ತಮಿಳು ಭಾಷೆ ಕಲಿಯುತ್ತಿದ್ದಾರೆ ಸನ್ನಿ ಲಿಯೋನ್

ಮಾಜಿ ನೀಲಿ ಚಿತ್ರ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ತಮಿಳು ಚಿತ್ರರಂಗಕ್ಕೆ ಅಡಿ ಇಡಲಿದ್ದಾರೆ. ಈಗಾಗಲೇ 'ವೀರಮಾದೇವಿ' ಹೆಸರಿನ ತಮಿಳು ಸಿನಿಮಾದಲ್ಲಿ ನಟಿಸುತ್ತಿರುವ ಸನ್ನಿ ಆ ಸಿನಿಮಾ ಬಿಡುಗಡೆ ಆಗುವುದಕ್ಕೆ ಮುನ್ನವೇ ಮತ್ತೊಂದು ತಮಿಳು ಸಿನಿಮಾಕ್ಕೆ ಸಹಿ ಹಾಕಿದ್ದಾರೆ.

ಯುವನ್ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ತಮಿಳು ಸಿನಿಮಾದಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾ ಒಂದು ಐತಿಹಾಸಿಕ ಕಥೆಯುಳ್ಳ ಹಾರರ್ ಸಿನಿಮಾ ಆಗಿರಲಿದೆ. ಈಗಾಗಲೇ ಸನ್ನಿ ನಟಿಸುತ್ತಿರುವ ತಮಿಳು ಸಿನಿಮಾ 'ವೀರಮಾದೇವಿ' ಸಹ ಐತಿಹಾಸಿಕ ಕತೆಯುಳ್ಳ ಸಿನಿಮಾವೇ ಆಗಿದೆ.

''ಈ ಸಿನಿಮಾದ ಕತೆಯನ್ನು ಮೂರು ವರ್ಷ ಸಮಯ ತೆಗೆದುಕೊಂಡು ಬರೆದಿದ್ದೇನೆ. ಚಿತ್ರಕತೆ ರೆಡಿಯಾದ ಬಳಿಕ ಮುಖ್ಯ ಪಾತ್ರಕ್ಕೆ ಸನ್ನಿ ಲಿಯೋನ್ ಚೆನ್ನಾಗಿ ಒಪ್ಪುತ್ತಾರೆ ಎನಿಸಿತು. ಕೂಡಲೇ ಅವರನ್ನು ಭೇಟಿಯಾಗಿ ಕತೆ ಹೇಳಿದೆ. ಸನ್ನಿಗೂ ಕತೆ ಬಹಳವಾಗಿ ಹಿಡಿಸಿತು. ನಮ್ಮ ಸಿನಿಮಾದಲ್ಲಿ ನಟಿಸಲು ಸನ್ನಿ ಉತ್ಸುಕರಾಗಿದ್ದಾರೆ' ಎಂದಿದ್ದಾರೆ ನಿರ್ದೇಶಕ ಯುವನ್.

 Sunny Leone Acting In Her Second Tamil Movie

ಎರಡು ತಮಿಳು ಸಿನಿಮಾದಲ್ಲಿ ನಟಿಸುತ್ತಿರುವ ಸನ್ನಿ ಲಿಯೋನ್ ಈಗಾಗಲೇ ತಮಿಳು ಭಾಷೆ ಕಲಿಯಲು ಆರಂಭಿಸಿದ್ದಾರಂತೆ. ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಜೂನ್‌ನಿಂದ ತೊಡಗಿಕೊಳ್ಳಲಿದ್ದಾರೆ. ಸನ್ನಿ ನಟಿಸಲಿರುವ ದೃಶ್ಯಗಳ ಚಿತ್ರೀಕರಣ ಮುಂಬೈನಲ್ಲಿಯೇ ನಡೆಯಲಿದೆ.

ಈ ಸಿನಿಮಾವು ವರ್ತಮಾನ ಹಾಗೂ ಭೂತಕಾಲದ ಕತೆಯನ್ನು ಹೊಂದಿರಲಿದೆ. ಫ್ಲಾಷ್‌ಬ್ಯಾಕ್‌ ತಂತ್ರದ ಮೂಲಕ ಕತೆ ಹೇಳಲಾಗುವುದು ಎಂದಿದ್ದಾರೆ ನಿರ್ದೇಶಕ ಯುವನ್. ಸಿನಿಮಾದಲ್ಲಿ ರಮೇಶ್ ತಿಲಕ್, ಮೊಟ್ಟೈ ರಾಜೇಂದ್ರ, ತಂಗದೊರೈ ಇನ್ನೂ ಹಲವರು ನಟಿಸಲಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಜಾವೇದ್ ರಿಯಾಜ್ ನೀಡಲಿದ್ದಾರೆ.

ಸನ್ನಿ ನಟಿಸುತ್ತಿರುವ ಮತ್ತೊಂದು ತಮಿಳು ಸಿನಿಮಾ 'ವೀರಮಾದೇವಿ' ಸಿನಿಮಾವನ್ನು ವಡಿಯುಧಾಯನ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ನವದೀಪ್, ನಾಸರ್, ಶ್ರೀನಾಥ್ ಅವರುಗಳು ನಟಿಸುತ್ತಿದ್ದಾರೆ.

Recommended Video

ತಾಯಿಯನ್ನು ಉಳಿಸಿಕೊಟ್ಟ Salman Khan ರನ್ನು ದೇವರೆಂದ Rakhi Sawant | Filmibeat Kannada

ಕನ್ನಡದಲ್ಲಿ 'ಲವ್‌ ಯೂ ಆಲಿಯಾ', 'ಡಿಕೆ' ಹಾಗೂ ಇತ್ತೀಚೆಗೆ 'ಚಾಂಪಿಯನ್' ಸಿನಿಮಾಗಳಲ್ಲಿ ಐಟಂ ಹಾಡಿಗೆ ಸನ್ನಿ ಹೆಜ್ಜೆ ಹಾಕಿದ್ದಾರೆ. ಸುದೀಪ್ ನಟಿಸಿರುವ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಹಾಡೊಂದಕ್ಕೆ ಸನ್ನಿ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿತ್ತು ಆದರೆ ನಂತರ ಆ ಅವಕಾಶ ಜಾಕ್ವೆಲಿನ್ ಫರ್ನಾಂಡೀಸ್ ಪಾಲಾಯಿತು.

More from Filmibeat

English summary
Sunny Leone signed up for her second Tamil movie. She is now acting in 'Veeramadevi' movie. next will be historical horror movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X