For Quick Alerts
  ALLOW NOTIFICATIONS  
  For Daily Alerts

  'ದರ್ಬಾರ್' ಕಲೆಕ್ಷನ್: 'ಸರ್ಕಾರ್'-'2.0' ಸಿನಿಮಾ ರೆಕಾರ್ಡ್ ಬ್ರೇಕ್ ಮಾಡುವಲ್ಲಿ 'ದರ್ಬಾರ್' ವಿಫಲ

  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಾರಿ ನಿರೀಕ್ಷೆಯ ದರ್ಬಾರ್ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕನ್ನಡ ವರ್ಷನ್ ಬಿಟ್ಟು ದರ್ಬಾರ್ ದಕ್ಷಿಣ ಭಾರತೀಯ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲೂ ತೆರೆಗೆ ಬಂದಿದೆ. ಸುಮಾರು 4000 ಚಿತ್ರಮಂದಿರಗಳಲ್ಲಿ ದರ್ಬಾರ್ ರಿಲೀಸ್ ಆಗಿದೆ.

  ಪೇಟಾ ಸಿನಿಮಾ ನಂತರ ತಲೈವಾ ದರ್ಬಾರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಚಿತ್ರದಲ್ಲಿ ಸೂಪರ್ ಸ್ಟಾರ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ. ಸುಮಾರು ಎರಡು ದಶಕಗಳ ನಂತರ ರಜನಿಕಾಂತ್ ಖಾಕಿ ತೊಟ್ಟು ಖದರ್ ತೋರಿಸಿದ್ದಾರೆ. ಎ.ಆರ್ ಮುರುಗದಾಸ್ ನಿರ್ದೇಶದಲ್ಲಿ ಮೂಡಿಬಂದ ದರ್ಬಾರ್ ನಲ್ಲಿ ರಜನಿಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಅನೇಕ ವರ್ಷಗಳ ಬಳಿಕ ಸೂಪರ್ ಸ್ಟಾರ್ ಮತ್ತು ನಯನತಾರಾ ಇಬ್ಬರು ಒಟ್ಟಿಗೆ ತೆರೆ ಮಿಂಚಿದ್ದಾರೆ. ಸಾಕಷ್ಟು ಕುತೂಹಲಗಳೊಂದಿಗೆ ತೆರೆಗೆ ಬಂದ ದರ್ಬಾರ್ ಮೊದಲ ದಿನ ಗಳಿಸಿದೆಷ್ಟು? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ..

  ಮೊದಲ ದಿನವೇ ರಜನಿಕಾಂತ್ ದರ್ಬಾರ್ ಗೆ ಆಘಾತ!ಮೊದಲ ದಿನವೇ ರಜನಿಕಾಂತ್ ದರ್ಬಾರ್ ಗೆ ಆಘಾತ!

  ದರ್ಬಾರ್ ಗಿಂತ ಜಾಸ್ತಿ ಸರ್ಕಾರ್ ಮತ್ತು 2.0 ಕಲೆಕ್ಷನ್

  ದರ್ಬಾರ್ ಗಿಂತ ಜಾಸ್ತಿ ಸರ್ಕಾರ್ ಮತ್ತು 2.0 ಕಲೆಕ್ಷನ್

  ಬಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ ದರ್ಬಾರ್ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದ್ದರು ಇಳೆಯದಳಪತಿ ವಿಜಯ್ ಅಭಿನಯದ ಸರ್ಕಾರ್ ಮತ್ತು ರಜನಿಕಾಂತ್ ಅಭಿನಯದ 2.0 ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡುವಲ್ಲಿ ದರ್ಬಾರ್ ವಿಫಲವಾಗಿದೆ. ಸರ್ಕಾರ್ ಸಿನಿಮಾ ಮೊದಲ ದಿನ ಚೆನ್ನೈನಲ್ಲಿ ಸಿಟಿಯಲ್ಲಿ 2.37 ಕೋಟಿ ಬಾಚಿಕೊಂಡಿತ್ತು. ಇನ್ನು ರಜನಿಕಾಂತ್ ಅಭಿನಯದ 2.0 ಸಿನಿಮಾ 2.64 ಕೋಟಿ ಕಲೆಕ್ಷನ್ ಮಾಡಿದೆ.

