For Quick Alerts
  ALLOW NOTIFICATIONS  
  For Daily Alerts

  ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಕಿರುಕುಳ ದೂರು ನೀಡಿದ ಖ್ಯಾತ ನಟಿ

  |

  ತಮಿಳು ನಟ ಮುರುಳಿ-ವಡಿವೇಲು ನಟಿಸಿದ್ದ 'ಸುಂದರ್ ಟ್ರಾವಲ್ಸ್' ಸಿನಿಮಾದಲ್ಲಿ ನಾಯಕಿನಟಿಯಾಗಿ ಅಭಿನಯಿಸಿದ್ದ ರಾಧ ತಮ್ಮ ಎರಡನೇ ಪತಿ ಎಂದು ಹೇಳಿಕೊಂಡಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಕಿರುಕುಳ ಆರೋಪದಲ್ಲಿ ದೂರು ನೀಡಿದ್ದಾರೆ.

  ರಹಸ್ಯವಾಗಿ ಎರಡನೇ ಮದುವೆಯಾಗಿರುವ ವಸಂತ ರಾಜ ನನ್ನನ್ನು ಮಾನಸಿಕವಾಗಿ ನಿಂದಿಸಿ, ದೈಹಿಕವಾಗಿ ಹಲ್ಲೆ ಮಾಡಿದ್ದಾರೆ, ತನ್ನ ನಿಷ್ಠೆಯನ್ನು ಅನುಮಾನಿಸಿದ್ದಾರೆ ಎಂದು ವಿರುಗಂಬಕ್ಕಂ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ ತನ್ನ ತಾಯಿಗೂ ಧಮ್ಕಿ ಹಾಕಿದ್ದಾರೆ ಎಂದು ದೂರಿದ್ದಾರೆ. ಏನಿದು ನಟಿ ರಾಧ ಅವರ ಕೌಟುಂಬಿಕ ಕಲಹ? ಮುಂದೆ ಓದಿ...

  ಶ್ರುತಿ ಹಾಸನ್ ವಿರುದ್ಧ ಬಿಜೆಪಿ ಆಕ್ರೋಶ: ಕ್ರಿಮಿನಲ್ ಪ್ರಕರಣ ದಾಖಲಿಸಲು ಒತ್ತಾಯ

  ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ದೂರು

  ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ದೂರು

  ಕೆಲವು ಮಾಧ್ಯಮಗಳು ವರದಿ ಮಾಡಿರುವಂತೆ, ಅದಾಗಲೇ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗೆ ಮದುವೆಯಾಗಿ ಮಕ್ಕಳಿದ್ದರು. ಹಾಗಿದ್ದರೂ ರಾಧ ಅವರ ಜೊತೆ ರಹಸ್ಯವಾಗಿ ಮದುವೆಯಾಗಿದ್ದರು. ಈ ಕಡೆ ಮೊದಲ ಪತಿಯಿಂದ ಡಿವೋರ್ಸ್ ಪಡೆದಿದ್ದ ನಟಿ ರಾಧ ಸಹ ವಸಂತ ರಾಜ ಅವರ ಜೊತೆ ಲೀವ್ ಇನ್ ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ. ಈಗ ಅದೇ ವಸಂತ ರಾಜ ವಿರುದ್ಧ ರಾಧಾ ದೂರು ನೀಡಿದ್ದಾರೆ.

