ಮೊಮ್ಮಗನ ಜೊತೆ ಶಾಲೆಗೆ ಹೋದ ಸೂಪರ್ ಸ್ಟಾರ್ ರಜನಿಕಾಂತ್

'ಜೈಲರ್' ಸಿನಿಮಾ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಸದ್ಯ 'ವೆಟ್ಟೆಯಾನ್' ಸಿನಿಮಾದಲ್ಲಿ ತಲೈವಾ ನಟಿಸಿದ್ದು ನವೆಂಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದಲ್ಲಿ ಸದ್ಯಕ್ಕೆ ರಜನಿಕಾಂತ್ ಬಣ್ಣ ಹಚ್ಚಿದ್ದಾರೆ.

ಚಿತ್ರವೊಂದಕ್ಕೆ ರಜನಿಕಾಂತ್ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ ಎನ್ನುವ ಅಂದಾಜಿದೆ. ವಯಸ್ಸು 70 ದಾಟಿದ್ರು ಇವತ್ತಿಗೂ ಹೊಸ ನಟರಿಗೂ ಪೈಪೋಟಿ ಕೊಡುತ್ತಿದ್ದಾರೆ. ತಲೈವಾ ಬರೀ ಸಿನಿಮಾಗಳಿಂದ ಮಾತ್ರವಲ್ಲ. ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗಿದ್ದಾರೆ. ಸಹಾಯಗುಣದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ.

Superstar Rajinikanth takes his grandson to school see photos

ನಾಡಿಗೆ ರಾಜನಾದರೂ ತಾಯಿಗೆ ಮಗ ಎನ್ನುವ ಮಾತಿನಂತೆ ಏನೇ ಸೂಪರ್ ಸ್ಟಾರ್ ಆದರೂ ರಜನಿಕಾಂತ್ ಫ್ಯಾಮಿಲಿಮ್ಯಾನ್. ಬೆಸ್ಟ್‌ಫಾದರ್, ಎಂದು ಇಬ್ಬರು ಮಕ್ಕಳು ಆಗಾಗ್ಗೆ ಹೇಳುತ್ತಿರುತ್ತಾರೆ. ಇದೀಗ ಪುತ್ರಿ ಸೌಂದರ್ಯ ರಜನಿಕಾಂತ್ ಮತ್ತೊಮ್ಮೆ ಆ ಮಾತನ್ನು ಪುನರಾವರ್ತಿಸಿದ್ದಾರೆ.

ಮೊಮ್ಮಗ ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದಿದ್ದಕ್ಕೆ ರಜನಿಕಾಂತ್ ತಾವೇ ತಾಲೆಗೆ ಕರೆದುಕೊಂಡು ಹೋಗಿ ಬಿಟ್ಟುಬಂದಿದ್ದಾರೆ. ಈ ಬಗ್ಗೆ ಸೌಂದರ್ಯ ಫೋಟೊ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

"ಇವತ್ತು ನನ್ನ ಮಗ ಶಾಲೆ ಹೋಗಲ್ಲ ಎಂದು ಹಠ ಹಿಡಿದ. ಅವನ ಸೂಪರ್ ಹೀರೊ ತಾತ ಖುದ್ದಾಗಿ ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದರು. ತೆರೆಮೇಲೆ ಆಗಿರಲಿ, ತೆರೆ ಹಿಂದೆ ಆಗಿರಲಿ ಎಲ್ಲಾ ರೋಲ್ ಮಾಡುವುದರಲ್ಲಿ ನೀವು ಬೆಸ್ಟ್ ಪ್ರೀತಿಯ ಅಪ್ಪ" ಎಂದು ಬರೆದು ಬೆಸ್ಟ್ ಗ್ರ್ಯಾಂಡ ಫಾದರ್, ಬೆಸ್ಟ್ ಫಾದರ್, ಜಸ್ಟ್ ದಿ ಬೆಸ್ಟ್ ಎಂದು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.

ಸೌಂದರ್ಯ ರಜನಿಕಾಂತ್ ಪೋಸ್ಟ್ ವೈರಲ್ ಆಗುತ್ತಿದೆ. ಮೊಮ್ಮಗನ ಜೊತೆ ತಲೈವಾ ಶಾಲೆಯ ಕ್ಲಾಸ್‌ರೂಂವರೆಗೂ ಹೋಗಿದ್ದಾರೆ. ಅಲ್ಲಿದ್ದ ಬೇರೆ ಮಕ್ಕಳು ಸೂಪರ್ ಸ್ಟಾರ್‌ನ ನೋಡಿ ಥ್ರಿಲ್ಲಾಗಿದ್ದಾರೆ. ಮೊಮ್ಮಗನ ಸಹಪಾಠಿಗಳು ತಲೈವಾನ ನೋಡಿ ಹುಬ್ಬೇರಿಸಿರುವುದನ್ನು ಫೋಟೊದಲ್ಲಿ ನೋಡಬಹುದು.

ಜ್ಞಾನವೇಲ್ ನಿರ್ದೇಶನಸ 'ವೆಟ್ಟೆಯಾನ್' ಅಕ್ಟೋಬರ್ 11ಕ್ಕೆ ರಿಲೀಸ್ ಎಂದು ಇತ್ತೀಚೆಗೆ ರಜನಿಕಾಂತ್ ಹೇಳಿದ್ದರು. ಆದರೆ ಕಾರಣಾಂತರಗಳಿಂದ ತಡವಾಗುತ್ತದೆ ಎನ್ನಲಾಗ್ತಿದೆ. ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಬಂಡವಾಳ ಹೂಡುತ್ತಿದೆ.

ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ 'ಕೂಲಿ' ಸಿನಿಮಾ ನಿರ್ಮಾಣವಾಗಲಿದೆ. ಅನಿರುದ್ಧ್ ರವಿಚಂದರ್ ಸಂಗೀತ ಈ ಚಿತ್ರಕ್ಕಿದೆ. ಮುಂದಿನ ವರ್ಷ ಈ ಆಕ್ಷನ್ ಎಂಟರ್‌ಟೈನರ್ ತೆರೆಗೆ ಬರಲಿದೆ.

More from Filmibeat

English summary
Rajinikanth surprisingly visited his grandson's school;
Read more about: rajinikanth kollywood tamil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X