For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಇಂದು ಮಹತ್ವದ ನಿರ್ಧಾರ

  |

  ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದ ಕುರಿತು ಇಂದು ಸೋಮವಾರ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ತಮಿಳುನಾಡಿನ ವಿಧಾನಸಭೆ ಚುನಾವಣೆ ಹಿನ್ನಲೆ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ನಿರ್ಧಾರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.

  ಈ ಹಿಂದೆ ಸೂಪರ್ ಸ್ಟಾರ್ ಅನಾರೋಗ್ಯದ ಕಾರಣ ರಾಜಕೀಯದಿಂದ ಅಂತರ ಕಾಯ್ದುಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಬಗ್ಗೆ ರಜನಿಕಾಂತ್ ಪ್ರತಿಕ್ರಿಯೆ ನೀಡಿರುವ ಮೂಲಕ ವದಂತಿಗಳಿಗೆ ಬ್ರೇಕ್ ಹಾಕಿದ್ದರು.

  ನಟ ತವಸಿಯ ಜೀವ ಉಳಿಸಲಿಲ್ಲ ರಜನೀಕಾಂತ್, ವಿಜಯ್ ಸೇತುಪತಿ ನೆರವು

  ಇಂದು (ನವೆಂಬರ್ 30) ಮಕ್ಕಳ್ ಮಂದ್ರಂ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳ ಸಭೆ ಇಂದು ನಿಗದಿಯಾಗಿದೆ. ಸಭೆಯಲ್ಲಿ ರಾಜಕೀಯ ಪ್ರವೇಶ, ಚುನಾವಣೆ ಸ್ಪರ್ಧೆ ಕುರಿತು ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಕೊರೊನಾ ವೈರಸ್ ಹಿನ್ನಲೆ ಇಂದು ಸಭೆ ನಡೆಯುವ ಸಭೆ ಆನ್ ಲೈನ್ ನಲ್ಲಿ ನಡೆಯುತ್ತಾ ಅಥವಾ ಎಲ್ಲರೂ ಭಾಗಿಯಾಗುತ್ತಾರಾ ಎನ್ನುವುದು ಬಹಿರಂಗವಾಗಿಲ್ಲ.

  ಕಳೆದ ತಿಂಗಳು ರಾಜಕೀಯ ಪ್ರವೇಶ, ವಿಳಂಬವಾಗಲಿದೆ. ಕೊರೊನಾ ಸಮಯದಲ್ಲಿ ಚುನಾವಣೆ ಪ್ರಚಾರದ ಬಗ್ಗೆ ಕಾಳಜಿ ವಹಿಸುವಂತೆ ವೈದ್ಯರು ಸೂಚಿಸಿದ್ದಾರೆ, ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ, ಹಾಗಾಗಿ ಕೊರೊನಾ ವೈರಸ್ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕೆನ್ನುವ ಕಾರಣಕ್ಕೆ ರಾಜಕೀಯ ಪ್ರವೇಶ ವಿಳಂಬವಾಗಲಿದೆ ಎನ್ನುವ ಪತ್ರ ವೈರಲ್ ಆಗಿತ್ತು.

  ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ರಜನಿಕಾಂತ್, ವೈದ್ಯರ ಸಲಹೆ ನಿಜ ಆದರೆ ಪತ್ರ ನನ್ನದಲ್ಲ' ಎಂದು ಹೇಳಿದ್ದರು. ಹಾಗಾಗಿ ಇವತ್ತು ನಡೆಯುತ್ತಿರುವ ಸಭೆಯ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಹಾಗೂ ರಜನಿಕಾಂತ್ ನಿರ್ಧಾರವೇನಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Super star Rajinikanth to meet Party leaders on Monday to Decide on Political Plunge.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X