For Quick Alerts
  ALLOW NOTIFICATIONS  
  For Daily Alerts

  ಎದೆ ಬಿಗಿದು ನಿಂತ 'ಜೈಲರ್' ರಜನಿಕಾಂತ್: ಇಂದಿನಿಂದ ಡ್ಯೂಟಿ ಆರಂಭ!

  |

  ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಶೂಟಿಂಗ್ ಸದ್ದಿಲ್ಲದೇ ಶುರುವಾಗಿದೆ. ಹೊಸ ಪೋಸ್ಟರ್ ಸಮೇತ ಈ ವಿಚಾರವನ್ನು ಸನ್ ಪಿಕ್ಚರ್ಸ್ ಸಂಸ್ಥೆ ಘೋಷಿಸಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಈ ಆಕ್ಷನ್ ಎಂಟರ್‌ಟೈನಚಿತ್ರದಲ್ಲಿರ್ ಸಿನಿಮಾ ಮೂಡಿ ಬರ್ತಿದೆ.

  'ಜೈಲರ್' ಚಿತ್ರದಲ್ಲಿ ಐಶ್ವರ್ಯ ರೈ ರಜನಿಕಾಂತ್ ಜೋಡಿಯಾಗಿ ನಟಿಸಲಿದ್ದಾರೆ. ರಮ್ಯಾ ಕೃಷ್ಣ, ಯೋಗಿಬಾಬು, ಪ್ರಿಯಾಂಕಾ ಅರುಣ್ ಮೋಹನ್ ಸೇರಿದಂತೆ ಪ್ರತಿಭಾನ್ವಿತ ಕಲಾವಿದರು ತಾರಾಗಣದಲ್ಲಿದ್ದಾರೆ. ಸ್ಯಾಂಡಲ್‌ವುಡ್ ನಟ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸ್ತಿರೋದು ಬಹಳ ಕುತೂಹಲ ಮೂಡಿಸಿದೆ. ಈ ಹೈವೋಲ್ಟೇಜ್ ಆಕ್ಷನ್ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಖಡಕ್ ಟೈಟಲ್‌ನಿಂದಲೇ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದು, ಸದ್ಯ ಚಿತ್ರೀಕರಣ ಶುರು ಮಾಡಿರುವ ತಂಡ ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಲೆಕ್ಕಾಚಾರದಲ್ಲಿದೆ.

  ಸೂಪರ್‌ಸ್ಟಾರ್ ರಜನಿಕಾಂತ್ ರಾಜ್ಯಪಾಲರಾಗುತ್ತಾರಾ? ತಮಿಳು ನಾಡಿನಲ್ಲೇನಿದು ಸುದ್ದಿ?ಸೂಪರ್‌ಸ್ಟಾರ್ ರಜನಿಕಾಂತ್ ರಾಜ್ಯಪಾಲರಾಗುತ್ತಾರಾ? ತಮಿಳು ನಾಡಿನಲ್ಲೇನಿದು ಸುದ್ದಿ?

  ಚೆನ್ನೈನಲ್ಲಿ ಅದ್ಧೂರಿ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ಶುರು ಮಾಡಲಾಗಿದೆ. ನಂತರ ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಸೋಕೆ ಸಿದ್ಧತೆ ನಡೆದಿದೆ. ಛಾಯಾಗ್ರಾಹಕ ವಿಜಯ್ ಕಾರ್ತಿಕ್ ಕಣ್ಣನ್ ಬಹಳ ರೋಚಕವಾಗಿ ಚಿತ್ರವನ್ನು ಸೆರೆಹಿಡಿಯಲಿದ್ದಾರೆ. ನೆಲ್ಸನ್ ನಿರ್ದೇಶನದ 'ಬೀಸ್ಟ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆದರೂ ತಲೈವಾ ಸಿನಿಮಾ ನಿರ್ದೇಶನದ ಅವಕಾಶ ಕೊಟ್ಟಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಭರ್ಜರಿ ಫೋಟೊಶೂಟ್ ಮಾಡಿ ಪೋಸ್ಟರ್ ರಿಲೀಸ್ ಮಾಡಿದೆ ಟೀಂ.

