಸನ್ ಅವರೇ ಕಾರಣ. ನೀವು ಇಲ್ಲದೇ ಸಿನಿಮಾ ಇಂಡಸ್ಟ್ರಿಯಲ್ಲಿ ನಾನು ಇಲ್ಲ. ಹೆಣ್ಣು ಮಕ್ಕಳು ಬರಿ ನಟನೆ ಕಡೆ ಮಾತ್ರ ಹೋಗಬಾರದು, ತಾಂತ್ರಿಕವಾಗಿ ತಿಳಿಯಬೇಕು ಎಂಬ ಉದ್ದೇಶದಿಂದ ಫಿಲಂ ಇನ್ಸ್ಟಿಟ್ಯೂಟ್ ಗೆ ಸೇರಿಸಿ, ಫೀಸ್ ಕಟ್ಟಿದ್ದು ಕಮಲ್ ಹಾಸನ್'' ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಮಣಿರತ್ನಂ ಅವರನ್ನು ಕೊಟ್ಟಿದ್ದು ಅವರೇ

ಮಣಿರತ್ನಂ ಅವರನ್ನು ಕೊಟ್ಟಿದ್ದು ಅವರೇ

''ನನ್ನ ಜೀವನದಲ್ಲಿ ಮಣಿರತ್ನಂ ಅವರನ್ನು ಕೊಟ್ಟಿದ್ದು ಕೂಡ ನೀವೇ. ನಿಮ್ಮನ್ನು ನೋಡಲು ಬಂದಾಗ ಅವರು ನನಗೆ ಪರಿಚಯವಾಗಿದ್ದು. ಹಾಗ್ನೋಡಿದ್ರೆ, ಮಣಿರತ್ನಂ ಅವರ ಜೀವನ ಕೂಡ ನೀವು ಕೊಟ್ಟಿದ್ದೆ. ನೀವು ಇಲ್ಲದೆ ಜೀವನದಲ್ಲಿ ಏನು ಇಲ್ಲ'' ಎಂದು ಖುಷಿ ಹಂಚಿಕೊಂಡರು.

ಕಾಲಿಗೆ ಬಿದ್ದು ನಮಸ್ಕರಿದ ನಟಿ

ಕಾಲಿಗೆ ಬಿದ್ದು ನಮಸ್ಕರಿದ ನಟಿ

ಇಷ್ಟೆಲ್ಲಾ ವೇದಿಕೆ ಮೇಲೆ ಮಾತನಾಡಿದ ಸುಹಾಸಿನಿ, 'ನಿಮ್ಮ ಸಮ್ಮುಖದಲ್ಲಿ ನಾನು ಅವರ ಕಾಲಿಗೆ ನಮಸ್ಕರಿಸುತ್ತೇನೆ' ಎಂದು ಕಾಲು ಮುಗಿದದರು. ಬಳಿಕ, ನಿಮ್ಮ ಸಮ್ಮುಖದಲ್ಲಿ ಮುತ್ತು ಕೊಡುತ್ತೇನೆ ಎಂದು ಚಿಕ್ಕಪ್ಪನ ಕೆನ್ನೆಗೆ ಮುತ್ತಿಟ್ಟರು.

More from Filmibeat

English summary
South Actress Suhasini praised about super star Kamal Hassan in public stage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X