ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜೊತೆಗೆ ಜೈಲರ್ ವೀಕ್ಷಿಸಲಿರುವ ನಟ ರಜನಿಕಾಂತ್

ಜೈಲರ್ ಬಿಡುಗಡೆಯಾಗಿ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ ಹಿಮಾಲಯ ಪ್ರವಾಸ ಕೈಗೊಂಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ವಾಪಸ್ ಬಂದಿದ್ದಾರೆ. ಕೇರಳದಲ್ಲಿ ಸಿಎಂ ಪಿಣರಾಯಿ ವಿಜಯನ್ ಜೈಲರ್ ವೀಕ್ಷಿಸಿದ್ದರು. ಇದಾದ ಬೆನ್ನಲ್ಲೇ ಶುಕ್ರವಾರ ರಜನಿಕಾಂತ್ ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋವನ್ನು ತಲುಪಿದ ರಜನಿಕಾಂತ್, ಹಿರಿಯ ನಟ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಗರದಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ತಮ್ಮ ಜೈಲರ್ ಚಲನಚಿತ್ರವನ್ನು ವೀಕ್ಷಿಸುವ ತಮ್ಮ ಪ್ಲ್ಯಾನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ, ಇದರೊಂದಿಗೆ ತಮ್ಮ ಚಿತ್ರದ ಯಶಸ್ಸಿನ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

Superstar Rajinikanth to watch Jailer with CM Yogi Adityanath

ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಲಿರುವ ರಜನಿಕಾಂತ್

ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗಿನ ಭೇಟಿಯನ್ನು ಕುರಿತು ಮಾತನಾಡಿದ ರಜನಿಕಾಂತ್, "ಹೌದು, ನಾನು ಅವರೊಂದಿಗೆ ನನ್ನ ಜೈಲರ್ ಚಲನಚಿತ್ರವನ್ನು ವೀಕ್ಷಿಸಲಿದ್ದೇನೆ" ಎಂದು ಹೇಳಿದ್ದಾರೆ. ಜೈಲರ್‌ಗೆ ಸಿಗುತ್ತಿರುವ ಭಾರೀ ಯಶಸ್ಸಿಗೆ ಪ್ರತಿಕ್ರಿಯಿಸಿ "ಸಬ್ ಭಗವಾನ್ ಕಿ ದುವಾ ಹೈ (ಎಲ್ಲಾ ದೇವರ ಆಶೀರ್ವಾದ)" ಎಂದಿದ್ದಾರೆ. ರಜನಿಕಾಂತ್ ಲಕ್ನೋದ ಕೆಲವು ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

ಜಾರ್ಖಂಡ್‌ನಲ್ಲಿ ರಜನಿಕಾಂತ್

ಈ ಹಿಂದೆ ರಜನಿಕಾಂತ್ ಜಾರ್ಖಂಡ್‌ನ ರಾಂಚಿಗೆ ಭೇಟಿ ನೀಡಿದ್ದರು. ಶುಕ್ರವಾರ ರಾಜ್ಯದ ಚಿನ್ನಮಸ್ತ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದರು. ಅವರು ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಚಿನ್ನಮಸ್ತ ದೇವಸ್ಥಾನಕ್ಕೆ ಹೋಗಿದ್ದೆ ತುಂಬಾ ಚೆನ್ನಾಗಿದೆ. ಹಲವು ವರ್ಷಗಳಿಂದ ಈ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದು ಯೋಚಿಸಿದ್ದೆ, ಈ ಬಾರಿ ಅಲ್ಲಿಗೆ ಹೋಗಿದ್ದೆ, ಅದು ಅದ್ಭುತವಾಗಿದೆ. ಇದು ಮೂರನೇ ಬಾರಿಗೆ ನಾನು ಇಲ್ಲಿಗೆ ಬಂದಿದ್ದು, ಪ್ರತಿ ವರ್ಷ ಬರುತ್ತೇನೆ" ಎಂದಿದ್ದಾರೆ.

