ಬಾಕ್ಸ್ ಆಫೀಸ್‌ನಲ್ಲಿ ರಜನಿಕಾಂತ್ ಜೈಲರ್ ಸಕ್ಸಸ್ ಬೆನ್ನಲ್ಲೇ ಏರಿದ ಸನ್ ಟಿವಿ ಷೇರುಗಳು!

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ತಮಿಳು ಚಲನಚಿತ್ರ 'ಜೈಲರ್' ನ ಭರ್ಜರಿ ಯಶಸ್ಸು ಗಳಿಸಿದೆ. ವಿಶ್ವದಾದ್ಯಂತ ಚಿತ್ರ ಇನ್ನು ಸಕತ್ ಪ್ರದರ್ಶನ ನೀಡುತ್ತಿದೆ. ಇದರ ಜೊತೆಗೆ ಚಿತ್ರ ನಿರ್ಮಾಣ ಮಾಡಿರುವ ಸನ್ ಪಿಕ್ಚರ್ಸ್‌ನ ಸನ್ ಟಿವಿ ನೆಟ್‌ವರ್ಕ್ ಲಿಮಿಟೆಡ್‌ನ ಷೇರುಗಳ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ.

ಹಲವು ವರ್ಷಗಳ ನಂತರ ಸನ್ ಟಿವಿ ನೆಟ್‌ವರ್ಕ್ ಲಿಮಿಟೆಡ್‌ನ ಷೇರುಗಳಲ್ಲಿ ಏರಿಕೆ ಕಂಡು ಬಂದಿದೆ ಎಂದು ಸಂಸ್ಥೆಯ ಟ್ರ್ಯಾಕಿಂಗ್ ವರದಿಗಳು ತಿಳಿಸುತ್ತವೆ. ಆಗಸ್ಟ್ 10 ರಂದು ರೂ 550 ಇದ್ದ ಷೇರುಗಳ ಬೆಲೆ ಬುಧವಾರ ಬಿಎಸ್‌ಇಯಲ್ಲಿ ಸನ್ ಟಿವಿ ಷೇರು 613 ರೂಪಾಯಿಗೆ ಏರಿಕೆಯಾಗಿದೆ.

sun-tv-shares-rise-after-the-success

ಜೈಲರ್ ಸಿನಿಮಾ ಬಿಡುಗಡೆಗೂ ಮುನ್ನ ಜೂನ್ 30 ರಂದು ಸನ್ ಟಿವಿ ಷೇರುಗಳು 437 ರೂಪಾಯಿಯಿತ್ತು. ಇದು ಚಿತ್ರ ಬಿಡುಗಡೆಯಾದ ದಿನದಂದು 550ಕ್ಕೆ ಏರಿಕೆಯಾಗಿತ್ತು. ಜೂನ್‌ 30 ರಿಂದ ಆಗಸ್ಟ್ 30ಕ್ಕೆ ಹೊಲಿಸಿದರೆ ಈ ಸಂಸ್ಥೆಯ ಷೇರುಗಳಲ್ಲಿ ಶೇಕಡಾ 40 ರಷ್ಟು ಹೆಚ್ಚಾಗಿದೆ.

"ಸನ್ ಪಿಕ್ಚರ್ಸ್ ನಿರ್ಮಿಸಿದ ರಜನಿಕಾಂತ್ ಅವರ 'ಜೈಲರ್' ಅದ್ಭುತವಾಗಿ ಯಶಸ್ಸು ಗಳಿಸುತ್ತಿದೆ. ಬಾಕ್ಸ್ ಆಫೀಸ್ ದಾಖಲೆಗಳನ್ನು ಧ್ವಂಸ ಮಾಡುತ್ತಿದೆ. ಇದು ಸನ್ ಟಿವಿ ನೆಟ್‌ವರ್ಕ್‌ನ Q2FY24 ಸಂಖ್ಯೆಗಳಿಗೆ ಹೆಚ್ಚಿನ ಪ್ರಯೋಜನ ನೀಡಲಿದೆ" ಎಂದು ನುವಾಮಾ ಇನ್‌ಸ್ಟಿಟ್ಯೂಷನಲ್ ಇಕ್ವಿಟೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ (ಸಂಶೋಧನೆ) ಅಭಿನೀಶ್ ರಾಯ್ ಹೂಡಿಕೆದಾರರ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