  ಉದ್ಯಮಿ ವಿರುದ್ಧ ದೂರು ನೀಡಿದ್ದ ರಾಧ

  ಉದ್ಯಮಿ ವಿರುದ್ಧ ದೂರು ನೀಡಿದ್ದ ರಾಧ

  2013ರ ನವೆಂಬರ್ ತಿಂಗಳಲ್ಲಿ ಉದ್ಯಮಿ ಫೈಜುಲ್ ಎನ್ನುವವರ ವಿರುದ್ಧ ನಟಿ ರಾಧಾ ದೂರು ದಾಖಲಿಸಿದ್ದರು. ಆರು ವರ್ಷಗಳ ಲೈವ್-ಇನ್ ಸಂಬಂಧದಲ್ಲಿದ್ದ ಫೈಜುಲ್ ನಂತರ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದೇನೆ. ನಮ್ಮಿಬ್ಬರ ಖಾಸಗಿ ವೀಡಿಯೊಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ರಾಧಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ನಿರ್ದೇಶಕ ಈರೋಡ್ ಸೌಂದರ್, ಫೈಜುಲ್ ಜೊತೆ ಕೈಜೋಡಿಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದರು. ಅದ್ಯಾಗೋ ಕೆಲವು ದಿನಗಳ ಬಳಿಕ ಈ ದೂರು ವಾಪಸ್ ಪಡೆದುಕೊಂಡರು.

  ಏಪ್ರಿಲ್ 22ಕ್ಕೆ ಸರಳವಾಗಿ ವಿವಾಹವಾಗಲಿದ್ದಾರೆ ನಟ ವಿಷ್ಣು ವಿಶಾಲ್-ಜ್ವಾಲಾ ಗುಟ್ಟ

  ರೌಡಿ ಶೀಟರ್ ವಿರುದ್ಧ ದೂರು

  ರೌಡಿ ಶೀಟರ್ ವಿರುದ್ಧ ದೂರು

  2016ರಲ್ಲಿ ವೈರಂ ಎಂಬ ರೌಡಿ ಶೀಟರ್ ನನಗೆ ಬೆದರಿಕೆಯೊಡ್ಡಿದ್ದಾನೆ ಎಂದು ನಟಿ ರಾಧಾ ದೂರು ನೀಡಿದ್ದರು. ''ನಿರ್ಮಾಪಕ ಮುನಿವೇಲ್ ಜೊತೆಗಿನ ಸಂಬಂಧದ ಬಗ್ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ'' ಎಂದು ದೂರು ನೀಡಿದ್ದರು. ಈ ಘಟನೆ ಬಳಿಕ ನಿರ್ಮಾಪಕ ಮುನಿವೇಲ್ ಅವರ ಪತ್ನಿ ಮಾಧ್ಯಮಗಳಲ್ಲಿ ''ನನ್ನ ಮತ್ತು ನನ್ನ ಪತಿಯ ಸಂಬಂಧವನ್ನು ರಾಧಾ ಹಾಳು ಮಾಡಿದ್ದಾರೆ'' ಎಂದು ಆರೋಪಿಸಿದ್ದರು.

  ಬಿಗ್ ಬಾಸ್ ನಿಂದ ಹೊರ ಬಂದ ಕಿಚ್ಚ ಸುದೀಪ್..? | Filmibeat Kannada
  ಚೆನ್ನೈನಲ್ಲಿ ಪರಿಚಯ ಆಗಿತ್ತು

  ಚೆನ್ನೈನಲ್ಲಿ ಪರಿಚಯ ಆಗಿತ್ತು

  ಚೆನ್ನೈನ ತಿರುವನ್ಮುಯೂರ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ರಾಧಾ ಪರಿಚಯ ಆಯಿತು. ನಂತರ ಚೆನ್ನೈನಿಂದ ವಡಪಲಾನಿ ಠಾಣೆಗೆ ವರ್ಗಾವಣೆ ಮಾಡಿಕೊಂಡರು. ನಂತರ ರಾಧಾ ಅವರ ಜೊತೆ ರಹಸ್ಯವಾಗಿ ವಿವಾಹವಾಗಿ ಸಾಲಿಗ್ರಾಮ ನಿವಾಸದಲ್ಲಿ ಒಟ್ಟಿಗೆ ಇದ್ದರು ಎಂದು ಪೊಲೀಸರ ವಿಚಾರಣೆ ವೇಳೆ ಬಹಿರಂಗವಾಗಿದೆ ಎಂದು pinkvilla, indiaglitz ವೆಬ್‌ಸೈಟ್ ವರದಿ ಮಾಡಿದೆ.

  English summary
  Sundara Travels actress Radha has filed a police complaint against her second husband Sub inspector of Police Vasantha raja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X