ವಿಶ್ವ ಚೆಸ್ ಚಾಂಪಿಯನ್‌ಗೆ ಸರ್ಪ್ರೈಸ್ ನೀಡಿದ ಸೂಪರ್ ಸ್ಟಾರ್ ರಜಿನಿಕಾಂತ್...!

ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದವರು ಡಿ.ಗುಕೇಶ್. ಕೇವಲ 18ರ ಪ್ರಾಯದಲ್ಲಿಯೇ ಚೀನಾದ ಡಿಂಗ್ ಲಿರೇನ್ ವಿರುದ್ಧ ಗೆದ್ದು ದಾಖಲೆಯನ್ನು ಬರೆದ ಡಿ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಶಿಪ್‌ ಗೆದ್ದ ಅತ್ಯಂತ ಕಿರಿಯ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾದವರು. ಇಷ್ಟೇ ಅಲ್ಲ ಐದು ಬಾರಿ ವಿಶ್ವ ಚಾಂಪಿಯನ್ ಆದ ಆನಂದ್ ಅವರ ನಂತರ ಚೆಸ್ ಚಾಂಪಿಯನ್ ಶಿಪ್ ಗೆದ್ದ ಎರಡನೇ ಭಾರತೀಯ ಕೂಡ ಹೌದು.

ಇಂಥಾ ಡಿ.ಗುಕೇಶ್ ಅವರಿಗೆ ಅನೇಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇನ್ನು ಡಿ.ಗುಕೇಶ್ ಅವರ ಜನ್ಮಸ್ಥಾನ ಚೆನ್ನೈ. ಈ ಹಿನ್ನೆಲೆ ತಮಿಳು ಚಿತ್ರರಂಗದ ಅನೇಕ ತಾರೆಯರು ಡಿ.ಗುಕೇಶ್ ಅವರನ್ನು ಭೇಟಿ ಮಾಡುತ್ತಿದ್ಧಾರೆ. ಅಭಿನಂದನೆ ಸಲ್ಲಿಸುತ್ತಿದ್ದಾರೆ. ಬೆನ್ನು ತಟ್ಟಿ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಆ ಪೈಕಿ ಸೂಪರ್ ಸ್ಟಾರ್ ರಜಿನಿಕಾಂತ್ ಕೂಡ ಒಬ್ಬರು.

Superstar Rajinikanth Stuns World Chess Champion D Gukesh With a Special Gift

ಹೌದು, ಭಾರತದ ಸೂಪರ್ ಸ್ಟಾರ್ ರಜಿನಿಕಾಂತ್ ಡಿ.ಗುಕೇಶ್ ಅವರನ್ನು ಮನೆಗೆ ಕರೆದು ಸನ್ಮಾನ್ ಮಾಡಿದ್ದಾರೆ. ಕೆಲ ಹೊತ್ತು ಕಾಲವನ್ನು ಕಳೆದಿದ್ದಾರೆ. ಪರಮಾನಂದ ಆಧ್ಯಾತ್ಮ ಪರಮಹಂಸ ಯೋಗಾನಂದರ ಪುಸ್ತಕವೊಂದನ್ನು ಉಡುಗೊರೆಯನ್ನಾಗಿಯೂ ನೀಡಿದ್ದಾರೆ.

ಸದ್ಯ ಈ ಆತ್ಮೀಯ ಮತ್ತು ಮರೆಯಲಾಗದ ಕ್ಷಣಗಳನ್ನು ಡಿ.ಗುಕೇಶ್ ತಮ್ಮ 'ಎಕ್ಸ್‌'ನಲ್ಲಿ ಹಂಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜಿನಿಕಾಂತ್ ಸರ್, ನಿಮ್ಮ ಆತ್ಮೀಯ ಹಾರೈಕೆಗಳು ಮತ್ತು ನಿಮ್ಮ ಜ್ಞಾನವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ರಜಿನಿಕಾಂತ್ ಅವರ ಜೊತೆ ಡಿ.ಗುಕೇಶ್ ತೆಗೆಸಿಕೊಂಡ ಈ ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಂದ್ಹಾಗೇ ಕೇವಲ ರಜಿನಿಕಾಂತ್ ಮಾತ್ರವಲ್ಲ ಶಿವಕಾರ್ತಿಕೆಯನ್ ಕೂಡ ಡಿ.ಗುಕೇಶ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಸನ್ಮಾನ ಮಾಡಿದ್ದಾರೆ. ದುಬಾರಿ ವಾಚ್‌ನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇನ್ನುಳಿದಂತೆ 2006 ಮೇ 29ರಂದು ಚೆನ್ನೈನಲ್ಲಿ ಜನಿಸಿದ ಡಿ.ಗುಕೇಶ್,ತಮ್ಮ ಏಳನೇ ವಯಸ್ಸಿನಲ್ಲಿ ಚದುರಂಗದ ಮನೆಯಲ್ಲಿರುವ ಕಪ್ಪು-ಬಿಳುಪು ಕೋಣೆಗಳತ್ತ ಆಕರ್ಷಿತರಾದರು.09ರ ಪ್ರಾಯದಲ್ಲಿ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್‌ ಗೆದ್ದರು. ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ವೇದಿಕೆಯಲ್ಲಿ ಮಿಂಚಿದರು. ಚೆಸ್ ಗ್ರ್ಯಾಂಡ್ ಮಾಸ್ಟರ್ ಆದರು. 2019ರ ಜನವರಿ 15ರಂದು ದೆಹಲಿಯಲ್ಲಿ ನಡೆದ ಅಂತರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ಓಪನ್‌ನಲ್ಲಿ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಬಾಚಿಕೊಂಡರು. ಈ ಮೂಲಕ ಈ ಹಿರಿಮೆಗೆ ಪಾತ್ರವಾದ ಮೂರನೇ ಅತ್ಯಂತ ಕಿರಿಯ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಡಿ.ಗುಕೇಶ್ ಪಾತ್ರರಾದರು. ಮುಂದಿನ 16 ತಿಂಗಳ ಅವಧಿಯಲ್ಲಿ 13 ದೇಶಗಳಿಗೆ ಪ್ರಯಾಣಿಸಿದ ಡಿ.ಗುಕೇಶ್ 30 ಪಂದ್ಯಾವಳಿಗಳಲ್ಲಿ 276 ಆಟಗಳಲ್ಲಿ ಆಡಿ ಮಿಂಚಿದರು. ಇನ್ನು ಇವರ ತಂದೆಯ ಹೆಸರು ಕೂಡ ರಜನಿಕಾಂತ್ ಆಗಿದ್ದು ಕಿವಿ-ಮೂಗು ಮತ್ತು ಗಂಟಲು ಶಸ್ತ್ರ ಚಿಕಿತ್ಸಕರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಾಯಿ ಪದ್ಮಾ ಜೀವಶಾಸ್ತ್ರಜ್ಞರಾಗಿದ್ಧಾರೆ.

More from Filmibeat

Read more about: rajinikanth sports filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X