ಹುಟ್ಟುಹಬ್ಬದ ಸಂಭ್ರಮದಲ್ಲಿ ತಲೈವಾ ರಜನಿಕಾಂತ್;ಅಭಿಮಾನಿಗಳಿಂದ ಸಂಭ್ರಮಾಚರಣೆ

ತಲೈವಾ ಸೂಪರ್ ಸ್ಟಾರ್ ನಟ ರಜಿನಿಕಾಂತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಭಾರತೀಯ ಸಿನಿಮಾ ರಂಗದಲ್ಲೆ ಯಶಸ್ವಿ ನಟರಾಗಿ ಬೆಳೆದಿರೋ ರಜಿನಿ ಕಾಂತ್ ಇಂದು 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ರಂಗದವರಿಂದ ಹಾಗೇ ಅಭಿಮಾನಿಗಳಿಂದ ತಲೈವಾ ರಜಿನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂತಸ ಸಡಗರದಿಂದ ಸೆಲೆಬ್ರೇಟ್ ಮಾಡುತ್ತಿದ್ದಾರೆ. ತನ್ನ ನಟನೇ ಮೂಲಕವೇ ಅದೆಷ್ಟೋ ಅಭಿಮಾನಿಗಳನ್ನು ಸಂಪಾದಿಸಿತುವ ತಲೈವಾ ರಜನಿಗೆ ದೇಶದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದು ರಜನಿ ಬೆಳೆದುಬಂದ ಹಾದಿ ಕೂಡ ಸಾಕಷ್ಟು ರೋಚಕವಾಗಿದೆ.

ಡಿಸೆಂಬರ್ 12, 1950ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದವರು ರಜನಿಕಾಂತ್. ಮೂಲ ಹೆಸರು ಶಿವಾಜಿರಾವ್ ಗಾಯಕ್‌ವಾಡ್. ಬೆಂಗಳೂರಿನ ಹನುಮಂತನಗರದಲ್ಲಿ ರಜನಿಕಾಂತ್ ತನ್ನ ಬಾಲ್ಯದ ಶಿಕ್ಷಣ , ಕಾಲೇಜು ವಿದ್ಯಾಭ್ಯಾಸ ಮುಗಿಸಿ ಅಲ್ಲಿಂದ ದುಡಿಯಲು ಆರಂಭಿಸಿದ್ದರು. ಕಂಡಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ ರಜನಿಕಾಂತ್‌ಗೆ ಅಭಿನಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಅವರು ಮದ್ರಾಸ್‌ನಲ್ಲಿ ಆಕ್ಟಿಂಗ್ ತರಬೇತಿಯನ್ನು ಕೂಡ ಪಡೆದುಕೊಂಡಿದ್ದರು. ಆಗ ಹೆಸರುವಾಸಿ ಆಗಿದ್ದ ನಿರ್ದೇಶಕ ಬಾಲಚಂದರ್ ರಜನಿ ಅವರನ್ನು ಮೊದಲು ಚಿತ್ರರಂಗಕ್ಕೆ ಪರಿಚಯಿಸಿದವರು. ಅಲ್ಲಿಂದ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಬಂದ ರಜನಿ 1975ರಲ್ಲಿ ಬಿಡುಗಡೆಯಾದ 'ಅಪೂರ್ವ ರಾಗಂಗಳ್' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಅಂದು ಆರಂಭವಾದ ರಜನಿ ಸಿನಿಮಾ ಜರ್ನಿ ಇಂದು ಅಭಿಮಾನಿಗಳಿಂದ ತಲೈವಾ ಎಂದು ಹೆಸರು ಗಿಟ್ಟಿಸಿಕೊಳ್ಳುವ ವರೆಗು ಮುಂದುವರೆದಿದೆ.

 Super Star Rajinikanth turn 71 today fans wishes to Thalaiva

ಆರಂಭದಲ್ಲಿ ಬಸ್ ಕಂಡಕ್ಟರ್ ಆಗಿದ್ದ ಅವರು ನಂತರದಲ್ಲಿ ಸಿನಿಮಾದಲ್ಲಿ ನಟಿಸಲು ಅವಕಾಶ ಪಡೆದುಕೊಂಡ ರಜನಿಕಾಂತ್ ಅಲ್ಲಿಂದ ಮತ್ತೆಯಾವತ್ತು ಹಿಂತಿರುಗಿ ನೋಡಿದವರೇ ಅಲ್ಲ. ಕನ್ನಡ ತೆಲುಗು, ತಮಿಳು, ಹಿಂದಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ರಜನಿ ಕಾಂತ್ ಅಭಿನಯಿಸಿದ್ದಾರೆ. ರಜನಿ ಅವರ ಆಕ್ಟಿಂಗ್, ವಿಭಿನ್ನ ಮ್ಯಾನರಿಸಂ, ಮೂಲಕವೇ ಕೋಟ್ಯಾಂತರ ಅಭಿಮಾನಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಕೇವಲ ಹೀರೋ ಆಗಿ ಮಾತ್ರವಲ್ಲದೇ ಖಳನಟನಾಗಿಯೂ ಅಭಿಮಾನಿಗಳನ್ನು ರಂಜಿಸಿರುವ ರಜನಿ ಕಾಂತ್ 71ನೇ ವಯಸ್ಸಿನಲ್ಲೂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಲೂ ರಜನಿ ಕಾಂತ್ ಸಿನಿಮಾ ಎಂದರೇ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಝ್ ಇದೆ. ರಜನಿ ಕಾಂತ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೇ ಸಾಕು ಹಬ್ಬದ ರೀತಿಯಲ್ಲಿ ಸಂಭ್ರಮಾಚರಣೆ ಮಾಡುವ ಅಭಿಮಾನಿಗಳು ಆರಾಧಕರಾಗಿದ್ದಾರೆ.