  ದರ್ಬಾರ್ ಸಿನಿಮಾದ ಕಲೆಕ್ಷನ್

  ದರ್ಬಾರ್ ಸಿನಿಮಾದ ಕಲೆಕ್ಷನ್

  ಚೆನ್ನೈನಲ್ಲಿ ದರ್ಬಾರ್ ಸಿನಿಮಾ 2.27 ಕೋಟಿ ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ. ತಮಿಳು ಚಿತ್ರರಂಗದ ವಿಶ್ಲೇಶಕ ರಮೇಶ್ ಬಾಲ ಟ್ವೀಟ್ ಮಾಡಿರುವ ಪ್ರಕಾರ ದರ್ಬಾರ್ ಮೊದಲ ದಿನ ಚೆನ್ನೈನಲ್ಲಿ 2.27 ಕೋಟಿ ಕಲೆಕ್ಷನ್ ಮಾಡಿದೆ. ತಮಿಳು ಸಿನಿಮಾ ಚೆನ್ನೈನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಎರಡನೆ ಸಿನಿಮಾ ಇದಾಗಿದೆ. ರಜನಿಕಾಂತ್ ಅಭಿನಯದ ಪೇಟಾ ಸಿನಿಮಾ 2 ಕೋಟಿ ಬಾಚಿಕೊಂಡಿತ್ತು.

  Darbar Review: ಅದ್ಭುತವಂತೂ ಅಲ್ಲ, ಇಷ್ಟ ಆಗುತ್ತೆ ರಜನಿ 'ಪೊಲೀಸ್ ಸ್ಟೋರಿ'Darbar Review: ಅದ್ಭುತವಂತೂ ಅಲ್ಲ, ಇಷ್ಟ ಆಗುತ್ತೆ ರಜನಿ 'ಪೊಲೀಸ್ ಸ್ಟೋರಿ'

  ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ದರ್ಬಾರ್ ಗಳಿಕೆ

  ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ದರ್ಬಾರ್ ಗಳಿಕೆ

  ದರ್ಬಾರ್ ಸಿನಿಮಾ ತಮಿಳುನಾಡು ಮತ್ರವಲ್ಲದೆ ಆಂಧ್ರ ಮತ್ತು ತೆಲಂಗಾಣದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಮೇಶ್ ಬಾಲ ಟ್ವೀಟ್ ಮಾಡಿರುವ ಪ್ರಕಾರ ದರ್ಬಾರ್ ಸಿನಿಮಾ ಆಂಧ್ರ ಮತ್ತು ತೆಲಂಗಾಣದಲ್ಲಿ ಗ್ರಾಸ್ ಕಲೆಕ್ಷನ್ 7.5 ಕೋಟಿಯಾಗಿದೆ. ಮತ್ತು ಶೇರ್ ಕಲೆಕ್ಷನ್ 4.5 ಕೋಟಿಯಾಗಿದೆ.

  'ದರ್ಬಾರ್' ಚಿತ್ರದ ಟ್ವಿಟ್ಟರ್ ವಿಮರ್ಶೆ: ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಹೇಳಿದ್ದೇನು?'ದರ್ಬಾರ್' ಚಿತ್ರದ ಟ್ವಿಟ್ಟರ್ ವಿಮರ್ಶೆ: ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಹೇಳಿದ್ದೇನು?

  ವಿದೇಶದಲ್ಲಿ ದರ್ಬಾರ್ ಕಲೆಕ್ಷನ್

  ವಿದೇಶದಲ್ಲಿ ದರ್ಬಾರ್ ಕಲೆಕ್ಷನ್

  ಸೂಪರ್ ಸ್ಟಾರ್ ರಜನಿಕಾಂತ್ ಕೇವಲ ಭಾರತದಲ್ಲಿ ಮಾತ್ರ ಅಭಿಮಾನಿಗಳಿಲ್ಲ. ವಿದೇಶದಲ್ಲು ಅಪಾರ ಸಂಖ್ಯೆ ಅಭಿಮಾನಿಗಳಿದ್ದಾರೆ. ದರ್ಬಾರ್ ಸಿನಿಮಾ ವಿದೇಶಿ ನೆಲದಲ್ಲೂ ಅಬ್ಬರಿಸಿದೆ. ಯು.ಎಸ್ ನಲ್ಲಿ ದರ್ಬಾರ್ 4.38 ಕೋಟಿ ಬಾಚಿಕೊಂಡಿದೆ. ಇನ್ನು ಉತ್ತಮ ಪ್ರದರ್ಶನ ಕಾಣುತ್ತಿದೆ. ಇನ್ನು ಆಸ್ಟ್ರೇಲಿಯಾ ಈಗಾಗಲೆ 78 ಲಕ್ಷ ಕಲೆಕ್ಷನ್ ಆಗಿದೆ. ಸಿಂಗಾಪುರ, ಮಲೇಶಿಯಾದಲ್ಲೂ ದರ್ಬಾರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

  English summary
  Super star Rajinikanth starrer Darbar film earned 2.27 crore in Chennai City. Rajinikanth Darbar film big opening in first day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X