Superstar Rajinikanth to watch Jailer with CM Yogi Adityanath

ಬಳಿಕ ರಾಂಚಿಯ ಯಗೋಡಾ ಆಶ್ರಮದಲ್ಲಿ ಒಂದು ಗಂಟೆ ಧ್ಯಾನ ಮಾಡಿದರು. ಇದಾದ ನಂತರ ಅವರು ಜಾರ್ಖಂಡ್ ರಾಜ್ಯಪಾಲ ಸಿ ಪಿ ರಾಧಾಕೃಷ್ಣನ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿದ್ದರು. ಇದಕ್ಕೂ ಮೊದಲು ರಜನಿಕಾಂತ್ ತಮ್ಮ ಚಿತ್ರ ಬಿಡುಗಡೆಯಾದ ನಂತರ ಬದರಿನಾಥ್ ಧಾಮಕ್ಕೆ ಭೇಟಿ ನೀಡಿದ್ದರು.

ಜೈಲರ್ ಬಿಡುಗಡೆ ಮುಂಚೆ ರಜನಿಕಾಂತ್ ಹಿಮಾಲಯ ಪ್ರವಾಸಕ್ಕೆ ತೆರಳಿದ್ದರು. ಅವರು ಇತ್ತೀಚೆಗೆ ಉತ್ತರಾಖಂಡದ ಬದರಿನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು ಮತ್ತು ಪಾಂಡವ ಖೋಲಿಯ ಗುಹೆಯಲ್ಲಿ ಧ್ಯಾನ ಮಾಡಿದ್ದರು.

ಜೈಲರ್

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ರಮ್ಯಾ ಕೃಷ್ಣನ್, ತಮನ್ನಾ ಭಾಟಿಯಾ, ವಿನಾಯಕನ್ ಮತ್ತು ಹಾಸ್ಯನಟ ಯೋಗಿ ಬಾಬು ನಟಿಸಿದ್ದಾರೆ. ನಟ ಶಿವರಾಜ್ ಕುಮಾರ್, ಮೋಹನ್ ಲಾಲ್ ಮತ್ತು ಜಾಕಿ ಶ್ರಾಫ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.

ಜೈಲರ್ ಚಿತ್ರ ಮೊದಲ ವಾರವನ್ನು ಯಶಸ್ವಿಯಾಗಿ ಪೂರೈಸಿ ಸದ್ಯ ಎರಡನೇ ವಾರಕ್ಕೆ ಕಾಲಿಟ್ಟಿದೆ. ಆಗಸ್ಟ್ 10 ರಂದು ಬಿಡುಗಡೆಗೊಂಡ ಈ ಚಿತ್ರ ಮೊದಲ ದಿನ ದಾಖಲೆಯ ಆರಂಭವನ್ನು ಪಡೆದುಕೊಂಡು ಈಗಾಗಲೇ 400 ಕೋಟಿ ಕ್ಲಬ್ ಸೇರಿದೆ. ಫಸ್ಟ್ ಶೋ ಮುಗಿಯುತ್ತಿದ್ದಂತೆಯೇ ಹಿಟ್ ಎನಿಸಿಕೊಂಡ ಜೈಲರ್ ಸದ್ಯ ತನ್ನ 7 ದಿನಗಳ ಓಟವನ್ನು ಯಶಸ್ವಿಯಾಗಿ ಪೂರೈಸಿ ವಿಶ್ವದಾದ್ಯಂತ ಒಟ್ಟು 425 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಜೈಲರ್ ತಮಿಳಿನಾಡಿನಲ್ಲಿ ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿಯೂ ಸಹ ಭರ್ಜರಿ ಪ್ರದರ್ಶನ ಕಾಣುತ್ತಿದೆ.

More from Filmibeat

English summary
Rajinikanth to watch Jailer with CM Yogi Adityanath.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X