ತೆರಿಗೆ ಬೇಡಿಕೆ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಸೂಪರ್ ಸ್ಟಾರ್ ರಜನಿಕಾಂತ್
ಕಲ್ಯಾಣ ಮಂಟಪಕ್ಕೆ 6.50 ಲಕ್ಷ ಆಸ್ತಿ ತೆರೆಗೆ ವಿಧಿಸಿದ ಗ್ರೇಟರ್ ಚೆನ್ನೈ ಕಾರ್ಪೋರೇಷನ್ ವಿರುದ್ಧ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಮದ್ರಾಸ್ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ. ತಮಿಳು ನಾಡಿನ ಕೊಡಂಬಕ್ಕಂನಲ್ಲಿ ರಜನಿಕಾಂತ್ ಅವರ ಕಲ್ಯಾಣ ಮಂಟಪವಿದೆ.
ಚೆನ್ನೈ ಕಾರ್ಪೋರೇಷನ್ ಏಪ್ರಿಲ್ ನಿಂದ ಸೆಪ್ಟಂಬರ್ ವರೆಗೆ ಅರ್ಧ ವರ್ಷ ಅವಧಿಗೆ ತೆರಿಗೆ ನೋಟಿಸ್ ನೀಡಿದೆ. ಹೈ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಕೊರೊನಾ ವೈರಸ್ ಲಾಕ್ ಡೌನ್ ನಿಂದ ಮಾರ್ಚ್ 24ರಿಂದ ಮದುವೆ ಹಾಲ್ ಖಾಲಿಯಾಗಿದೆ. ಯಾವುದೇ ಆದಾಯವಿಲ್ಲ. ಇಷ್ಟು ತೆರೆಗೆ ಕಟ್ಟುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
'ನಿಯಮಿತವಾಗಿ ತೆರಿಗೆ ಪಾವತಿಸುತ್ತಿದ್ದೇನೆ. ಕೊನೆಯದಾಗಿ ಫೆಬ್ರವರಿ 14ರಂದು ತೆರೆಗೆ ಪಾವತಿಸಲಾಗಿದೆ. ಲಾಕ್ ಡೌನ್ ಗೂ ಮೊದಲು ಹಾಲ್ ಬುಕ್ ಮಾಡಿದ್ದ ಜನರಿಗೆ ಸರ್ಕಾರದ ಆದೇಶದಂತೆ ಹಣ ಮರುಪಾವತಿಸಿದ್ದೇವೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಸೂಪರ್ ಸ್ಟಾರ್ ತಮ್ಮ ವಕೀಲ ವಿಜಯನ್ ಸುಬ್ರಮಣಿಯನ್ ಮೂಲಕ ಮನವಿ ಸಲ್ಲಿಸಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ರಜನಿಕಾಂತ್ ಸದ್ಯ ಅಣ್ಣಾತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಬಳಿಕ ಇನ್ನೂ ಚಿತ್ರೀಕರಣ ಪ್ರಾರಂಭ ಮಾಡಿಲ್ಲ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸದ್ಯದಲ್ಲೇ ಮತ್ತೆ ಚಿತ್ರೀಕರಣಕ್ಕೆ ಹೊರಡಲು ಸಜ್ಜಾಗುತ್ತಿದೆ. ನವೆಂಬರ್ ನಿಂದ ಅಣ್ಣಾತೆ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.


Click it and Unblock the Notifications