ರಜನಿಕಾಂತ್ ಅದ್ಬುತ ನಟನೆಯ ಜೊತೆಗೆ ಅವರ ಸ್ಟೈಲ್ ಕೂಡ ಭಾರಿ ಸಂಚಲನ ಮೂಡಿಸಿತ್ತು. ಸ್ಟೈಲ್ ಕಿಂಗ್ ಎಂದೇ ಕರೆಸಿಕೊಳ್ಳುವ ರಜನಿಕಾಂತ್ ಅವರ ವಿಭಿನ್ನ ಸ್ಟೈಲ್ ಮೂಲಕವೇ ಜನರನ್ನು ಸೆಳೆಯುತ್ತಾರೆ. ಬಾಷಾ ಸಿಗ್ನೇಚರ್ ಸೇರಿ ಸಿಗರೇಟ್ ಬಾಯಿಗೆ ಹಾಕಿಕೊಳ್ಳೊದು, ಕಡ್ಗ ತಿರುಗಿಸೋದು, ಕೂದಲನ್ನು ಸೈಡ್‌ಗೆ ಮಾಡಿ ಕೊಡುವ ಲುಕ್ ಈಗಲೂ ಬದಲಾಗಿಲ್ಲ. ರಜನಿ ಅವರ ಈ ಲುಕ್ ನೋಡಲೆಂದೆ ಅದೆಷ್ಟೋ ಅಭಿಮಾನಿಗಳು ಥಿಯೇಟರ್‌ಗೆ ಆಗಮಿಸುತ್ತಾರೆ. ರಜನಿ ಮೋಡಿಗೆ ಅಭಿಮಾನಿಗಳು ಅರಾಧ್ಯದೈವದಂತೆ ಈಗಲೂ ಕಾಣುತ್ತಾರೆ.

ಕನ್ನಡದ ಸಹೋದರರ ಸವಾಲ್, ಕುಂಕುಮ ರಕ್ಷೆ , ಗಲಾಟೆ ಸಂಸಾರ, ಕಿಲಾಡಿ ಕಿಟ್ಟು, ಮಾತು ತಪ್ಪದ ಮಗ, ತಪ್ಪಿದ ತಾಳ, ಘರ್ಜನೆ ಸಿನಿಮಾಗಳಲ್ಲಿ ನಟಿಸಿರುವ ರಜನಿ ಕಾಂತ್ ತೆಲುಗಿನ ಅಂತುಲೇನಿ ಕಥಾ, ಚಿಲಕಮ್ಮ ಚಿಪ್ಪಂಡಿ, ಅಮೆಕಥಾ, ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಬಾಲಿವುಡ್‌ನಲ್ಲೂ ಅಭಿನಯಿಸಿರುವ ರಜನಿ ಕಾಂತ್ ಜಾನ್ ಜಾನಿ ಜನಾರ್ಧನ್, ಮಹಾಗುರು, ಅಸ್ಲಿ ಸಕ್ಲಿ, ದೋಸ್ತಿ ದುಷ್ಮನಿ, ಚಾಲ್ ಬಾಜ್ ಚಿತ್ರಗಳನ್ನು ನಟಿಸಿದ್ದಾರೆ. ಜೊತೆಗೆ ಇಂಗ್ಲಿಷ್, ಮಲಯಾಳಂ ಹಾಗೂ ಬೆಂಗಾಳಿ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.

ಇನ್ನು ರಜನಿಕಾಂತ್ ಅಭಿನಯದ ಅಣ್ಣಾತೆ ಚಿತ್ರ ಒಳ್ಳೆ ಕಲೆಕ್ಷನ್ ಮಾಡೋ ಮೂಲಕ ಭಾರಿ ಸದ್ದು ಮಾಡಿತ್ತು. ಈ ವಯಸ್ಸಿನಲ್ಲೂ ರಜನಿಕಾಂತ್ ಸ್ಟೈಲ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ರಜನಿಕಾಂತ್ ಆರೋಗ್ಯದಲ್ಲಿ ಪದೇ ಪದೇ ಸಮಸ್ಯೆಗಳು ಉಂಟಾಗುತ್ತಿದ್ದು, ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಅಭಿಮಾನಗಳು ಕೂಡ ತಲೈವನ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದು, ಮತ್ತಷ್ಟು ಆರೋಗ್ಯವನ್ನು ದೇವರು ತಲೈವಾನಿಗೆ ನೀಡಲಿ ಎಂದು ಹರಸುತ್ತಿದ್ದಾರೆ. ಎನಿವೇ ರಜನಿಕಾಂತ್ ಹುಟ್ಟುಹಬ್ಬಕ್ಕೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಶುಭಾಶಯಗಳು.

More from Filmibeat

English summary
Super Star Rajinikanth turn 71 today fans celebrating his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X