sun-tv-shares-rise-after-the-success

ಜೈಲರ್ ಚಿತ್ರವು ವಿಶ್ವಾದ್ಯಂತ ರೂ 600 ಕೋಟಿಗೂ ಅಧಿಕ ಹಣ ಗಳಿಸಿದೆ. ಇದಲ್ಲದೆ, ಬಿಡುಗಡೆಯಾಗಿ ಮೂರನೇ ವಾರದಲ್ಲಿಯೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರೆಸಿದೆ. ಮೊದಲ ವಾರದಲ್ಲಿ 450 ಕೋಟಿ ಗಳಿಸಿದ್ದರೆ ಎರಡನೇ ವಾರದಲ್ಲಿ 124 ಕೋಟಿ ಗಳಿಸಿದೆ. 2018 ರಲ್ಲಿ ಬಿಡುಗಡೆಯಾದ ರಜನಿಕಾಂತ್ ಅವರ 2.0 ಸಿನಿಮಾ ನಂತರ ಈ ಸಾಧನೆ ಮಾಡಿದ ಎರಡನೇ ತಮಿಳು ಚಿತ್ರವಾಗಿದೆ.

ತಮಿಳಿನ ಜೈಲರ್ ಹಿಂದಿ, ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಡಬ್ ಆಗಿ ಆಗಸ್ಟ್ 10 ರಂದು ಬಿಡುಗಡೆಯಾಗಿದೆ. ಚಿತ್ರದ ನಿರ್ಮಾಪಕರಾದ ಸನ್ ಪಿಕ್ಚರ್ಸ್, ಟಿವಿ, ಸಾಟಲೈಟ್ ಮತ್ತು ಆಡಿಯೊ ಹಕ್ಕುಗಳನ್ನು ಸಹ ಹೊಂದಿದೆ. ಒಟಿಟಿ ಪ್ಲಾಟ್‌ಫಾರ್ಮ್ ಕೂಡ ಸನ್ NXT ನಲ್ಲಿ ಸಿಗಲಿದೆ. ನೆಟ್‌ಫ್ಲಿಕ್ಸ್ ಹಿಂದಿ ಹಕ್ಕುಗಳನ್ನು ಅಂದಾಜು 100 ಕೋಟಿ ರೂ.ಗೆ ಖರೀದಿಸಿದೆ ಎಂದು ವರದಿಯಾಗಿದೆ.

ಜೈಲರ್ ಕನ್ನಡ ವರ್ಷನ್ 18 ದಿನಗಳಲ್ಲಿ ಬರೋಬ್ಬರಿ 4.95 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಡಬಿಂಗ್ ಚಿತ್ರಗಳ ಪೈಕಿ ನೂತನ ದಾಖಲೆ ಬರೆದಿದೆ‌. 2019 ರಲ್ಲಿ ಬಿಡುಗಡೆಯಾಗಿ ಕನ್ನಡಕ್ಕೂ ಡಬ್ ಆಗಿದ್ದ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಚಿತ್ರವನ್ನು ಜೈಲರ್ ಹಿಂದಿಕ್ಕಿದೆ. ಸೈರಾ ನರಸಿಂಹ ರೆಡ್ಡಿ ಕನ್ನಡದಲ್ಲಿ 3.50 ಕೋಟಿ ರೂಪಾಯಿ ಗಳಿಸಿತ್ತು. ಸದ್ಯಕ್ಕೆ ಜೈಲರ್ ಅತಿ ಹೆಚ್ಚು ಗಳಿಸಿದ ಡಬ್ಬಿಂಗ್ ಸಿನಿಮಾವಾಗಿದೆ.

ನೆಲ್ಸನ್ ಕುಮಾರ್ ನಿರ್ದೇಶನದ ಜೈಲರ್ ಸಿನಿಮಾದಲ್ಲಿ ಮಲಯಾಳಂ ನಟ ಮೋಹನ್ ಲಾಲ್, ಬಾಲಿವುಡ್ ನಟ ಜಾಕಿ ಶ್ರಾಫ್ ಮತ್ತು ಶಿವರಾಜ್ ‌ಕುಮಾರ್ ಅತಿಥಿ ಪಾತ್ರ ಮಾಡಿದ್ದರು. ರಮ್ಯಕೃಷ್ಣ, ತಮನ್ನಾ ಭಾಟಿಯಾ, ಸುನೀಲ್, ವಿನಾಯಕ್, ವಸಂತ್ ರವಿ ಸೇರಿ ದೊಡ್ಡ ತಾರಾ ಬಳಗವೆ ಚಿತ್ರದಲ್ಲಿದೆ.

More from Filmibeat

English summary
Sun Tv Shares Rise after the success of Rajinikanth's Jailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X