ಆಕಾಶ ಸ್ಪರ್ಶಿಸಿದ ತಲೈವಾ ಕ್ರೇಜ್: ವಿಮಾನದಲ್ಲೂ ರಜನಿಯದ್ದೇ 'ದರ್ಬಾರ್'

Recommended Video

ಎರಡು ವಿಮಾನಗಳ ಮೇಲೆ ರಜಿನಿಯ ದರ್ಬಾರ್ ಪೋಸ್ಟರ್ | FILMIBEAT KANNADA

ಕ್ರೇಜ್ ಗೆ ಮತ್ತೊಂದು ಹೆಸರೇ ಸೂಪರ್ ಸ್ಟಾರ್ ರಜಿನಿಕಾಂತ್ ಅಂದರೆ ತಪ್ಪಾಗಲ್ಲ. ತಲೈವಾ ಸಿನಿಮಾ ಬರ್ತಿದೆ ಅಂದರೆ ಸಾಕು ತಮಿಳುನಾಡು ಮಾತ್ರವಲ್ಲ, ಇಡೀ ದೇಶವೆ ಸಂಭ್ರಮಿಸುತ್ತೆ. ದೇಶ-ವಿದೇಶದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ಸೂಪರ್ ಸ್ಟಾರ್ ಈಗ ದರ್ಬಾರ್ ಮೂಲಕ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದ್ದಾರೆ.

ದರ್ಬಾರ್ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಆಗಲೆ ರಜನಿಯ ಕ್ರೇಜ್ ಆಕಾಶದೆತ್ತರಕ್ಕೆ ಹಾರುತ್ತಿದೆ. ಈಗಾಗಲೆ ಚಿತ್ರದ ಪ್ರಮೋಷನ್ ಚಟುವಟಿಕೆಗಳು ಭರ್ಜರಿಯಾಗಿ ನಡೆಯುತ್ತಿದೆ. ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಸಂಗತಿ ಅಂದರೆ ದರ್ಬಾರ್ ಪ್ರಮೋಷನ್ ಅಕ್ಷರಶಃ ಆಕಾಶ ಸ್ಪರ್ಶಿಸಿದೆ.

ಹೌದು, ದರ್ಬಾರ್ ಚಿತ್ರದ ಪೋಸ್ಟರ್ ಗಳನ್ನು ವಿಮಾನಗಳಲ್ಲಿ ಅಂಟಿಸಲಾಗಿದೆ. ಎರಡು ವಿಮಾನಕ್ಕೆ ದರ್ಬಾರ್ ಹೆಸರು ಇಡಲಾಗಿದೆ. ಸೂಪರ್ ಸ್ಟಾರ್ ದರ್ಬಾರ್ ಪೋಸ್ಟರ್ ಅನ್ನು ವಿಮಾನದ ಮೇಲೆ ದೊಡ್ಡದಾಗಿ ಹಾಕಲಾಗಿದೆ. ದರ್ಬಾರ್ ವಿಮಾನ ನೋಡಿ ಅಭಿಮಾನಿಗಳು ಸಂತಸಪಡುತ್ತಿದ್ದಾರೆ.

Super Star Rajinikanth Starrer Darbar Promotion Touch The Sky

ದರ್ಬಾರ್ ಲೈಕ ಪ್ರೊಡಕ್ಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ. ಚಿತ್ರದ ಪ್ರಮೋಷನ್ ಕೆಲಸಗಳನ್ನು ಭರ್ಜರಿಯಾಗಿ ಮಾಡುತ್ತಿರುವ ಚಿತ್ರತಂಡ ಪ್ರಮೋಷನ್ ಗೆ ಕೋಟಿ ಕೊಟಿ ಹಣ ಚೆಲ್ಲುತ್ತಿದ್ದಾರೆ. ದರ್ಬಾರ್ ಎ.ಆರ್ ಮುರುಗದಾಸ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ತಲೈವಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ದರ್ಬಾರ್ ಇದೆ ತಿಂಗಳು 9ಕ್ಕೆ ತೆರೆಗೆ ಬರುತ್ತಿದೆ.

More from Filmibeat

English summary
Super star Rajinikanth starrer Darbar promotion touch the sky. Darbar movie set to release on January 9th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X