ಕೊರೊನಾ ಭೀತಿಯಲ್ಲೂ ಅಣ್ಣಾತ್ತೆ ಚಿತ್ರೀಕರಣ ಆರಂಭಿಸಿದ ಸೂಪರ್ ಸ್ಟಾರ್
ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದೆ. ಪುನಃ ಲಾಕ್‌ಡೌನ್ ಮಾಡಬೇಕಾ ಬೇಡವಾ ಎಂಬ ಚರ್ಚೆಗಳು ಜೋರಾಗಿದೆ. ಈ ಆತಂಕದ ನಡುವೆಯೂ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಹೊಸ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಅಣ್ಣಾತ್ತೆ ಸಿನಿಮಾದ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಶೂಟಿಂಗ್ ವೇಳೆ ಎಂಟು ಸದಸ್ಯರಿಗೆ ಕೊವಿಡ್ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ ಚಿತ್ರೀಕರಣ ನಿಲ್ಲಿಸಲಾಗಿತ್ತು.
ಇದೀಗ, ಮೂರು ತಿಂಗಳ ಬಳಿಕ ತಲೈವಾ ಮತ್ತೆ ಸೆಟ್‌ಗೆ ಮರಳಿದ್ದಾರೆ. ಚೆನ್ನೈನ ಗೋಕುಲಂ ಸ್ಟುಡಿಯೋದಲ್ಲಿ ಅಣ್ಣಾತ್ತೆ ಶೂಟಿಂಗ್ ಮತ್ತೆ ಪ್ರಾರಂಭವಾಗಿದ್ದು, ಮಂಗಳವಾರ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಜನಿಕಾಂತ್ ಮತ್ತು ಲೆಜೆಂಡ್ ಸರವಣನ್ ಒಟ್ಟಿಗೆ ನಿಂತಿರುವ ಫೋಟೋ ವೈರಲ್ ಆಗಿದೆ. ಇಬ್ಬರು ಆಕಸ್ಮಿಕವಾಗಿ ಗೋಕುಲಂ ಸ್ಟುಡಿಯೋದಲ್ಲಿ ಭೇಟಿ ಮಾಡಿದ್ದು, ಫೋಟೋ ವೈರಲ್ ಆಗಿದೆ.
ಸಿರುತೈ ಶಿವ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಕೀರ್ತಿ ಸುರೇಶ್, ನಯನತಾರ, ಖುಷ್ಬೂ, ಮೀನಾ, ಪ್ರಕಾಶ್ ರಾಜ್ ಸೇರಿದಂತೆ ಹಲವು ನಟಿಸುತ್ತಿದ್ದಾರೆ.
ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮುಗಿಯಬೇಕಿತ್ತು. ಕೊವಿಡ್ ಕಾರಣದಿಂದ ಶೂಟಿಂಗ್ ಮುಂದೂಡಲಾಗಿತ್ತು. ಇದೀಗ, ಪುನಃ ಶೂಟಿಂಗ್ ಪ್ರಾರಂಭವಾಗಿದೆ. ಸದ್ಯ ಚಿತ್ರತಂಡ ಘೋಷಣೆ ಮಾಡಿರುವ ಪ್ರಕಾರ ನವೆಂಬರ್ 5 ರಂದು ಅಣ್ಣಾತ್ತೆ ತೆರೆಗೆ ಬರಲಿದೆ.


Click it and Unblock the Notifications