   'ಜೈಲರ್' ಪೋಸ್ಟರ್ ಸೂಪರ್ ಹಿಟ್

  'ಜೈಲರ್' ಪೋಸ್ಟರ್ ಸೂಪರ್ ಹಿಟ್

  ಸಾಲ್ಟ್ ಅಂಡ್ ಪೆಪ್ಪರ್ ಹೇರ್‌ ಸ್ಟೈಲ್, ಕಣ್ಣಿಗೆ ಸ್ಮಾರ್ಟ್‌ ಗ್ಲಾಸ್ ಹಾಗೂ ಕುತ್ತಿಗೆಯಲ್ಲಿ ಸ್ಟೈಲಿಶ್ ಚೈನ್‌ ಧರಿಸಿ 'ಜೈಲರ್‌' ರಜನಿಕಾಂತ್ ದರ್ಶನ ಕೊಟ್ಟಿದ್ದಾರೆ. ಪೋಸ್ಟರ್ ನೋಡ್ತಿದ್ರೆ ಚಿತ್ರದಲ್ಲಿ ಸೂಪರ್ ಸ್ಟಾರ್ ಇಂಟೆಲಿಜೆಂಟ್ ಕ್ಯಾರೆಕ್ಟರ್ ಪ್ಲೇ ಮಾಡುತ್ತಿರುವುದು ಗೊತ್ತಾಗುತ್ತಿದೆ. ತಲೈವಾ ಇನ್‌ಟೆನ್ಸ್‌ ಲುಕ್ ಪೋಸ್ಟರ್ ಅಭಿಮಾನಿಗಳಿಗೆ ಸಖತ್ ಕಿಕ್‌ ಕೊಡ್ತಿದ್ದು, ಸದ್ಯ ಪೋಸ್ಟರ್ ಅಭಿಮಾನಿಗಳ ಫೋನ್ ವಾಲ್‌ಪೇಪರ್, ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ರಾರಾಜಿಸುತ್ತಿದೆ.

   ಜೈಲಿನಲ್ಲೇ ಸಿನಿಮಾ ಕಥೆ

  ಜೈಲಿನಲ್ಲೇ ಸಿನಿಮಾ ಕಥೆ

  ಟೈಟಲ್‌ಗೆ ತಕ್ಕಂತೆ ಇಡೀ ಚಿತ್ರವನ್ನು ಒಂದು ಜೈಲಿನಲ್ಲೇ ಕಟ್ಟಿಕೊಡುವ ಸಾಧ್ಯತೆಯಿದೆ. ರಜನಿಕಾಂತ್ 'ಜೈಲರ್‌' ಆಗಿ ಕದೀಮರನ್ನು ಬೆಂಡೆತ್ತಲು ಬರ್ತಿದ್ದಾರೆ. ಈ ಹಿಂದೆ 'ಬೀಸ್ಟ್' ಸಿನಿಮಾ ಕಥೆಯನ್ನು ಒಂದೇ ಶಾಪಿಂಗ್ ಮಾಲ್‌ನಲ್ಲಿ ನೆಲ್ಸನ್ ಹೇಳಿದ್ದರು. ಇನ್ನು ಪೋಸ್ಟರ್‌ಗಳ ಹಿನ್ನಲೆಯಲ್ಲೂ ಜೈಲಿನ ಚಿತ್ರಣವನ್ನು ನೋಡಬಹುದು.

   150 ಕೋಟಿ ರೂ. ಸಂಭಾವನೆ?

  150 ಕೋಟಿ ರೂ. ಸಂಭಾವನೆ?

  ಬಹುಕೋಟಿ ವೆಚ್ಚದಲ್ಲಿ ಈ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಚಿತ್ರಕ್ಕಾಗಿ ಸೂಪರ್ ಸ್ಟಾರ್ ಬರೋಬ್ಬರಿ 150 ಕೋಟಿ ರೂ. ಸಂಭಾವನೆ ಪಡೀತಿದ್ದಾರೆ ಅನ್ನುವ ಗುಸು ಗುಸು ಕೇಳಿಬರ್ತಿದೆ. ಇದೇ ನಿಜವಾಗಿದ್ದರೆ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಅನ್ನುವ ಹೆಗ್ಗಳಿಕೆಗೆ ರಜನಿಕಾಂತ್ ಪಾತ್ರರಾಗಲಿದ್ದಾರೆ.

   2023 ಏಪ್ರಿಲ್ 14ಕ್ಕೆ 'ಜೈಲರ್‌' ಎಂಟ್ರಿ

  2023 ಏಪ್ರಿಲ್ 14ಕ್ಕೆ 'ಜೈಲರ್‌' ಎಂಟ್ರಿ

  ಬಿಗ್ ಬಜೆಟ್ ಸಿನಿಮಾಗಳನ್ನು ರಿಲೀಸ್ ಮಾಡೋಕೆ ಒಳ್ಳೆ ವೀಕೆಂಡ್ ಬೇಕು. ಪ್ರತಿವರ್ಷ ಏಪ್ರಿಲ್ 14ಕ್ಕೆ ತಮಿಳು ಪುತ್ತಾಂಡು(ತಮಿಳರ ಹೊಸ ವರ್ಷ) ಸಂಭ್ರಮದಲ್ಲಿ ತಮಿಳಿನ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತವೆ. 'ಜೈಲರ್‌' ಚಿತ್ರವನ್ನು ಕೂಡ ಮುಂದಿನ ವರ್ಷ ಏಪ್ರಿಲ್ 14ಕ್ಕೆ ತೆರೆಗೆ ತರುವ ಪ್ರಯತ್ನ ನಡೀತಿದೆ.

  English summary
  Superstar Rajinikanth Starrer Jailer On Floor From Today. Know More.
  Monday, August 22, 2022, 13:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X